ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಿ

ಧಾರವಾಡ ಏ5:ಎಲ್ಲರೂ ಕಡ್ಡಾಯವಾಗಿ ಕೊವೀಡ್ ವ್ಯಾಕ್ಸಿನ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಜಾಗೃತರಾಗಲು ಸಾರ್ವಜನಿಕರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಡಾ. ಉಮೇಶ ಹಳ್ಳಿಕೇರಿ ವಿನಂತಿಸಿದರು.
ಅವರು ಭಾರತೀಯ ರೆಡ್ ಕ್ರಾಸ ಸಂಸ್ಥೆ,ಧಾರವಾಡ ಘಟಕ ಮತ್ತು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ ಅಶೋಷಿಯೇಷನ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ರೆಡ್ ಕ್ರಾಸ ಸಂಸ್ಥೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಕೋವಿಡ್ ವ್ಯಾಕ್ಸಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಜ್ಯೋತಿ ಮಾತನಾಡಿ ಸರಕಾರದ ಈ ಯೋಜನೆ ಎಲ್ಲ ಜನರಿಗೂ ಅನುಕೂಲವಾಗಿದೆ.ಹಾಗಾಗಿ ಎಲ್ಲರು ವ್ಯಾಕ್ಸಿನ ಪಡೆದುಕೊಳ್ಳಿ ಎಂದು ವಿನಂತಿಯನ್ನು ಮಾಡಿಕೊಂಡರು.ಈ ಸಂದರ್ಭದಲ್ಲಿ ಸುಮಾರು 30 ಇಂಜಿನಿಯರ್ ಅವರಿಗೆ ಲಸಿಕೆ ನೀಡಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಮಾರ್ತಾಂಡಪ್ಪ ಎಮ್ ಕತ್ತಿ, ಮಹಾಂತೇಶ ವೀರಾಪೂರ, ಹಾಗೂ ಎಸಿಸಿಇ ಅಧ್ಯಕ್ಷರಾದ ಸುನೀಲ ಬಾಗೇವಾಡಿ, ಸಂಗೀತಾ ಬಾಗೇವಾಡಿ, ಸಂಜಯ ಗಬ್ಬೂರ, ದಾಮೋದರ ಹೆಗಡೆ, ದೀಪಕ ಕುಲಕರ್ಣಿ, ಅಸ್ಲಾಮ್ ಜಹಾನ್ ಅಬ್ಬಿಹಾಳ,ಬಸವರಾಜ ಹಿರೇಮಠ ಹಾಗೂ ಇಂಜಿನಿಯರ್ ಸಂಸ್ಥೆಯ ಸದಸ್ಯರು ಮತ್ತು ರಡ್ ಕ್ರಾಸ್ ಸಂಸ್ಥೆಯ ಸದಸ್ಯರು ಹಾಜರಿದ್ದರು.