ಲಸಿಕೆ ಪಡೆದವರಿಗೆ ಪಡಿತರ ಮಾದರಿಯಾದ ಗ್ರಾಮ ಪಂಚಾಯಿತಿ

ಗದಗ, ಜೂ. ೬- ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಿ?ಗೆಗೆ ಮಾತ್ರ ಪಡಿತರ ಧಾನ್ಯ ವಿತರಣೆ ಎನ್ನುವ ಮೂಲಕ ಇಲ್ಲೊಂದು ಗ್ರಾಮ ಪಂಚಾಯಿತಿ ಇತರರಿಗೆ ಮಾದರಿಯಾಗಿದೆ.
ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯಿತಿ ಈ ರೀತಿಯ ಲಸಿಕೆ ನೀಡಿಕೆ ಜಾಗೃತಿ ಮೆಚ್ಚುಗೆ ಪಡೆದಿದೆ.ಲಸಿಕೆ ಪಡೆಯದಿದ್ದರೆ ಪಡಿತರ ಇಲ್ಲ ಎನ್ನುವ ಭಯದಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಊಹಾಪೋಹಗಳು, ವದಂತಿ, ಆತಂಕಗಳಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ.ಈ ಬಗ್ಗೆ ಜಾಗೃತಿಮೂಡಿಸಲು ಹಲವು ಕಡೆ ಹರಸಾಹಸ ಮಾಡಲಾಗುತ್ತಿದೆ.
ಲಸಿಕೆ ಪಡೆದವರಿಗೆ ಕೆಲವೆಡೆ ಹಣ ನೀಡುವ ಬಂಪರ್ ಆಫರ್? ಇದೆ ನೀಡಲಾಗಿದೆ.ಹೀಗಿದ್ದರೂ ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ.ಹೀಗಾಗಿ ಲಸಿಕೆ ಪಡೆದ ಮಂದಿಗೆ ಮಾತ್ರ ಪಡಿತರ ಎನ್ನುತ್ತಿದ್ದಂತೆ ಜನರು ಅನಿವಾರ್ಯವಾಗಿ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆಯ ಪೆಟ್ಟು ಎಂಬ ಗಾದೆ ಮಾತೇ ಇಲ್ಲವೇ. ಮೊದಲು ಸಮಾಧಾನದಿಂದ, ನಯವಾಗಿ ಹೇಳಿದಾಗ ಜನರು ಕೇಳಲಿಲ್ಲವೆಂದರೆ ದೊಣ್ಣೆಯ ಪೆಟ್ಟನ್ನೇ ನೀಡಬೇಕಾಗುತ್ತೆ. ಹೀಗೆ ಹೇಳಿದಾಗ ಜನರು ಭಯದಿಂದಾದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು ಸಣ್ಣ ವಿಶ್ವಾಸ ಅಷ್ಟೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ

ಜನರಿಗೆ ಒತ್ತಾಯ ಮಾಡಿ, ಬಗೆ-ಬಗೆಯ ಆಸೆಗಳನ್ನು ತೋರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಆದರೆ ಈ ಗ್ರಾಮ ಪಂಚಾಯಿತಿ ಸರಳ ಉಪಾಯ ಮಾಡಿದೆ. ಹೀಗಾಗಿ ಜನರು ರೇಷನಗ ಪಡೆಯಲು ಮುಂದಾಗಿದ್ದಾರೆ

ಲಸಿಕೆ ಹಾಕಿಸಿಕೊಳ್ಳದಿದ್ದರೆ ಮುಂದೆ ಊಟಕ್ಕೆ ಗತಿಯೇನು ಎಂಬ ಭಯದಿಂದ ಈಗ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೊತಬಾಳ ಗ್ರಾಮ ಪಂಚಾಯಿತಿ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಜನರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವದಿಲ್ಲವೋ ಅಂತಹ ಕುಟುಂಬಗಳಿಗೆ ಪಡಿತರ ಇಲ್ಲ ಎಂಬ ಆದೇಶ ಹೊರಡಿಸಲಾಗಿದೆ.

ಸರ್ವಾನುಮತದ ನಿರ್ಣಯ:

ಕೊರೋನಾ ಹಿನ್ನೆಲೆ ನಡೆದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ.

ಲಸಿಕೆ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆ ಪತ್ರ ನೀಡಲಾಗುತ್ತದೆ ಪಡಿತರ ಚೀಟಿದಾರರು ಪಡಿತರ ಕಾರ್ಡ್??ನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು ಅಂತವರಿಗಡ ಮಾತ್ರ ಪಡಿತರ ಹಂಚಿಕೆ ಮಾಡಲಾಗುತ್ತದೆ ಎಂದು ಕಟ್ಟುನಿಟ್ಟಿನ ಫಾರ್ಮಾನು ಹೊರಡಿಸಲಾಗಿದೆ. ಈ ಬೆನ್ನಲ್ಲೇ ೧೦೦ ಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ