ಲಸಿಕೆ ನೀಡುವ ಮೋದಿ ಕಾರ್ಯಕ್ಕೆ ವಿಶ್ವವೇ ವಿಸ್ಮಯ

ಮೈಸೂರು: ಸೆ.17:- ಕೊರೋನಾದಂತಹ ಸಂದರ್ಭ ಜಗತ್ತೇ ಅಚ್ಚರಿ ಪಡುವಷ್ಟು ದೇಶದ ಜನರಿಗೆ ಉಚಿತ ಕೊರೋನಾ ಲಸಿಕೆ ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿಸ್ಮಯವನ್ನೇ ಮೂಡಿಸಿದೆ ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಹೇಳಿದರು.
ಚಾಮುಂಡಿಪುರಂನಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ನಡೆದ ಪ್ರಧಾನಿ ಜನ್ಮದಿನಾಚರಣೆಯಲ್ಲಿ ಸಾರ್ವಜನಿಕರಿಗೆ ಚಹಾ ವಿತರಿಸಿ ಮಾತನಾಡಿದ ಅವರು ಮೋದಿಯವರು ಪ್ರಧಾನಿ ಆದ ಬಳಿಕ ದೇಶದೆಲ್ಲೆಡೆ ಅಭಿವೃದ್ಧಿಪರ್ವವೇನಡೆದಿದೆ.ಮುಖ್ಯವಾಗಿ ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿಸಿದ್ದು, 370ನೇ ವಿಧಿ ತೆಗೆದು ಹಾಕಿರುವುದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಇವೆಲ್ಲವೂ ಜನರ ಬಹು ದಿನದ ಕನಸಾಗಿತ್ತು. ಅದನ್ನು ಮೋದಿಯವರು ನನ್ನಾಗಿಸಿದ್ದಾರೆ ಎಂದರು.
ಪ್ರಧಾನಿನರೇಂದ್ರ ಮೋದಿಓರ್ವಸಂತೆ, ಮೋದಿ ಪ್ರಧಾನಿ ಆಗಿರುವುದುಬಹುಜನರ ತಪ್ಪಸ್ಸೆಂದು ಭಾವಿಸಿದ್ದೇನೆ. ಪ್ರಧಾನಿಯಾದ ಮೇಲೆ ಬದಲಾವಣೆಗಳ ಮಹಾಪೂರವೇ ನಡೆದಿದೆ. ಕೇಂದ್ರ ಸರ್ಕಾರ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ.
ಕಾಂಗ್ರೆಸ್ ಈ ದೇಶದ ಬಡ ಜನರನ್ನು ಕೇವಲ ಒಟ್ ಬ್ಯಾಂಕ್ ಮಾಡಿಕೊಂಡು ಬಂದಿದೆ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿಯವರೆಗೂ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ನೀಡಿದ್ದಾರೆ. ಶಿಕ್ಷಣ ಆರೋಗ್ಯ ಕೈಗಾರಿಕೆ ಮತ್ತು ಉದ್ಯೋಗ ಹೀಗೆ ಎಲ್ಲಾ ರಂಗದಲ್ಲೂ ಬದಲಾವಣೆಗೆ ನಾಂದಿ ಹಾಡಿದ್ದಾರೆ. ನೂರಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮಹಿಳೆಯರ ಸಬಲೀಕರಣ ರೈತರ ಮೇಲಿನ ಕಾಳಜಿ ಶ್ರಮಿಕ ವರ್ಗದ ಏಳಿಗೆ ಕಾರ್ಮಿಕ ಕಲ್ಯಾಣ ಹೀಗೆ ಮನೆಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಮೋದಿ ಅವರದು ಎಂದು ಹೇಳಿದರು.
ದಿನದ 24 ಗಂಟೆಯಲ್ಲಿ 18ಗಂಟೆಗಳ ಕಾಲ ನಿರಂತರವಾಗಿ ದೇಶದ ಸೇವೆಯನ್ನು ಮಾಡುತ್ತಿರುವ ಪ್ರಧಾನಿ ಈ ದೇಶಕ್ಕೆ ಕೀರ್ತಿ ಮತ್ತು ಪ್ರತಿಷ್ಠೆಯನ್ನು ತಂದು ಕೊಟ್ಟಿದ್ದಾರೆ .ದೇಶದ ಐಕ್ಯತೆ ಸಮಗ್ರತೆ ಮತ್ತು ಅಖಂಡತೆಯನ್ನು ಕಾಪಾಡುವ ದೃಷ್ಟಿಯಿಂದ ಮೋದಿಯವರ ಶ್ರಮದ ಪ್ರಶಂಸನೀಯವಾದುದು ಎಂದರು.
ಮಾಜಿ ಮಹಾಪೌರರಾದ ಸುನಂದಾ ಪಾಲನೇತ್ರ ಮಾತನಾಡಿ ಮೋದಿ ಅವರು ದೇಶದ ಹಿರಿಮೆ ಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರ ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆ ವಿಶ್ವಮಾನ್ಯತೆ ಪಡೆದಿದೆ. ರೈತರು, ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಬಡ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು, ಜನರ ಮನ ಗೆದ್ದಿದ್ದಾರೆ’ ಎಂದರು.
ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ಮಾತನಾಡಿ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಯುವ ಸಮುದಾಯಕ್ಕೆ ಪೆÇ್ರೀತ್ಸಾಹ ದೊರೆಯುತ್ತಿದೆ. ಆತ್ಮ ನಿರ್ಭರ ಭಾರತ ಸಹ ಉಪಯುಕ್ತ ಯೋಜನೆ’ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ , ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮಹೇಂದ್ರ ಸಿಂಗ್ ಕಾಳಪ್ಪ, ಸುಚೀಂದ್ರ, ರವಿಶಂಕರ್, ರಾಜಣ್ಣ, ಪುರುಷೋತ್ತಮ್ ಹಾಗೂ ಇನ್ನಿತರರು ಹಾಜರಿದ್ದರು.