ಲಸಿಕೆ ನೀಡಿಕೆ ಅಮೆರಿಕ ಹಿಂದಿಕ್ಕಿದ ಭಾರತ


ನವದೆಹಲಿ, ಜೂ.೫-ಕೊರೊನಾ ಸೋಂಕು ತಡೆಗೆ ದಿಟ್ಟ ಹೆಜ್ಜೆಯನ್ನಿಟ್ಟಿರುವ ಕೇಂದ್ರ ಸರ್ಕಾರ, ಒಂದು ಡೋಸ್ ಲಸಿಕೆ ನೀಡಿಕೆಯಲ್ಲಿ ಭಾರತ ಅಮೆರಿಕಗಿಂತ ಮುಂದೆ ಸಾಗಿದೆ.
ದೇಶದಲ್ಲಿ ಲಸಿಕೆ ಅಭಾವ ಉಂಟಾಗಿದ್ದರೂ ಲಸಿಕೆ ವಿರತಣೆಯಲ್ಲಿ ಅಮೆರಿಕಕ್ಕಿಂತ ಮುಂದೆ ಸಾಗಿರುವುದು ಗಮನಾರ್ಹ ಸಂಗತಿ.
ಭಾರತದಲ್ಲಿ ಇದುವರೆಗೆ ೧೭.೨ ಕೋಟ ಜನರಿಗೆ ಒಂದು ಡೋಸ್ ಕೊರೊನಾ ಲಸಿಕೆ ನೀಡಿದ್ದರೆ, ಅಮೆರಿಕದಲ್ಲಿ ಇದುವರೆಗೆ ೧೬.೯ಕೊಟಿ ಕನರಿಗೆ ಮೊದಲ ಡೋಸ್ ನೀಡಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.
ಲಸಿಕೆ ಸರಬರಾಜು ಮತ್ತು ವ್ಯಾಪ್ತಿಯನ್ನು ವೇಗವಾಗಿ ಹೆಚ್ಚಳ ಮಾಡುವ ಕಡೆಗೆ ಕೋವಿಡ್-೧೯ ಲಸಿಕೆಯನ್ನು ಕನಿಷ್ಠ ಒಂದು ಡೋಸ್ ಹಂಚಿಕೆಯಲ್ಲಿ ಭಾರತ ಅಮೆರಿಕವನ್ನು ಹಿಂದಕ್ಕೆ ಹಾಕಿದೆ. ಹೀಗಾಗಿ ಲಸಿಕೆ ಅಭಿಯಾನದಲ್ಲಿ ನಿಧಾನವಾಗಿ ಸ್ಥಿರತೆ ಸಾಧಿಸುತ್ತಿದ್ದೇವೆ ಮತ್ತು ಲಸಿಕೆಯ ವೇಗವನ್ನು ತೀವ್ರಗೊಳಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಲಸಿಕೆ ನೀಡುವ ವೇಗವನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ ಎಂದು ಎನ್‌ಐಟಿಐ ಆರೋಗ್ಯ ಸದಸ್ಯ ಡಾ.ವಿಕೆ.ಕೆಲ್ ಹೇಳಿದರು.
ಭಾರತದಲ್ಲಿ ಶೇ.೬೦ಕ್ಕಿಂತ ಹೆಚ್ಚು ಜನಸಂಖ್ಯೆಯ ಕನಿಷ್ಠ ಶೇ.೪೩ರಷ್ಟು ಕನಿಷ್ಠ ಒಂದು ಡೋಸ್ ಅನ್ನು ೪೫ ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇ.೩೭ರಷ್ಟು ಲಸಿಕೆಗಳ ಮೊದಲ ಡೋಸ್ ಒಳಗೊಂಡಿದೆ.
ಜನಸಂಖ್ಯೆಯ ಶೇಕಡವಾರು ಪ್ರಮಾಣದಲ್ಲಿ ಕನಿಷ್ಠ ಒಂದು ಡೋಸ್ ಅನ್ನು ನೀಡಿದ ಸಂಪೂರ್ಣ ಸಂಖ್ಯೆ ವಿಷಯದಲ್ಲಿ ಭಾರತವು ಅಮೆರಿಕವನ್ನು ಹಿಂದಕ್ಕೆ ಹಾಕಿದೆ. ಆದರೆ ಇದುವರೆಗೆ ಅಮೆರಿಕ ಸಾಧಿಸಿದ ಶೇ.೫೦.೬ಕ್ಕೆ ಹೋಲಿಸಿದರೆ ಭಾರತದ ಶೇ.೧೨.೬ರಷ್ಟು ಜನರಿದ್ದಾರೆ.
ಅಮೆರಿಕ ಸಂಪೂರ್ಣವಾಗಿ ೧೩.೭ ಕೋಟಿ ಜನರಿಗೆ ಲಸಿಕೆ ನೀಡಿದರೆ, ಭಾರತದ ಸಂಖ್ಯೆ ೪.೪ಕೋಟಿ. ಆದರೂ ಅಮೆರಿಕ ತನ್ನ ಲಸಿಕೆ ಅಭಿಯಾನವನ್ನು ಭಾರತ ಆರಂಭಿಸುವ ಒಂದು ತಿಂಗಳು ಮುಂಚಿತವಾಗಿ ಚಾಲನೆ ನೀಡಿತ್ತು. ಜನಸಂಖ್ಯೆಯಲ್ಲಿ ಭಾರತದ ೧೩೮ ಕೋಟಿಗೆ ಹೋಲಿಸಿದರೆ ಅಮೆರಿಕದ ೩೩ ಕೋಟಿಗಿಂತಲೂ ಹೆಚ್ಚಾಗಿದೆ.
ಆದರೆ ಚೀನಾದಲ್ಲಿ ಎಷ್ಟು ಮಂದಿ ಮೊದಲ ಲಸಿಕೆ ಪಡೆದರು ಮತ್ತುಎಷ್ಟು ಮಂದಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ ೭೩.೨ ಕೋಟಿ ಡೋಸ್ ಲಸಿಕೆಗಳನ್ನು ನೀಡಿದೆ.
ಒಟ್ಟಾರೆ ಭಾರತದಲ್ಲಿ ನಿನ್ನೆ ಸಂಜೆಯವರೆಗೂ ಒಟ್ಟು ೨೨.೭ ಕೋಟಿ ಜನರಿಗೆ ಲಸಿಕೆ ನೀಡಿದೆ.