ಲಸಿಕೆ ನೀಡಿಕೆಯಲ್ಲಿ ಚಾಂದೂರಿ ಗ್ರಾ.ಪಂ ರಾಜ್ಯಕ್ಕೆ ಮಾದರಿ

????????????????????????????????????

ಬೀದರ:ಮೇ.30: ದೇಶದಲ್ಲಿ ಕೋವೀಡ್ ಮಹಾಮಾರಿ ರುದ್ರ ತಾಂಡವ ವಾಡುತ್ತಿದ್ದು, ಇದರಿಂದ ನಮ್ಮ ಜನರನ್ನು ರಕ್ಷಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೋವ್ಯಾಕ್ಸಿನ್ ಮತ್ತು ಕೋವೀಶಿಲ್ಡ್ ಎನ್ನುವ ಲಸಿಕೆಗಳು ತಯ್ಯಾರಿಸುವಲ್ಲಿ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಇಂದು ದೇಶಾದಾದ್ಯಂತ ಈ ಲಸಿಕೆಗಳು ಸಾರ್ವಜನಿಕರಿಗೆ ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಸಂಜೀವಿನಿಯಾಗಿವೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿ, ಮೋದಿಯವರು ಮೊದಲ ಹಂತದಲ್ಲಿ ಈ ಲಸಿಕೆಗಳು ದೇಶದಲ್ಲಿರುವ ಅರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹೀಗೆ ಕೋವೀಡನಿಂದ ಜನರನ್ನು ರಕ್ಷಿಸಲು ತನ್ನ ಪ್ರಾಣವನ್ನೆ ಮುಡಿಪಾಗಿಟ್ಟಿರುವ ಇವರುಗಳನ್ನು ಮತ್ತು 45 ವಯಸ್ಸಿನಿಂದ ಹೆಚ್ಚಿನ ವಯಸ್ಸಿನವರು ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ ವಿರೋಧ ಪಕ್ಷದವರ ವಿರೋಧದ ನಡುವೆಯೂ ನಮ್ಮ ಜಿಲ್ಲೆಯ ಔರಾದ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯತನ ಚಾಂದೋರಿ ಗ್ರಾಮದಲ್ಲಿ ಶೇ. 98%, 45ಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಲಸಿಕೆಗಳು ಪಡೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇದು ಸಾಧ್ಯವಾಗಿದ್ದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ದೀಪಕ ಪಾಟೀಲ್ ಚಾಂದೋರಿ ಹಾಗೂ ಇತರೆ ಎಲ್ಲಾ ಸದಸ್ಯರು, ಸಂಬಂಧಿತ ಪ್ರಾಥಮಿಕ ಆರೋಗ್ಯ ಕೇಂದ್ರ ತೋರಣಾ ವೈದ್ಯಾಧಿಕಾರಿ ಡಾ. ನಿತಿನ್ ಬೀರಾದರ ಹಾಗೂ ಎಲ್ಲಾ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. ಇವರೆಲ್ಲರಿಗೂ ನಾನು ತುಂಬ ಹೃದಯದಿಂದ ಅಭಿನಂದಿಸುವುದಾಗಿ ಖೂಬಾ ಹೇಳಿದ್ದಾರೆ.

ಕೋವೀಡ್ 2ನೇ ಅಲೆಯ ಸಂದರ್ಭದಲ್ಲಿ ಈ ಗ್ರಾಮವು ಇಂತಹ ಒಂದು ಸಾಧನೆ ಮಾಡಿ, ಇತರೆ ಎಲ್ಲಾ ಗ್ರಾಮಗಳ ಜನರಿಗೂ ಲಸಿಕೆ ಹಾಕಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ, ನಿಜಕ್ಕೂ ಇವರ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.

ಇವಾಗ ಕೇಂದ್ರ ಸರ್ಕಾರ 18 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ತೆಗೆದುಕೊಳ್ಳಲು ಅವಕಾಶ ನೀಡಿದೆ. ಆದ್ದರಿಂದ ಅದ್ಯತೆ ಮೇರಗೆ ಈ ಗ್ರಾಮ ಪಂಚಾಯತಗೆ ಕೋವೀಡ್ ಲಸಿಕೆ ಹಾಕಲು ಅವಕಾಶ ನೀಡಬೇಕೆಂದು ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚಿಸುತ್ತಿದ್ದೇನೆ. ಇಂತಹ ಗ್ರಾಮ ಪಂಚಾಯತಗೆ ಪ್ರಥಮಾದ್ಯತೆ ನೀಡುವುದರಿಂದ ಇವರ ಸಾಧನೆಯಿಂದ ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತನವರು, ಪ್ರಾಥಮಿಕ ಅರೋಗ್ಯ ಕೇಂದ್ರದವರು ಇವರಿಂದ ಪ್ರೇರಿತರಾಗಿ ಅವರ ಸೇವೆಯಲ್ಲಿ ವೇಗ ಮತ್ತು ಉತ್ತಮ ಸೇವೆ ನೀಡಬಹುದು. ಆದ್ದರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡುತ್ತಿರುವ ಲಸಿಕೆಗಳು ತೋರಣಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಲಸಿಕೆಗಳು ಪ್ರಥಮಾದ್ಯತೆಯಲ್ಲಿ ಒದಗಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದವರು ಪ್ರಕಟಣೆ ಮೂಲಕ ಹೇಳಿದ್ದಾರೆ.