ಲಸಿಕೆ ತುರ್ತು ಬಳಕೆಗೆ ಹಸಿರು ನಿಶಾನೆ

ಕೋವಿಶೀಲ್ಡ್, ಕೋವಾಕ್ಸಿನ್‌ಗೆ ಡಿಜಿಸಿಐ ಅನುಮತಿ

ನವದೆಹಲಿ, ಜ.೩- ಅಂತೂ ಇಂತೂ ದೇಶದಲ್ಲಿ ಕೊರೋನಾ ಸೋಂಕಿಗೆ ರಾಮಬಾಣ ಸಿಕ್ಕಂತಾಗಿದೆ. ಆಕ್ಸ್‌ಫರ್ಡ್ ಮತ್ರು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ಲಸಿಕೆ, ತುರ್ತು ಬಳಕೆ ಮಾಡಲು ಷರತ್ತಿನೊಂದಿಗೆ ಭಾರತೀಯ ಔಷದ ಮಹಾನಿಯಂತ್ರಣಾಲಯ ಅನುಮತಿ ನೀಡಿದೆ.
ಇದರಿಂದಾಗಿ ಬಹುದಿನಗಳ ಕನಸು ನನಸಾಗಿದ್ದು, ಮಾರಕ ಕೊರೊನಾ ಓಡಿಸುವ ಆಶಾಭಾವ ಮೂಡಿಸಿದೆ.
ಈ ಮೂಲಕ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ಸಿಕ್ಕ ಲಸಿಕೆಗಳು ಇದಾಗಿದ್ದು ಕೊರೊನಾ ಸೋಂಕಿನಿಂದ ನಲುಗಿ ಹೋಗಿರುವ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾ ಝೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ” ಕೋವಿ ಶೀಲ್ಡ್” ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ” ಕೋವಾಕ್ಸಿನ್ ಲಸಿಕೆ ದೇಶದಲ್ಲಿ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣಾಲಯ ಅನುಮತಿ ನೀಡಿದೆ.
ದೇಶದಲ್ಲಿ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡುವ ಸಂಬಂಧ ರಚಿಸಲಾಗಿದ್ದ ತಜ್ಞರ ಸಲಹಾ ಸಮಿತಿ ಔಷಧ ತಯಾರಿಕಾ ಸಂಸ್ಥೆಗಳು ಸಲ್ಲಿಸಿದ್ದ ಸಂಪೂರ್ಣ ದತ್ತಾಂಶಗಳನ್ನು ಪರಿಶೀಲಿಸಿ ಮತ್ತು ಆರೋಗ್ಯಕರ ಎನ್ನುವುದು ಖಚಿತಪಡಿಸಿಕೊಂಡ ನಂತರ ಬಳಕೆಗೆ ಅನುಮತಿ ನೀಡಲು ಭಾರತೀಯ ಔಷಧ ನಿಯಂತ್ರಣಾ ಶಿಫಾರಸು ಮಾಡಿತ್ತು.
ವಿಶೇಷ ತಜ್ಞರ ಶಿಫಾರಸಿನ ಹಿನ್ನೆಲೆಯಲ್ಲಿ ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆ ದೇಶದಲ್ಲಿ ಕೊರೋನಾ ಸೋಂಕು ತುರ್ತು ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಔಷಧ ಮಹಾನಿಯಂತ್ರಕ ಡಾ.ವಿ.ಜಿ ಸೋಮಾನಿ, ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ನೀಡುವ ಬಹುದಿನಗಳ ಕಾಯುವಿಕೆ ಕೊನೆಗೊಂಡಿದೆ. ಷರತ್ತಿನೊಂದಿಗೆ ಎರಡು ಲಸಿಕೆಯನ್ನು ತುರ್ತು ಸಮಯದಲ್ಲಿ ಬಳಸಲು ಅನುಮತಿ ನೀಡಲಾಗಿದೆ ಎಂದರು.
ಕೆಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ವಿಶೇಷ ತಜ್ಞರು ನೀಡಿದ್ದ ಶಿಪಾರಸ್ಸು ಸ್ವೀಕರಿದೆ ಹೀಗಾಗಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಸೆರಂ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ನೀಡಿದ್ದ ಲಸಿಕೆಯ ದತ್ತಾಂಶ ಗಳನ್ನು ತಜ್ಞರ ಸಮತಿ ಪರಿಶೀಲಿಸಿ ತುರ್ತು ಬಳಕೆಗೆ ಅನುವು ಮಾಡಿಕೊವಂತೆ ಶಿಫಾರಸ್ಸು ಮಾಡಿತ್ತು. ಮತ್ತೆ ಎಲ್ಲವನ್ನೂ ಅವಲೋಕಿಸಿ ದೇಶದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಲಾಗಿದೆ ಎಂದು ಅವರು ಹೇಳಿದರು.
ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೋವಾಕ್ಸಿನ್ ಲಸಿಕೆ ಶೇ.೭೦.೪೨ ರಷ್ಟು ಪರಿಣಾಮಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಪ್ರಧಾನಿ ಹರ್ಷ
ದೇಶದಲ್ಲಿ ಕೊರೊನಾ ಸೋಂಕಿಗೆ ತುರ್ತು ಬಳಕೆ ಮಾಡಲು ಎರಡು ಔಷದ ತಯಾರಿಕಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿರುವುದು ಪ್ರತಿ ಭಾರತೀಯ ಹೆಮ್ಮೆ ಪಡುವ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಆಕ್ಸ್‌ಫರ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಗೆ ಅನುಮತಿ ನೀಡಿರುವದರಿಂದ ತುರ್ತು ಬಳಕೆಗೆ ಸಹಕಾರಿಯಾಗಲಿದೆ ಅಲ್ಲದೆ ಸೋಂಕು ಓಡಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿದಿದ್ದಾರೆ.
ದೇಶದಲ್ಲಿ ಎರಡು ಔಷಧ ತಯಾರಿಕಾ ಸಂಸ್ಥೆಯ ಲಸಿಕೆಗಳಿಗೆ ಔಷದ ನಿಯಂತ್ರಣ ಸಂಸ್ಥೆ ಅನುಮತಿ ನೀಡಿರುವುದು ಹರ್ಷದ ಸಂಗತಿ ಎಂದು ಹೇಳಿದ್ದಾರೆ

  • * ಅಂತೂ ಇಂತೂ ಲಸಿಕೆ ತುರ್ತು ಬಳಕೆಗೆ ಅನುಮತಿ
  • * ಆಕ್ಸ್‌ಫರ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಗೆ ಹಸಿರು ನಿಶಾನೆ
  • * ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಬಳಕೆ
  • * ಷರತ್ತಿನೊಂದಿಗೆ ಅನುಮತಿ
  • * ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಅನುಮತಿ
  • * ಲಸಿಕೆಗಳಿಗೆ ಅನುಮತಿ ಪ್ರಧಾನಿ ಹರ್ಷ
  • * ಪ್ರತಿ ಭಾರತೀಯ ಹೆಮ್ಮೆಯ ಸಂಗತಿ- ಪ್ರಧಾನಿ
  • * ಬಹುದಿನಗಳ ಕಾಯುವಿಕೆಗೆ ಕೊನೆಗೂ ನೆಮ್ಮದಿ ನಿಟ್ಟಿಸಿರು
  • * ದೇಶದ ಜನರಲ್ಲಿ ಹೊಸ ಭರವಸೆ


ಪ್ರಧಾನಿಗೆ ಕೃತಜ್ಞತೆ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅನೇಕ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗೆ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತೀಯ ಸೆರಂ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ ಸ್ವಾಗತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲಸಿಕೆಯ ತುರ್ತ ಬಳಕೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿತರಿಸಲು ಸಹಕಾರಿಯಾಗಲಿದೆ ಮೂಲಕ ಕಡಿಮೆ ಮಾಡಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಪುಣೆಯಲ್ಲಿರುವ ಭಾರತೀಯ ಸೆರಂ ಸಂಸ್ಥೆ ಉತ್ಪಾದಿಸುತ್ತಿರುವ ಲಸಿಕೆಗೆ ಅನುಮತಿ ನೀಡುವಂತೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಜೊತೆಗೆ ಪೂರಕವಾದ ದತ್ತಾಂಶವನ್ನು ಸಲ್ಲಿಸಿತ್ತು.ಕೊನೆಗೂ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ