ಲಸಿಕೆ ಜೀವ ರಕ್ಷಕ, ಸಮಯಕ್ಕೆ ಲಸಿಕೆ ಹಾಕಿಸಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು: ಮೇ:25:  ಅಪೌಷ್ಟಿಕ ಮಕ್ಕಳ ತಾಯಂದಿರಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಕುರಿತು ಜಾಗೃತಿ ಮೂಡಿಸಲಾಯಿತು, ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾಹಿತಿ ನೀಡುತ್ತಾ ಶಿಶುಗಳಿಗೆ ಸಾರ್ವತ್ರಿಕ ಲಸಿಕಾ ವೇಳಾ ಪಟ್ಟಿಯ ಪ್ರಕಾರ ಲಸಿಕೆ ಹಾಕಿಸುವುದರಿಂದ  ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗಗಳು ಬಾರದಂತೆ ತಡೆಯಲು ರಕ್ಷಣೆ ನೀಡುತ್ತವೆ, ಸದ್ಯ  ಆರೈಕೆ ಕೇಂದ್ರದಲ್ಲಿರುವ  ಸಾಕಷ್ಟು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ಕೊಡಿಸಿಲ್ಲದಿದ್ದ ಕಾರಣವೂ ಮಕ್ಕಳ ಬೆಳವಣಿಗೆಗೆ ಕುಂಠಿತವಾಗಲು ಕಾರಣ ಇರಬಹುದು, ಲಸಿಕೆ ಹಾಕಿಸುವುದನ್ನು ನೀವೇ ನಿರ್ಧಾರ ಮಾಡಬಾರದು, ಸರ್ಕಾರ ನಿಗದಿ ಪಡಿಸಿದ ವೇಳಾ ಪಟ್ಟಿಯನ್ನು ಅನುಸರಿಸಿ ಲಸಿಕೆ ಕೊಡಿಸಬೇಕಿತ್ತು, ಲಸಿಕೆ ಹಾಕಿಸುವುದರಿಂದ ಮಾರಕ ರೋಗಗಳ ವಿರುದ್ಧ ನಿರೋಧಕ ಶಕ್ತಿಯ ಹೆಚ್ಚಿಸುವುದರೊಂದಿಗೆ ಆರೋಗ್ಯದ ವೃದ್ಧಿಗೂ ಸಹಕಾರಿಯಾಗಲಿದೆ ಎಂಬುದನ್ನು ಅರಿತಿರ ಬೇಕು, ಮಗು ಚಿಕ್ಕದಿದೆ, ಲಸಿಕೆ ಹಾಕಿಸಿದ ಮೇಲೆ ಜ್ವರ ಬರುತ್ತೆ, ಮಕ್ಕಳನ್ನು ಹಿಡಿಯುವುದು ಕಷ್ಟ ಇಂತಹ ಕಾರಣಗಳನ್ನು ಇಟ್ಟು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ಕೊಡಿಸದಿದದ್ದು ಬೇಸರದ ವಿಷಯ, ಇಲ್ಲಿ 9 ಡ್ರಾಪ್ ಔಟ್ ಲಸಿಕೆ ಪಡೆಯದ ಮಕ್ಕಳನ್ನು ಪತ್ತೆ ಹಚ್ಚಿ  ಲಸಿಕೆ ನೀಡಲಾಗಿದ್ದು, ಮುಂದಿನ ಡೋಸ್ ಗಳನ್ನು ನಿಮ್ಮ ಗ್ರಾಮಗಳಲ್ಲಿ ತಪ್ಪದೇ ಹಾಕಿಸಿ, ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ  ಎಂದು ತಿಳಿಸಿದರು, ಈ ಸಂದರ್ಭದಲ್ಲಿ  ಮಕ್ಕಳ ತಾಯಂದಿರಾದ ಸರೋಜಾ,ರೇಷ್ಮ ,ರಮ್ಯಾ, ಗಾಯಿತ್ರಿ, ತೇಜಶ್ವಿನಿ, ಮಾಬುನ್ನಿ, ದುರುಗಮ್ಮ, ಹುಲಿಗೆಮ್ಮ, ತಿಪ್ಪಮ್ಮ,ರೇಣುಕಾ, ಇತರರು  ಹಾಜರಿದ್ದರು.