ಲಸಿಕೆ ಕೊರತೆ ಸಮಸ್ಯೆ ತಾತ್ಕಾಲಿಕ:ಆರ್.ಎಸ್ ಶರ್ಮಾ

ನವದೆಹಲಿ, ಮೇ.28- ದೇಶದಲ್ಲಿ ಎದುರಾಗಿರುವ ಕೋರೋನಾ ಲಸಿಕೆ ಕೊರತೆ ತಾತ್ಕಾಲಿಕ ಎಂದು ಕೋವಿನ್ ವೇದಿಕೆ ಮುಖ್ಯಸ್ಥ ಹಾಗು ರಾಷ್ಟ್ರೀಯ ಲಸಿಕಾ ಅಭಿಯಾನದ ಅಧ್ಯಕ್ಷ ಆರ್‌ ಎಸ್ ಶರ್ಮಾ ತಿಳಿಸಿದ್ದಾರೆ.

18ರಿಂದ 45 ವರ್ಷ ವಯೋಮಾನದವರಿಗೆ ಅತಿ ಶೀಘ್ರದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ ಈಗ ಎದುರಾಗಿರುವ ಲಸಿಕಾ ಅಭಾವ ತಾತ್ಕಾಲಿಕವಾದದ್ದು ದೇಶಿಯ ಔಷಧ ತಯಾರಿಕಾ ಸಂಸ್ಥೆಗಳಿಗೆ ಉತ್ಪಾದನೆ ಪ್ರಮಾಣವನ್ನು ಹೆಚ್ಚು ಮಾಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ವಿದೇಶಗಳಿಂದ ಲಸಿಕೆ ತರಿಸಿಕೊಳ್ಳಲಾಗುತ್ತದೆ ಹೀಗಾಗಿ ಅತಿಶೀಘ್ರದಲ್ಲಿ ದೇಶಕ್ಕೆ ಹೆಚ್ಚಿನ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಮೂಲಗಳಿಂದ ಲಸಿಕೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಲಸಿಕೆ ಸಂಗ್ರಹವಾದ ನಂತರ 18 ರಿಂದ 45 ವರ್ಷ ವಯೋಮಾನದವರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಒಂದು ಭಾರಿ ಲಭ್ಯವಾದ ಬಳಿಕ ಸ್ಥಳದಲ್ಲಿ ನೋಂದಣಿ ಮಾಡಿಕೊಂಡು ಲಸಿಕೆ ಹಾಕಲು ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

3 ರಾಜ್ಯಗಳಲ್ಲಿ ಸ್ಥಗಿತ:

ಲಸಿಕೆ ಕೊರತೆ ಅಭಾವದಿಂದಾಗಿ ಪಂಜಾಬ್, ಜಾರ್ಖಾಂಡ್, ದೆಹಲಿ ರಾಜ್ಯಗಳಲ್ಲಿ ಲಸಿಕೆ ಕೊರತೆ ಇರುವ ಹಿನ್ನೆಲೆಯಲ್ಲಿ 18ರಿಂದ 45 ವರ್ಷ ವಯೋಮಾನದವರಿಗೆ ಹಾಗೂ ಇತರರನ್ನು ವಯೋಮಾನದವರಿಗೆ ಲಸಿಕೆ ಹಾಕುವ ಅಭಿಯಾನ ನಿಲ್ಲಿಸಲಾಗಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಾತನಾಡಿ 18ರಿಂದ 45 ವರ್ಷ ವಯೋಮಾನದ ಅವರಿಗೆ ಲಸಿಕೆ ಹಾಕಲು ಲಸಿಕೆಯ ಭಾವನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿಯಾನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ .

ಇದೇ ರೀತಿಯ ಅಭಿಪ್ರಾಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಹೇಳಿಕೆ ನೀಡಿ ಆಯಾ ರಾಜ್ಯಗಳಿಗೆ ಲಸಿಕಾ ಅಭಿಯಾನ ಸ್ಥಗಿತ ಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ