ಲಸಿಕೆ ಕೊರತೆ ವಿವಿಧ ರಾಜ್ಯಗಳ ಅಸಹಾಯಕತೆ

ನವದೆಹಲಿ,ಏ.೨೯- ದೇಶದಲ್ಲಿ ನಿತ್ಯ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ.೧ ರಿಂದ ೧೮ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಲಸಿಕೆಯ ಅಲಭ್ಯತೆಯಿಂದಾಗಿ ಅನೇಕ ರಾಜ್ಯಗಳು ಮೇ.೧ ರಿಂದ ಲಸಿಕೆ ನೀಡಿಕೆ ಅಭಿಯಾನ ಮುಂದೂಡುವ ಸಾದ್ಯತೆ ಇದೆ.
ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಯುವ ಸಮುದಾಯಕ್ಕೆ ಲಸಿಕೆ ಹಾಕಲು ನಿನ್ನೆಯಿಂದ ನೋಂದಣಿಯೂ ಕೂಡ ಆರಂಭವಾಗಿದೆ. ಏಕ ಕಾಲಕ್ಕೆ ಕೋವಿನ್ ಅಫ್ ಮೂಲಕ ಒಮ್ಮೆಲೆ ನೋಂದಣಿಗೆ ಮುಗಿಬಿದ್ದ ಹಿನ್ನೆಲೆಯಲ್ಲಿ ಹಲವು ಕಡೆ ಸಮಸ್ಯೆ ಎದುರಾಗಿದೆ.
ದೇಶದ ಅನೇಕ ರಾಜ್ಯಗಳಲ್ಲಿ ಅಗತ್ಯ ಪ್ರಮಾದಲ್ಲಿ ಲಸಿಕೆ ಸಂಗ್ರಹದ ಅಭಾವ ಇರುವ ಹಿನ್ನೆಲೆಯಲ್ಲಿ ಮೇ. ೧ರ ದಿನಾಂಕದ ಬದಲು ಬೇರೆ ದಿನದಿಂದ ಲಸಿಕೆ ಹಾಕಲು ರಾಜ್ಯಗಳು ಮುಂದಾಗಿದ್ದು ಲಸಿಕೆಯನ್ನು ಪೂರೈಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ಇನ್ನು ಬಿಜೆಪಿಯೇತರ ಅಧಿಕಾರವಿರುವ ರಾಜ್ಯಗಳು ಲಸಿಕೆಯನ್ನು ನೇರವಾಗಿ ಔಷಧ ತಯಾರಿಕಾ ಕಂಪನಿಗಳಿಂದ ಖರೀದಿಸಲು ಮುಂದಾಗಿವೆ.
ಲಸಿಕೆ ಕೊರತೆಯಿಂದ ಮೇ,೧ ರಿಂದ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಈಗಾಗಲೇ ರಾಜಸ್ತಾನ, ಪಂಜಾಬ್,ಛತ್ತೀಸ್ ಗಡ ಮತ್ತು ಜಾರ್ಖಾಂಡ್ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದು ಲಸಿಕೆಯನ್ನು ಶೀಘ್ರವೇ ರಾಜ್ಯಕ್ಕೆ ಕೊಡುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿವೆ.
ಈಗಾಗಲೇ ನೋಂದಣಿ ಆರಂಭಾವಗಿರುವ ಹಿನ್ನೆಲೆಯಲ್ಲಿ ಯಾವಾಗ ಲಸಿಕೆ ಪಡೆಯಬೇಕು ಎನ್ನವುದು ಹಲವು ರಾಜ್ಯಗಳಲ್ಲಿ ಉತ್ತರವಿಲ್ಲ. ದೇಶದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ತಗುಲಿರುವ ಮಹಾರಾಷ್ಟ್ರದಲ್ಲಿ ಮೇ ತಿಂಗಳ ಮಧ್ಯ ಭಾಗ ಇಲ್ಲವೇ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆಗೆಳಿವೆ.
ಉತ್ತರ ಪ್ರದೇಶದಲ್ಲಿ ಮೇ. ೧ರಿಂದ ಲಸಿಕೆ ನೀಡಿಕೆ ಆರಂಭವಾಗುವ ಸಾಧ್ಯತೆಗಳಿವೆ. ಮಧ್ಯ ಪ್ರದೇಶದಲ್ಲಿ ೪೫ ವರ್ಷ ದಾಟಿದ ಮಂದಿ ಮತ್ತು ೬೦ ವರ್ಷ ದಾಟಿದವರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕೆ ಪ್ರತಿಕ್ರಿಯಿಸಿ ಲಸಿಕೆ ರಾಜ್ಯದಲ್ಲಿ ಸಂಗ್ರಹಣೆ ಆದ ನಂತರ ಲಸಿಕೆ ನೀಡಿಕೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಲಸಿಕೆ ಹಾಕಲು ೧.೩೦ ಕೋಟಿ ಲಸಿಕೆ ಅಗತ್ಯವಿದೆ ಸರ್ಕಾರ ಲಸಿಕೆ ಖರೀದಿಸಿ ಅದು ಬಂದ ನಂತರ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅನೇಕ ರಾಜ್ಯಗಳಲ್ಲಿ ದೂರು
ನಿನ್ನೆಯಿಂದ ನೋಂದಣಿ ಆರಂಭವಾಗಿದ್ದು ಏಕ ಕಾಲಕ್ಕೆ ದೇಶದಲ್ಲಿ ಕೋವಿನ್ ಆಪ್ ಮೂಲಕ ನೋಂದಣಿಗೆ ಮುಂದಾಗುತ್ತಿದ್ದಂತೆ ಸರ್ವರ್ ಸಮಸ್ಯೆ ಎದುರಾಗಿ ಸಮಸ್ಯೆಗೆ ಸಿಲುಕುವಂತಾಗಿದೆ.
ತಮಿಳುನಾಡು, ಬಿಹಾರ, ಒಡಿಶಾ, ಜಾರ್ಖಾಂಡ್, ಛತ್ತೀಸ್ ಗಡ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಗೋವಾ, ರಾಜಸ್ತಾನ, ಹಿಮಾಚಲ ಪ್ರದೇಶದಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ಜನರು ದೂರಿದ್ದಾರೆ.

ಕೊರೊನಾ ಲಸಿಕೆ ಅಲಭ್ಯತೆ, ಮೇ.೧ ರಿಂದ ಅನೇಕ ರಾಜ್ಯಗಳು ಲಸಿಕೆ ಅಭಿಯಾನ ಮುಂದೂಡಿಕೆ
ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಗೆ ಕೇಂದ್ರಕ್ಕೆ ಒತ್ತಡ
ಬಿಜೆಪಿಯೇತರ ರಾಜ್ಯಗಳು ಲಸಿಕೆ ಖರೀದಿಗೆ ಆಸಕ್ತಿ
ಮಹಾರಾಷ್ಟ್ರದಲ್ಲಿ ಮೇ ಮಧ್ಯಭಾಗ ಇಲ್ಲವೆ, ಕೊನೆಯಲ್ಲಿ ಲಸಿಕೆ ಆರಂಭ
ಮೇ. ೧ ರಿಂದ ಅಗತ್ಯ ಪ್ರಮಾಣದ ಲಸಿಕೆ ನೀಡದೆ ಇದುವರೆ ಲಸಿಕೆ ನೀಡಿಕೆ ಕೇಂದ್ರದಿಂದ ಮಾಹಿತಿ
ಹೀಗಾಗಿ ಲಸಿಕೆ ಸಂಗ್ರಹವಿಲ್ಲದೆ ಅನೇಕ ರಾಜ್ಯಗಳು ಪರದಾಟ