ಲಸಿಕೆ ಕೊಡಿ ಇಲ್ಲಾ ಅಧಿಕಾರ ಬಿಡಿ:ಕರವೇ ಆಗ್ರಹ

ಸೈದಾಪುರ:ಜೂ.11: ಕೋವಿಡ್ ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆದ್ದರಿಂದ ಎಲ್ಲರಿಗೂ ಬೇಗ ಲಸಿಕೆ ನೀಡಿ ಇಲ್ಲಾ ಅಧಿಕಾರ ಬಿಡಿ ಎಂದು ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜ ನಾಯಕ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ಗ್ರಾಮ ಪಂಚಾಯಿತಿ, ನಾಡ ಕಚೇರಿ ಹಾಗೂ ಪ್ರಮುಖ ವೃತ್ತಗಳಲ್ಲಿ, ಲಸಿಕೆ ಕೊಡಿ ಇಲ್ಲಾ ಅಧಿಕಾರ ಬಿಡಿ ಎಂಬ ಶೀರ್ಷಿಕೆಯಡಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ಗುರುವಾರ ಕೈಗೊಂಡರು. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪ್ರತಿಯೊಬ್ಬರಿಗೂ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆಯನ್ನು ನೀಡುವ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾಗಬೇಕು. ಕೊರೊನಾ 3ನೇ ಅಲೆಯಿಂದ ಜನಸಾಮಾನ್ಯರನ್ನು ರಕ್ಷಿಸಿಸುವ ಕೆಲಸ ಬಹಳ ವೇಗವಾಗಿ ಸರ್ಕಾರ ಮಾಡಬೇಕು. ಆಸ್ಪತ್ರೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ಲಸಿಕೆಗಾಗಿ ಜನಸಾಮಾನ್ಯರು ಕಾಯುವಂತಾಗಬಾರದು. ಸಮಾಜದ ಕಟ್ಟ ಕಡೆಯ ವ್ಯೆಕ್ತಿಗೂ ಲಸಿಕೆಯ ಸುರಕ್ಷತೆ ಸಿಗಬೇಕು.ದೇಶದ ಜನರಿಗೆ ಸಾರ್ವತ್ರಿಕವಾಗಿ ಬೇಗ ಲಸಿಕೆಯನ್ನು ನೀಡಿ ನಾಡ ಜನರ ಪ್ರಾಣ ಕಾಪಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯವಾಗಿದೆ ಎಂದರು. ಕರವೇ ತಾಲ್ಲೂಕು ಉಪಾಧ್ಯಕ್ಷ ವೆಂಕಟರಾಮುಲು, ನರೇಂದ್ರ ಸೈದಾಪುರ, ಸಂತೋಷ ಕೂಡಲೂರು ಸೇರಿದಂತೆ ಇತರರಿದ್ದರು.

ಮಾಧ್ವಾರ ಗ್ರಾಮದಲ್ಲಿ ಕರವೇ ಪ್ರತಿಭಟನೆ: ಸಮೀಪದ ಮಾಧ್ವಾರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಾಧ್ವಾರ ಗ್ರಾಮ ಘಟಕದ ಅಧ್ಯಕ್ಷ ಮೌನೇಶ ಮಾತನಾಡಿ ಸರ್ಕಾರ ಜನಸಾಮಾನ್ಯರ ಜೀವದ ಸಂಜೀವಿನಿಯಾದ ಕೋವಿಡ್ ಲಸಿಕೆಯನ್ನು ಬೇಗ ನೀಡದೆ ಜನರ ಜೀವದ ಜೊತೆ ಆಟವಾಡುತ್ತಿದೆ. ಸರ್ಕಾರ ತಮ್ಮ ಜವಬ್ದಾರಿಯನ್ನು ಮರೆತು, ಲಸಿಕೆ ವಿತರಣೆಯಲ್ಲಿ ಹಣ ಗಳಿಸುವ ದಂದೆಯನ್ನು ಮಾಡುತ್ತಿದೆ. ಎಂದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆದೇಶಯ್ಯ ಸ್ವಾಮಿ ಅಕರವೇ ಕಾರ್ಯಕರ್ತರಾದ ದೇವಿಸಿಂಗ್ ಠಾಕೂರ್, ಅವಿನಾಶ್ ಕಲಾಲ್, ಅಶೋಕ ಬ್ಯಾಗಾರ್, ಜಾನು ಕಲಾಲ್ ಸೇರಿದಂತೆ ಇತರರಿದ್ದರು.