ಲಸಿಕೆ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ: ಡಿಸಿ

ಕುಂದಾಪುರ, ಜೂ.೭- ಕುಂದಾಪುರ ತಾಲೂಕಿನ ವ್ಯಾಕ್ಸಿನ್ ಕೇಂದ್ರಗಳಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಪರಿ ಶೀಲನೆ ನಡೆಸಲಾಗಿದೆ. ಇಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ನಿಯಮ ಉಲ್ಲಂಘನೆಯಾಗದಂತೆ ಕುಂದಾಪುರ, ಕಾರ್ಕಳ ಹಾಗೂ ಮಲ್ಪೆಯ ವ್ಯಾಕ್ಸಿನ್ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮವರೊಂದಿಗೆ ಮಾತ ನಾಡುತಿದ್ದರು. ಲಸಿಕೆ ಪಡೆಯುವರನ್ನು ಹೊರತುಪಡಿಸಿ ಇತರರು ಕೇಂದ್ರಕ್ಕೆ ಬಂದು ಗೊಂದಲ ಮೂಡಿಸುತ್ತಿದ್ದಾರೆಂಬ ಆರೋಪ ಇದೆ. ವೈದ್ಯರಿಗೆ ಉಸ್ತು ವಾರಿ ನೀಡಿದರೆ ಒತ್ತಡ ಹೆಚ್ಚುವ ಕಾರಣ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಅರ್ಹ ವ್ಯಕ್ತಿಗಳಿಗೆ ಮಾತ್ರವೇ ಲಸಿಕೆ ಸಿಗಬೇಕು. ಒಂದು ಡೋಸ್ ವ್ಯಾಕ್ಸಿನ್ ಅನರ್ಹರಿಗೆ ಸಿಗಬಾರದೆಂಬುದು ಜಿಲ್ಲಾಡಳಿತ ಉದ್ದೇಶವಾಗಿದೆ. ಸರಕಾರದ ನಿಯಮಗಳನ್ನು ಮೀರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಡಿವೈಎಸ್ಪಿಶ್ರೀಕಾಂತ್ ಕೆ., ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಚ್ ರೆಬೆಲ್ಲೋ, ವ್ಯಾಕ್ಸಿನ್ ಕೇಂದ್ರದ ನೋಡಲ್ ಅಧಿಕಾರಿ ದಿನಕರ್ ಶೆಟ್ಟಿ, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಸಾರ್ವಜನಿಕ ಆಸ್ಪತ್ರೆಯ ಡಾ.ರಶ್ಮಿ, ಕುಂದಾಪುರ ಸಹಾಯಕ ಉಪನಿರೀಕ್ಷಕ ಅಶೋಕ್ ಉಪಸ್ಥಿತರಿದ್ದರು. ಎಸಿ ನೇತೃತ್ವದಲ್ಲಿ ಲಸಿಕೆ ಕೇಂದ್ರದ ಬಳಿ ಯಾವುದೇ ಗೊಂದಗಳು ಆಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾಕಾರಿ ಭೇಟಿ ಬಳಿಕ ಸ್ಥಳದಲ್ಲಿದ್ದ ಇತರರನ್ನು ಪೊಲೀಸರು ಹೊರಗೆ ಕಳಿಸಲಾಯಿತು. ಸದ್ಯ ಗ್ರಾಪಂಗಳಲ್ಲಿ ಮಾಡಲಾಗಿರುವ ಸಂಪೂರ್ಣ ಲಾಕ್‌ಡೌನ್ ಪರಿಣಾಮ ಕಾರಿಯಾಗಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಮುತುವರ್ಜಿಯಲ್ಲಿ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಕೆಲವು ಕಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ಇಳಿಕೆಯಾಗುತ್ತಿವೆ. ಜೂ.೭ರಂದು ಮಾಮೂಲಿಯಂತೆ ಬೆಳಿಗ್ಗೆ ೬ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು. ಮಂಗಳವಾರ ಮತ್ತೆ ಶಾಸಕರು ಸಂಸದರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳ ಲಾಗುವುದು. ಯಾವ ಗ್ರಾಪಂ ಗಳಲ್ಲಿ, ಪುರಸಭೆಯ ಯಾವ ಯಾವ ವಾರ್ಡುಗಳಲ್ಲಿ ಕೊರೋನಾ ಹೆಚ್ಚಿದೆ ಎಂದು ಚರ್ಚಿಸಿ ಸಂಪೂರ್ಣ ಲಾಕ್‌ಡೌನ್ ಬಗ್ಗೆ ತೀರ್ಮಾನಿಸಲಾಗುವುದು ಎಂದರು.