ಲಸಿಕೆ ಉತ್ಪಾದನೆ: 3 ಸಾವಿರ ಕೋಟಿ ಸಾಲ ಪಡೆಯಲು ಮುಂದಾದ ಸೆರಂ

ಮುಂಬೈ,ಏ.21- ವಿಶ್ವದ ಅತಿದೊಡ್ಡ ಔಷಧ ತಯಾರಿಕ ಸಂಸ್ಥೆ ಭಾರತೀಯ ಸೆರಂ ಸಂಸ್ಥೆ ಲಸಿಕೆ ಉತ್ಪಾದನೆಗಾಗಿ ಬ್ಯಾಂಕ್ ನಿಂದ 3 ಸಾವಿರ ಕೋಟಿ ಸಾಲ ಪಡೆಯಲು ಮುಂದಾಗಿದೆ.

ದೇಶದಲ್ಲಿ ಮೇ‌. 1 ರಿಂದ 18 ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.ಹೀಗಾಗಿ ಲಸಿಕೆಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೆರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆ ಹೆಚ್ಚಳ ಮಾಡಲು ಮುಂದಾಗಿದೆ.

18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕುವ ಉದ್ದೇಶದಿಂದ ಎರಡು ಔಷಧ ತಯಾರಿಕಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 4,500 ಕೋಟಿ ರೂಪಾಯಿ ಅನುದಾನ ನೀಡಲು ಮುಂದಾಗಿದೆ.

ಕೇಂದ್ರ ಸರ್ಕಾರದ ಅನುದಾನ ಬರುವುದು ತಡವಾಗಬಹುದು ಎನ್ನುವ ಕಾರಣಕ್ಕಾಗಿ ಭಾರತೀಯ ಸೆರಂ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲ ಅವರು 3 ಸಾವಿರ ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದಾರೆ

ಕೋವಿಶೀಲ್ಡ್ ಲಸಿಕೆಯನ್ನು ಸೆರಂ ಸಂಸ್ಥೆ ಪ್ರತಿ ಡೋಸ್ ಲಸಿಕೆಯನ್ನು ಸರ್ಕಾರಕ್ಕೆ 400 ರೂಪಾಯಿ ಹಾಗು ಖಾಸಗೀ ಅವರಿಗೆ 700 ರೂಪಾಯಿಗೆ ನೀಡಲು ಉದ್ದೇಶಿಸಲಾಗಿದೆ‌.

ಜುಲೈ ತಿಂಗಳ ನಂತರ ಪ್ರತಿ ತಿಂಗಳು 100 ದಶಲಕ್ಷ ಡೋಸ್ ಲಸಿಕೆ ಉತ್ಪಾದನೆ ಮಾಡಲು ಸೆರಂ ಸಂಸ್ಥೆ ನಿರ್ದರಿಸಿದೆ ಎಂದು ಸೆರಂ ಸಿಇಓ ಆಧಾರ್ ಪೂನಾವಾಲ ಹೇಳಿದ್ದರೆ‌