ಲಸಿಕೆ ಉತ್ಪಾದನಾ ಸಂಸ್ಥೆಗಳನ್ನು ಸರ್ಕಾರ ಸೃಷ್ಠಿಸಲಿ

ಕಲಬುರಗಿ:ಮೇ.15:ಭಾರತದಲ್ಲಿ ಮೊದಲ ಬಾರಿಗೆ ಕೋವಿಡ್-19 ಪ್ರಾರಂಭವಾದಾಗ ನಮ್ಮ ಬೆಂಗಳೂರಿನಲ್ಲಿ ಕೋವಿಡ್-19 ಚಿಕಿತ್ಸೆಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಚಿಕಿತ್ಸಾ ಕೇಂದ್ರವನ್ನು ತೆರೆದು. ಕೋವಿಡ್ 19 ರೋಗಿಗಳಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಂದ ಇದಕ್ಕೆ ಚಾಲನೆ ನೀಡಲಾಯಿತು.ಮೊದಲನೆಯ ಅಲೆಯಲ್ಲಿ ರಾಜ್ಯ ಮತ್ತು ದೇಶದಲ್ಲಿ ಅಷ್ಟೊಂದು ಸಾವು-ನೋವುಗಳು ಸಂಭವಿಸಲಿಲ್ಲ.
ಕೋವಿಶಿಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಜಗತ್ತಿಗೆ ಮತ್ತೊಂದು ನೆಮ್ಮದಿಯ ಸಂದೇಶ ನೀಡಿದ್ದು ಸತ್ಯ. ಕೋವಾಕ್ಸಿನ್ ಮತ್ತು ಕೋವಿಶಿಲ್ಡ್ ಲಸಿಕೆಗಳನ್ನು ಮೊದಲಿಗೆ ಅನುಮಾನದಿಂದ ನೋಡಿದವರೆ ಹೆಚ್ಚು, ಅದು ಸಹಜನೇ ಇದನ್ನು ಉತ್ತಮ ಲಸಿಕೆ ಎಂದು ಉಚಿತ ಪಡಿಸಲು ನುರಿತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೇ ಮೊದಲಿಗೆ ಲಸಿಕೆಗಳನ್ನುಪಡೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಜನವರಿ 16 ರಿಂದ ಮೇ 16ರವರೆಗೆ ಸುಮಾರು 17 ರಿಂದ 18 ಕೋಟಿ ಮಂದಿಗೆ ಮೊದಲನೆ ಹಂತದ ಲಸಿಕೆ ಲಭಿಸಿದೆ. ಇನ್ನು ಜಗತ್ತಿನ ಅತ್ಯಂತ ಜನಸಂಖ್ಯೆ ಹೊಂದಿರುವ ಎರಡನೇ ದೇಶ ಭಾರತ ಆಗಿದ್ದು ಅಂದಾಜು 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಭಾರತ, ಇಷ್ಟು ಜನಸಂಖ್ಯೆಗೆ ಲಸಿಕೆ ಲಭ್ಯವಾಗಬೇಕು. ಅಂದರೆ ಅಂದಾಜು 1-2 ವರ್ಷ ಆಗಬಹುದು ?.
ದೇಶದ ಪ್ರತಿಯೊಂದು ರಾಜ್ಯಗಳು ಲಾಕ್ಡೌನ್ ಜಾರಿಗೆ ತಂದಿವೆ. ದೇಶದ ಮತ್ತು ರಾಜ್ಯಗಳ ಆರ್ಥಿಕ ಮಟ್ಟ ಕುಸಿದಿದೆ. ಜನರ ಕೈಯಲ್ಲಿ ಕೆಲಸ ಇಲ್ಲ. ಇದ್ದಂತ ಕೆಲಸ ಕಳೆದುಕೊಂಡಿದ್ದಾರೆ. ಇವತ್ತು ಇಲ್ಲ ನಾಳೆ ಸರಿ ಮಾಡಿಕೊಳ್ಳಬಹುದು.
ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯದಲ್ಲಿ ಲಸಿಕೆಯ ಉತ್ಪಾದನೆಯ ಪ್ರಮಾಣವನ್ನು ಹೆಚ್ಚು ಮಾಡಬೇಕು. ಭಾರತಕ್ಕೆ ಈಗ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವಸಂಸ್ಥೆಗಳು ಅವಶ್ಯಕವಾಗಿದ್ದು, ಮತ್ತು ಲಸಿಕೆ ಕೂಡ ಅತಿ ಅವಶ್ಯಕವಾಗಿರುವಂತದ್ದು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾವು-ನೋವುಗಳ ಪ್ರಮಾಣ ಅಧಿಕವಾಗುತ್ತದೆ ಕಾರಣ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗಳು ಇದ್ದರೂ ಕೂಡ ಜನರಲ್ಲಿ ಅರಿವಿನ ಪ್ರಮಾಣ ಕೂಡ ಕಡಿಮೆ, ಜನರಲ್ಲಿ ನಿರ್ಲಕ್ಷ ಕೂಡ ಅಧಿಕ.
ಈಗಾಗಲೇ ಒಂದನೇ ಹಂತದ ಲಸಿಕೆ ನೀಡಲಾಗಿದೆ. ಅದು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಇನ್ನೂ ಎರಡನೇ ಹಂತದ ಲಸಿಕೆ ಸಿಕ್ಕಿಲ್ಲ. ಈಗ ಸಮಯ 5 ತಿಂಗಳುಗಳು ಕಳೆದು ಹೋಗಿದೆ. ದೇಶದಲ್ಲಿ ಅತ್ಯಂತ ಗಣ್ಯ ವ್ಯಕ್ತಿಗಳನ್ನು, ಮಾರ್ಗದರ್ಶಕರನ್ನು, ಮಕ್ಕಳು ತಂದೆ ತಾಯಿಯನ್ನು, ಪೆÇೀಷಕರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇನ್ನು ಕಳೆದುಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕೆ ಲಸಿಕೆ ಶೀಘ್ರ ಬೇಕಾಗಿದೆ.
ಹೊಸ- ಹೊಸ ಸಂಸ್ಥೆಗಳ ಜೊತೆ ಹಳೆಯ ಸಂಸ್ಥೆ ಮತ್ತು ಡಿಆರ್ ಡಿಒ ಸಂಸ್ಥೆ ಸೇರಿದಂತೆ ಹಲವಾರು ಲಸಿಕೆಗಳನ್ನು ತಯಾರಿಸಿವೆ. ಅವುಗಳನ್ನು ಪಡೆಯುವ ಮೂಲಕ ಸದೃಢವಾದ ಭಾರತ ಕಟ್ಟಬೇಕಾಗಿದೆ ಎಂದು
ಸಂಜೀವಕುಮಾರ ಎಸ್. ನಿಡಗುಂದಾ ತಿಳಿಸಿದ್ದಾರೆ.