ಲಸಿಕೆ, ಆರೋಗ್ಯ ಸೌಲಭ್ಯ ಹೆಚ್ಚಳ ಐಒಸಿ ಭರವಸೆ

ಟೋಕಿಯೊ, ಮೇ 19- ಜಪಾನ್ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಸೋಂಕಿನ ಭೀತಿ ಆವರಿಸಿರುವ ಬೆನ್ನಲ್ಲೇ, ರಾಜಧಾನಿ ಟೊಕಿಯೊದಲ್ಲಿ ಲಸಿಕೆ, ಆರೋಗ್ಯ ಸೌಲಭ್ಯ ಹೆಚ್ಚಿಸುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಭರವಸೆ ನೀಡಿದೆ.
ಸೋಂಕು ಹೆಚ್ಚಾಗುತ್ತಿರುವ ವೇಳೆ‌ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸುವುದು ಉಚಿತವಲ್ಲ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈ‌ ಬಗ್ಗೆ ಐಓಸಿ ಮತ್ತು ಕ್ರೀಡಾಕೂಟದ ಆಯೋಜಕರು‌ ಸುದೀರ್ಘ ಸಭೆ ನಡೆಸಿದ್ದಾರೆ.
ಈ ಕುರಿತು ವರ್ಚುವಲ್ ಸಭೆ ಮೂರು ದಿನ ನಡೆಯಲಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಿಸಿ ಕ್ರೀಡಾಗ್ರಾಮದಲ್ಲಿ ಲಸಿಕೆ ಹಾಕಿಸಲು ಐಒಸಿ ತೀರ್ಮಾನಿಸಿದೆ.
ಐಒಸಿ‌ ಉಪಾಧ್ಯಕ್ಷ ಜಾನ್ ಕೋಟ್ಸ್ ನೇತೃತ್ವದಲ್ಲಿ ಈ ಸಭೆಗಳು ನಡೆಯುತ್ತಿದ್ದು, ಸುರಕ್ಷಿತ ಹಾಗೂ ಸುಭದ್ರವಾಗಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ ಎಂದು ಅವರು ಆಶಯ ವ್ಯಕ್ತಪಡಿ
ಸಿದ್ದಾರೆ.
ಕೋವಿಡ್‌ನಿಂದಾಗಿ ಮುಂದೂಡಿರುವ ಒಲಿಂಪಿಕ್ಸ್‌ ಜುಲೈ 23ರಂದು ಆರಂಭವಾಗಲಿದ್ದು ಆಗಸ್ಟ್ 24ರಿಂದ ಪ್ಯಾರಾಲಿಂಪಿಕ್ಸ್ ನಡೆಯಲಿದೆ. ಒಲಿಂಪಿಕ್ಸ್ ಮುಂದೂಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಈ ನಡುವೆ ವಿರೋಧ ಪಕ್ಷಗಳು ಪ್ರತಿಭಟನೆ
ನಡೆಸಿದ್ದಾರೆ. ಕ್ರೀಡಾಕೂಟದ ಸಂದರ್ಭದಲ್ಲಿ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ, 500 ಹೆಚ್ಚುವರಿ ಶುಶ್ರೂಷಕಿಯರು ಮತ್ತು 200 ಕ್ರೀಡಾ ವೈದ್ಯರ ಅಗತ್ಯವಿದೆ ಎಂದು ಆಯೋಜಕರು ಅಂದಾಜು ಮಾಡಿದ್ದಾರೆ.