ಲಸಿಕೆ ಆಂತಕ ಬೇಡ : ಮಾಸ್ಕ್ ಧರಿಸಲು ಮನವಿ

ಅರಕೇರಾ.ಮಾ.೨೫-ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ -೧೯ ವ್ಯಾಕ್ಸೀನ್ ಲಸಿಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಯಾರು ಈ ಲಸಿಕೆಯ ಬಗ್ಗೆ ಆತಂಕಪಡುವ ಆಗತ್ಯವಿಲ್ಲಾ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಸಾರ್ವಜನಿಕರಿಗೆ ಮನವಿ ಮಾಡಿದರು.
ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸೀನ್ ಲಸಿಕೆ ಹಾಕಿಸಿಕೊಂಡರು. ಮತ್ತೇರಾಜ್ಯದಲ್ಲಿ ಕೊರಾನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಎಲ್ಲಾರೂ ಕೋರಾನಾ ನಿಯಮಗಳನ್ನು ಪಾಲಿಸಬೇಕು ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಇದೇ ಸಂದರ್ಭದಲ್ಲಿ ಮನವಿಮಾಡಿಕೊಂಡರು.
ಸಂದರ್ಭದಲ್ಲಿ ರಾಯಚೂರು ರೀಮ್ಸ್ ವೈದ್ಯಕೀಯ ಮಂಡಳಿಯ ನಾಮನಿರ್ದೇಶಕಸದಸ್ಯ ಡಾ.ಎಚ್. ಎ.ನಾಡಗೌಡ, ಡಾ.ನಾಗೇಶಶ್ಯಾವಿ, ಡಾ. ರಾಜೇಶ್ವರಿ ಡಾ||ಸಂಜಯಬಾವಿಕಟ್ಟಿ ಡಾ.ರಾಘವೇಂದ್ರವಡಿಗೇರಾ ವೆಂಕಟೇಶ ಕಾಸರವಳ್ಳಿ ಜಿಲ್ಲಾ ಸಂಚಾಲಕರು ಸಾಮಾಜಿಕ ಜಾಲತಾಣ ಮಾಹಿತಿ ಮತ್ತು ತಂತ್ರಜ್ಞಾನ ಮಂಜುನಾಥ,ಬಸನಗೌಡಪಾಟೀಲ್ ಸಂಚಾಲಕರು ದೇವಸುರ್ಗ ಸಿದ್ದು ಸುಂಕೇಶ್ವರಹಾಳ ದೇವದುರ್ಗ ಮುಂತಾದವರು ಉಪಪಸ್ಥಿತರಿದ್ದರು.