ಲಸಿಕೆ ಅಭಿಯಾನಕ್ಕೆ ನೂರು ದಿನ 14.19 ಕೋಟಿ ಡೋಸ್ ವಿತರಣೆ

ನವದೆಹಲಿ, ಏ. ೨೬-ಕೊರೊನಾ ಸೋಂಕು ತಡೆಗೆ ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ಪ್ರಾರಂಭಿಸಿ ಶತ ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ೧೪.೧೯ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಅಂಕಿ ಅಂಶ ನೀಡಿದೆ.
ದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ಲಸಿಕೆ ವಿತರಣಾ ಪ್ರಮಾಣ ಚುರುಕಿನಿಂದ ಸಾಗಿದೆ. ಇದುವರೆಗೆ ೧೪,೧೯,೧೧,೨೨೩ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ.
೯೨, ೯೮,೦೯೨ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಈ ಪೈಕಿ ೬೦,೦೮,೨೩೬ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
೧,೧೯೮೭,೧೯೨ ಹಾಗೂ ಎರಡನೇ ಡೋಸ್ ಪಡೆದ ೬೩,೧೦,೨೭೩ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ ಎಂದು ಸಚಿವಾಲಯ ಅಂಕಿ ಅಂಶ ನೀಡಿದೆ.
೬೦ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮೊದಲ ಡೋಸೇಜ್ ೪,೯೮,೭೨,೨೦೯ ಪಡೆದರೆ ಎರಡನೇ ಡೋಸೇಜ್ ಪಡೆದ೭೯,೨೩೨೯೫ ಫಲಾನುಭವಿಗಳು ಸೇರಿದ್ದಾರೆ. ಅದೇ ರೀರಿ ೪೫ ವರ್ಷದಿಂದ ೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ೪,೮೧,೦೮,೨೯೩ ಜನರು ಮೊದಲ ಡೋಸ್ ಲಸಿಕೆ ಪಡೆದರೆ ೨೪,೦೩,೬೩೬ ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ.
ಲಸಿಕೆ ಪೂರೈಸಿರುವ ಒಟ್ಟು ಪ್ರಮಾಣದಲ್ಲಿ ಶೀ ೫೯.೭ ರಷ್ಟನ್ನು ಕರ್ನಾಟಕ,ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥನ, ಉತ್ತರಪ್ರದೇಶ, ಕೇರಳ, ಗುಜgತ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ನೀಡಲಾಗಿದೆ. ಕಳದೆ ೨೪ ತಾಸುಗಳಲ್ಲಿ ೧೦ಲಕ್ಷ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.