ಲಸಿಕೆಗಾಗಿ ಪರದಾಡಿದ ಹಿರಿಯ ನಾಗರೀಕರು

ದಾವಣಗೆರೆ.ಮೇ.೫: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದು ಹಿರಿಯ ನಾಗರಿಕರುಲಸಿಕೆಗಾಗಿ ಪರದಾಡಿದ ಘಟನೆ ಜರುಗಿದೆ.
ಕೇಂದ್ರದಲ್ಲಿ ಲಸಿಕೆ ಖಾಲಿ ಎಂದು ಸಾರ್ವಜನಿಕರನ್ನು‌ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಾಪಸ್ಸು ಕಳುಹಿಸುತ್ತಿದ್ದ ಸನ್ನಿವೇಶ ಕಂಡುಬಂದಿದೆ. ಇಂದು ಕೇವಲ ೩೦೦ ಮಂದಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.ಇಂದು ಬೆಳಗ್ಗೆ ೬ ರವರೆಗೆ ಕೂಪನ್ ಗಳನ್ನು ನೀಡಲಾಗಿದೆ. ಅವರಿಗೆ ಮಾತ್ರ ಲಸಿಕೆ ನೀಡಲಾಗಿದೆ.ಜನಸಂದಣಿ ಹೆಚ್ಚಾಗದಂತೆ ತಡೆಯುವ ಉದ್ದೇಶದಿಂದ ಪ್ರತಿದಿನ ೩೦೦ ಜನರಿಗೆ ಲಸಿಕೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.ಆದರೆ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಖಾಲಿಯಾಗಿದೆ ಎಂದು ವೈದ್ಯರ ವಿರುದ್ಧ ಹಿರಿಯ ನಾಗರಿಕರುಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ರಾತ್ರಿ ಜಿಲ್ಲೆಗೆ 9,500 ಡೋಸ್ ಲಸಿಕೆ ಬಂದಿದೆ.ಕೇವಲ ಕೋವಿಶೀಲ್ಡ್ ಲಸಿಕೆ ದಾಸ್ತಾನು ಲಭ್ಯವಿದೆ.ಕೋವ್ಯಾಕ್ಸಿನ್ ದಾಸ್ತಾನು ಸದ್ಯಕ್ಕಿಲ್ಲಶೇ. 70ರಷ್ಟು ಲಸಿಕೆಯನ್ನು 2ನೇ ಡೋಸ್ ಪಡೆಯುವರಿಗೆ ಆದ್ಯತೆ ನೀಡಲಾಗುವುದು.
ಶೇ.‌ 30ರಷ್ಟನ್ನು‌ ಮೊದಲ ಡೋಸ್ ಪಡೆವರಿಗೆ ಮೀಸಲಿಡಲಾಗಿದೆ ಎಂದು ಆರ್ ಸಿ ಹೆಚ್ ಅಧಿಕಾರಿ ಡಾ.ಮೀನಾಕ್ಷಿ ತಿಳಿಸಿದ್ದಾರೆ.