ಲಸಿಕಾ ನೀತಿ: ಕೇಂದ್ರಕ್ಕೆ ಸುಪ್ರೀಂ ಚಾಟಿ

ನವದೆಹಲಿ, ಜೂ.2- ದೇಶದಲ್ಲಿ ಲಸಿಕೆ ನೀಡಿಕೆ ಕುರಿತ ‌ಕೇಂದ್ರದ ನೀತಿಗೆ ಗರಂ ಆಗಿರುವ ಸುಪ್ರೀಂ ಕೋರ್ಟ್, ಹಾಲಿ‌ ಇರುವ ನೀತಿಯನ್ನು ಪರಾಮರ್ಶಿಸಿ ಎಂದು ಕೇಂದ್ರ ಸರ್ಕಾರದ ವಿರುದ್ದ ಚಾಟಿ ಬೀಸಿದೆ.

45 ವರ್ಷ ದಾಟಿದ ಜನರಿಗೆ ಉಚಿತವಾಗಿ ಲಸಿಕೆ ನೀಡುವುದು, 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆಗಾಗಿ ಹಣ ಪಾವತಿ ಮಾಡಿ ಎನ್ನುವ ನಿರ್ಧಾರ ಸರಿಯಲ್ಲ ಇದು ತಾರತಮ್ಯ ಎಂದು ತರಾಟೆಗೆ ತೆಗೆದುಕೊಂಡಿದೆ.

ಮೇಲ್ನೋಟಕ್ಕೆ ‌ಲಸಿಕೆ ನೀತಿಯಲ್ಲಿ ಅನೇಕ ಲೋಪ ದೋಷ ಇರುವುದು ಸ್ಪಷ್ಟವಾಗಿದೆ‌. ಇದನ್ನು ಸರಿಪಡಿಸಿ, ಜೊತೆಗೆ ಹಾಲಿ ನೀತಿಯನ್ನು ಪರಾಮರ್ಶಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

2021ರ ಡಿಸೆಂಬರ್ 31 ರ ತನಕ ಲಸಿಕೆ ನೀಡಿಕೆಗೆ ಅನುಕೂಲವಾಗುವಂತೆ ಅಗತ್ಯ ಕಾರ್ಯ ಯೋಜನೆ ರೂಪಿಸಿ ಜೊತೆಗೆ ಲೋಪದೋಷಗಳಿರುವ ಲಸಿಕಾಕರಣದ ನೀತಿಯನ್ನು ಪರಾಮರ್ಶಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ಅರ್ಹ ಎಲ್ಲರಿಗೂ ಲಸಿಕೆ ನೀಡಿಕೆ ಕುರಿತು ಕೇಂದ್ರ ಸರ್ಕಾರದ ಹೇಳಿಕೆಗೆ ವಿರೋದ‌ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ವಿವಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಚಳಿ ಬಿಡಿಸಿದೆ.

45 ವರ್ಷ ದಾಟಿದವರಿಗೆ ಉಚಿತವಾಗಿ ಲಸಿಕೆ ನೀಡಿ ಅದಕ್ಕಿಂತ ಕೆಳಗಿನ‌ ಮಂದಿಗೆ ‌ಹಣ ನೀಡಿ ಖರೀದಿ‌ಸಿ ಪಡೆಯಿರಿ ಎನ್ನುವುದು ಸರಿಯಲ್ಲ.ಸೋಂಕಿಗೆ ಒಳಗಾಗಿರುವ 18 ರಿಂದ 44 ವರ್ಷ‌ವಯೋಮಾನದ ಯುವ ಜನರು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಹೇಳಿದೆ.

ಯುವಜನರಿಗೂ ಲಸಿಕೆ ನೀಡಿ:

ಯುವ ಜನರಿಗೂ ಆದ್ಯತೆ ಮೇರೆಗೆ‌ ಕೊರೊನಾ ಲಸಿಕೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ನೀಡಿದೆ.

18-44 ರ ವಯೋಮಾನದ ಮಂದಿಗೆ ಲಸಿಕೆ ನೀಡಲು ಅಗತ್ಯ ಕಾರ್ಯಯೋಜನೆ ರೂಪಿಸುವ ಅಗತ್ಯ ‌ಮತ್ತು ಅನಿವಾರ್ಯತೆ ಇದೆ. ಲಸಿಕೆಯ ವಿಷಯದ ದರದಲ್ಲಿ ತಾರತಮ್ಯ ಸರಿಯಲ್ಲ ಎಂದೂ ಕೂಡ ಹೇಳಿದೆ.

  • ದೇಶದಲ್ಲಿ ‌ಕೊರೊನಾ ಲಸಿಕೆ ನೀತಿಯಲ್ಲಿ ಲೋಪ ದೋಷ ಸುಪ್ರೀಂ ಕೋರ್ಟ್ ನಿಂದ ಸ್ವಯಂ ಪ್ರೇರಿತ ದೂರು ದಾಖಲು
  • 45 ವರ್ಷದವರಿಗೆ ಉಚಿತ, 18-44 ವರ್ಷದವರಿಗೆ ದರ ನಿಗದಿಗೆ ಕೇಂದ್ರದ ವಿರುದ್ದ ಚಾಟಿ
  • ಎಲ್ಲರಿಗೂ ಲಸಿಕೆ ನೀಡಿಕೆ ಸಂಬಂಧಿಸಿದೆ ಕಾರ್ಯಯೋಜನೆ ರೂಪಿಸಲು ನಿರ್ದೇಶನ
  • ಯುವ ಜನರು ಸೋಂಕಿನಿಂದ ಸಾವನ್ನಪ್ಪುತ್ತಿರುವುದು ದುರದೃಷ್ಟಕರ
  • ಡಿಸೆಂಬರ್ ಒಳಗೆ ಅರ್ಹ ಎಲ್ಲಿರಿಗೆ ಲಸಿಕೆ ‌ನೀಡಿಕೆ – ಕೇಂದ್ರದ ಹೇಳಿಕೆ