ಲಸಿಕಾ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಸೆ27: ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಕಾಲು ಬಾಯಿ ಬೇನೆಯ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಪಶುಗಳಿಗೆ ಬರುವ ಅನೇಕ ಸಾಂಕ್ರಾಮಿಕ ರೋಗಗಳಿಗೆ ಸರ್ಕಾರ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದ್ದು ರೈತರು ಮುಂಜಾಗೃತ ಕ್ರಮವಾಗಿ ಪಶುಗಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಬೆಲೆಬಾಳುವ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಎನ್‍ಎ ಹವಳದ, ಪುರಸಭೆ ಸದಸ್ಯರುಗಳು ಮತ್ತು ಬಿಜೆಪಿ ಮುಖಂಡರುಗಳಾದ ರಮೇಶ್ ಹಾಳದೋಟದ, ಉಳವೇಶಗೌಡ ಪಾಟೀಲ, ಸಂಗಮೇಶ್ ಬೆಳವಲಕೊಪ ಸೇರಿದಂತೆ ಅನೇಕರಿದ್ದರು.