`ಲವ್ 360′ ಹಾಡು ಬಿಡುಗಡೆ

ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿರುವ “ಲವ್ 360” ಚಿತ್ರದ “ಭೋರ್ಗರೆದು” ಹಾಡು ಬಿಡುಗಡೆಯಾಗಿದೆ. ಶಶಾಂಕ್ ಬರೆದಿರುವ ಗೀತೆಗೆ  ಕೀರ್ತನ್ ಹೊಳ್ಳ ಹಾಡಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

“ಮೊಗ್ಗಿನ ಮನಸ್ಸು” ಚಿತ್ರ ತೆರೆಕಂಡು ಹದಿನಾಲ್ಕು ವರ್ಷಗಳಾಗಿದ್ದು ಆ ನೆನಪಿಗಾಗಿ  “ಲವ್ 360” ಚಿತ್ರದ ಹಾಡು ಬಿಡುಗಡೆ ಆಗಿದೆ. “ಮೊಗ್ಗಿನ ಮನಸ್ಸು- 2”  ಮಾಡುವ ಆಸೆಯಿದೆ ಎಂದರು ನಿರ್ದೇಶಕ ಶಶಾಂಕ್. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಜನಪ್ರಿಯವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೆ” ಹಾಡು ದೊಡ್ಡ ಯಶಸ್ಸು ಕಂಡಿದೆ ಎಂದರು.

ನಾಯಕ ಪ್ರವೀಣ್, “ಜಗವೇ ನೀನು” ಹಾಡಿನಿಂದ ಜನ ಗುರುತಿಸುತ್ತಿದ್ದಾರೆ. ಚಿತ್ರದ ಗೆಲುವಿನ ಮುನ್ಸೂಚನೆ ಹಾಡು  ನೀಡಿದೆ. “ ಬೋರ್ಗರೆದು” ಹಾಡು ಕೂಡ ಜನರಿಗೆ ಹತ್ತಿರವಾಗಲಿದೆ ಎಂದರು.

ನಾಯಕಿ ರಚನಾ ಇಂದರ್, ಹಿರಿಯರು, ಕಿರಿಯರು ಎಲ್ಲಾ ವಯಸ್ಸಿನವರಿಗೂ “ಜಗವೇ ನೀನು ಗೆಳತಿಯೆ” ಹಾಡು ಇಷ್ಟವಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲುತ್ತದೆ ಎಂದರು. ಆನಂದ್ ಆಡಿಯೋ ಶ್ಯಾಮ್ ಹಾಗು ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಮಾಹಿತಿ ಹಂಚಿಕೊಂಡರು.