ಲವ್‌ ಲಿ. ಅಂತಿದ್ದಾರೆ ಸಮೀಕ್ಷಾ..

ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಮೀಕ್ಷಾ , ಇದೀಗ ವಸಿಷ್ಠ ಸಿಂಹ ನಾಯನಾಗಿರುವ “ಲವ್ ಲಿ”ಗೆ ನಾಯಕಿಯಾಗಿದ್ದಾರೆ.

ಮಲೆನಾಡ ಬೆಡಗಿ ಸಮೀಕ್ಷಾ ‌ಕಿರುತೆರೆಯ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿ ಈಗ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು ಚಿತ್ರದಲ್ಲಿ ನಟಿ ಸಮೀಕ್ಷಾ ಕಾರ್ಪೋರೇಟ್ ಹುಡ್ಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೇ ಲವ್ ಲಿ ಸಿನಿಮಾ ರೋಮ್ಯಾಂಟಿಕ್,ಲವ್ ಸ್ಟೋರಿ ಸಿನಿಮಾವಾಗಿದ್ದು, ಚೇತನ್ ಕೇಶವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಂ ಆರ್ ರವೀಂದ್ರ ಕುಮಾರ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ ಛಾಯಾಗ್ರಹಣ ಸಿನಿಮಾಕ್ಕಿದೆ.