‘ಲವ್ ಲಿ’ಗೆ ತಾರೆಯರ ಮೆರುಗು

ರೌಡಿಸಂ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್‍ನಲ್ಲಿ ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ ಎನ್ನುವುದನ್ನು ಸಾರುವ ಅಂಶಗಳಿರುವ “ಲವ್ ವಿ” ಚಿತ್ರದ  ಶೀರ್ಷಿಕೆ ಹಾಡು ಬಿಡಯಗಡೆಯಾಗಿದ್ದು ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

ರವೀಂದ್ರ ಕುಮಾರ್ ಬಂಡವಾಳ ಹಾಕಿರುವ ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಡು ಬಿಡುಗಡೆಗೆ ನಟರಾದ ರವಿಚಂದ್ರನ್,ಉಪೇಂದ್ರ, ‘ನೆನಪಿರಲಿ’ ಪ್ರೇಮ್, ಪ್ರಿಯಂಕಾ ಉಪೇಂದ್ರ, ಹರಿಪ್ರಿಯ ಸೇರಿ ಹಲವರು ಚಿತ್ರಂಡಕ್ಕೆ  ಶುಭಕೋರಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಚೇತನ್ ಕೇಶವ್, ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ಚಿತ್ರದಲ್ಲಿ ಮಾಸ್ ,ಕ್ಲಾಸ್ ಎರಡನ್ನು ಬಳಸಿದ್ದೇನೆ ಜೊತೆಗೆ ಸಾಮಾಜಿಕ ಸಂದೇಶ ಕೂಡ ಇದೆ ಎನ್ನುವ ವಿವರ ನೀಡಿದರು.

ಚಿತ್ರವನ್ನು ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಲಂಡನ್‍ನಲ್ಲಿ ಹಾಡು ಚಿತ್ರೀಕರಣ ಮಾಡುವ ಗುರಿ ಇದೆ.ಚಿತ್ರದಲ್ಲಿ ಮೂರು ಆಕ್ಷನ್, ನಾಲ್ಕು ಹಾಡುಗಳಿದೆ ಎಂದರು.

ನಾಯಕ ವಸಿಷ್ಠ ಸಿಂಹ ಮಾತನಾಡಿ,  ತುಂಬಾ ಕಾಡಿದ ಚಿತ್ರ ಇದು. ಹಾಡಿನಿಂದ ಪ್ರಚಾರ ಆರಂಭವಾಗಿದ್ದು  ಆಗಸ್ಟ್‍ನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಸÀುಂದರ ಪ್ರೇಮಕಥೆಯ ಚಿತ್ರ ಇಡೀ ತಂಡಕ್ಕೆ ಧನ್ಯವಾದ ಎಂದು ಹೇಳಿದರು.

ನಾಯಕಿ ಸ್ಟೇಪಿ ಪಟೇಲ್ ‘ ಕನ್ನಡ ಮೊದಲ ಸಿನಿಮಾ. ಒಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ಚಿತ್ರದಲ್ಲಿ ಜನನಿ ಎನ್ನುವ ಪಾತ್ರ ನಿರ್ವಹಿಸಿದ್ದೇನೆ’ ಎಂದು ಹೇಳಿದರು. ಸಹ ನಿರ್ಮಾಪಕರಾದ ಬಾಲಕೃಷ್ಣ ಜಿ.ಎನ್, ಕೃಷ್ಣ, ಬೇಬಿ ವಂಶಿಕಾ ತಮ್ಮ ಅನುಭವ ಹಂಚಿಕೊಂಡರು.