ಲವ್ ರಂಜನ್ ರ ಅಪ್ ಕಮಿಂಗ್ ಫಿಲ್ಮ್ ನಲ್ಲಿ ರಣಬೀರ್ ನ ಮಾತಾಪಿತರಾಗಿ ಡಿಂಪಲ್ ಕಪಾಡಿಯಾ ಮತ್ತುಬೋನಿ ಕಪೂರ್.

ನಿರ್ದೇಶಕ ಲವ್ ರಂಜನ್ ಅವರ ಅಪ್ ಕಮಿಂಗ್ ಫಿಲ್ಮ್ ನ ಶೂಟಿಂಗ್ ಗಾಗಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನೋಯ್ಡಾಗೆ ತಲುಪಿದ್ದಾರೆ. ಲವ್ ರಂಜನ್ ರ ಈ ಫಿಲ್ಮ್ ನ ಸ್ಟಾರ್ ಕಾಸ್ಟ್ ನಲ್ಲಿ ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಕೂಡ ಸೇರಿದ್ದಾರೆ. ಫಿಲ್ಮ್ ನಲ್ಲಿ ಬೋನಿಕಪೂರ್ ಮತ್ತು ಡಿಂಪಲ್ ಕಪಾಡಿಯಾ ರಣಬೀರ್ ನ ತಂದೆತಾಯಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಮೇಕರ್ಸ್ ಫಿಲ್ಮ್ ನ ಶೂಟಿಂಗ್ ನಿಮಿತ್ತ ಸ್ಪೈನ್ ನಲ್ಲಿ ಒಂದು ಶೆಡ್ಯೂಲ್ ಶುರು ಮಾಡುವವರಿದ್ದರು. ಆದರೆ ಕೋವಿಡ್ ಕಾರಣ ಮೇಕರ್ಸ್ ಗೆ ನಮ್ಮ ದೇಶದಲ್ಲೇ ಶೂಟಿಂಗ್ ಆರಂಭಿಸಬೇಕಾಗಿ ಬಂತು.


ಫಿಲ್ಮ್ ಮೂಲಗಳು ತಿಳಿಸಿದಂತೆ ಫಿಲ್ಮ್ ನಲ್ಲಿ ರಣಬೀರ್ ಕಪೂರ್ ನ ತಂದೆ ಓರ್ವ ಶ್ರೀಮಂತ ಮತ್ತು ಆತ್ಮವಿಶ್ವಾಸ ಇರುವ ವ್ಯಕ್ತಿಯಾಗಿದ್ದಾನೆ. ಫಿಲ್ಮ್ ರೈಟರ್ ಇದಕ್ಕೆ ಸೂಕ್ತ ವ್ಯಕ್ತಿ ಬೋನಿಕಪೂರ್ ಎಂದರು.ಅನಂತರ ಮೇಕರ್ಸ್ ಬೋನಿಕಪೂರ್ ಬಳಿ ಈ ಬಗ್ಗೆ ಮಾತನಾಡಿದಾಗ ಅವರು ಪಾತ್ರವನ್ನು ನಿರಾಕರಿಸಿದ್ದರು. ನಿರಾಶರಾದ ಲವ್ ರಂಜನ್ ನಂತರ ಅರ್ಜುನ್ ಕಪೂರ್ ರನ್ನು ಈ ವಿಷಯದಲ್ಲಿ ಸಂಧಾನಕ್ಕೆ ಕಳುಹಿಸಿದರು.


ಅರ್ಜುನ್ ಜೊತೆಗೆ ಅಂಶುಲಾ, ಜಾಹ್ನವಿ ಮತ್ತು ಖುಷಿ ಇವರೂ ಸೇರಿಕೊಂಡು ತಂದೆಯನ್ನು ಫಿಲ್ಮ್ ನಲ್ಲಿ ಅಭಿನಯಿಸಲು ಒತ್ತಾಯಿಸಿದರು. ಕೊನೆಗೆ ಬೋನಿಕಪೂರ್ ಇದಕ್ಕೆ ರಾಜಿಯಾದರು.ಸದ್ಯ ಬೋನಿಕಪೂರ್ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ನಿರತರಾಗಿದ್ದು ಬಂದಿದ್ದಾರೆ.
ಬೋನಿ ಕಪೂರ್ ಇತ್ತೀಚೆಗೆ ಬಿಡುಗಡೆಗೊಂಡ ಅನಿಲ್ ಕಪೂರ್ ಅವರ ಏಕೆ ವರ್ಸಸ್ಸ್ ಏಕೆ ಫಿಲ್ಮ್ ನ ಮೂಲಕ ಅಭಿನಯಕ್ಕೆ ಇಳಿದಿದ್ದಾರೆ.ಫಿಲ್ಮ್ ನಲ್ಲಿ ಬೋನಿಕಪೂರ್ ರ ಪತ್ನಿಯಾಗಿ ಒಂದೊಮ್ಮೆ ರಿಷಿ ಕಪೂರ್ ರ ರೋಮ್ಯಾಂಟಿಕ್ ಬಾಬಿ ಫಿಲ್ಮ್ ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಡಿಂಪಲ್ ಕಪಾಡಿಯಾ ಇದ್ದು ರಣಬೀರ್ ಕಪೂರ್ ನ ತಾಯಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಜಾಹ್ನವಿ ಕಪೂರ್ ಫಿಲ್ಮ್ ನ ಶೂಟಿಂಗಿಗೆ ರೈತರಿಂದ ತಡೆ.

ಪಂಜಾಬ್ ನ ಬಸ್ಸೀ ಪಠಾನದಲ್ಲಿ ಬಾಲಿವುಡ್ ಕಲಾವಿದರನ್ನು ಆಂದೋಲನ ನಿರತ ರೈತರು ವಿರೋಧಿಸಿದ್ದು ಶೂಟಿಂಗಿಗೆ ತಡೆಯೊಡ್ಡಿದರು.


ಇಲ್ಲಿ ಫಿಲ್ಮ್ ಗುಡ್ ಲಕ್ ಜ್ಯಾರಿ ಶೂಟಿಂಗ್ ನಡೆಸಲು ತಂಡವು ತಲುಪಿತ್ತು .ಆದರೆ ರೈತ ಆಂದೋಲನಕಾರಿಗಳು ಶೂಟಿಂಗ್ ನಡೆಸಲು ತಡೆಒಡ್ಡಿದರು .
ಶೂಟಿಂಗ್ ಗಾಗಿ ನಟಿ ಜಾಹ್ನವಿ ಕಪೂರ್ ಕೂಡಾ ತಲುಪಿದ್ದರು. ಘಟನೆಯ ನಂತರ ಫಿಲ್ಮ್ ಯುನಿಟಿನ ವತಿಯಿಂದ ರೈತರನ್ನು ಖುಷಿಪಡಿಸುವ ತನಕ ಶೂಟಿಂಗ್ ಗೆ ಅನುಮತಿ ನೀಡಲಿಲ್ಲ.


ಅನಂತರ ಜಾಹ್ನವಿ ಕಪೂರ್ ತನ್ನ ಸ್ಟೇಟಸ್ ನಲ್ಲಿ ಮತ್ತು ಸೋಶಲ್ ಮೀಡಿಯಾ ಅಕೌಂಟ್ ನಲ್ಲಿ ರೈತರ ಪರವಾಗಿ ಹೇಳಿಕೆಗಳನ್ನು ನೀಡಬೇಕಾಯಿತು. ನಂತರವೇ ಶೂಟಿಂಗಿಗೆ ರೈತರು ಅನುಮತಿ ನೀಡಿದರು.


ಜಾಹ್ನವಿ ಕಪೂರ್ ಬರುತ್ತಲೇ ಆಂದೋಲನ ನಡೆಸುತ್ತಿದ್ದ ಯುವ ರೈತರ ಸಮೂಹವು ಅಲ್ಲಿಗೆ ಬಂತು. ರೈತರು ಬಾಲಿವುಡ್’ನ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಘಟನೆಯ ನಂತರ ಫಿಲ್ಮಿನ ಯುನಿಟ್ ಗೆ ಸಂಬಂಧಿತ ಲಾಲ್ಜಿತ್ ಸಿಂಗ್ ಮತ್ತು ಮನೀಷ್ ವಾಲಿಯ ಅವರು ಸ್ಥಳಕ್ಕೆ ಬಂದು ಯುವಕರ ಜೊತೆ ಮಾತನಾಡಿದರು