ಲವ್ ಯೂ ರಚ್ಚು ಗ್ಲಾಮರ್ ಲುಕ್ ನಲ್ಲಿ ರಚಿತಾ

 • ಚಿ.ಗೋ ರಮೇಶ್
  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಅಜಯ್ ರಾವ್ ಜೊತೆಯಾಗಿ ಕಾಣಿಸಿಕೊಂಡಿರುವ ” ಲವ್ ಯೂ ರಚ್ಚು” ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರ ಗಳಿಸಿದೆ.
  ” ಐ ಲವ್ ಯೂ ” ಬಳಿಕ ನಟಿ ರಚಿತಾ ರಾಮ್ ಮತ್ತೊಮ್ಮೆ ಗ್ಲಾಮರ್ ಲುಕ್ ನಲ್ಲಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಚಿತ್ರ ವೀಕ್ಷಣೆಗೆ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ.
  ಗುರು ದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಶಂಕರ್ ಎಸ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ..
  ನಿರ್ದೇಶಕ ಶಶಾಂಕ್ ರಾಜ್, ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ನಂತರ ನಟ ಅಜಯ್ ಗಾಗಿ ಬರೆದ ಕಥೆ ಇದು. ಆ ಎರಡು ಚಿತ್ರಗಳಲ್ಲಿ ಅಭಿಮಾನಿಗಳು ಇಷ್ಟಪಟ್ಟಂತೆ ಈ ಚಿತ್ರವೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು. ಅಜಯ್ ಮತ್ತು ರಾಧಿಕಾ ಪಂಡಿತ್ ಅವರನ್ನು ಚಿತ್ರದಲ್ಲಿ ನೋಡಿದ ರೀತಿ ಈ ಚಿತ್ರದಲ್ಲಿ ಅಜಯ್ ಮತ್ತು ರಚಿತಾರಾಮ್ ಅವರನ್ನು ಅಭಿಮಾನಿಗಳು ನೋಡಲಿದ್ದಾರೆ ಎನ್ನುವ ವಿವರಣೆ ತಂಡದ್ದು.
  ನಿರ್ಮಾಪಕ ಗುರು ದೇಶಪಾಂಡೆ ಮಾಹಿತಿ ನೀಡಿ, ಚಿತ್ರದಲ್ಲಿ ನಟಿ ರಚಿತಾ ರಾಮ್ ಅವರು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ ಕಥೆಗೆ ಪೂರಕವಾಗಿದೆ ಹಿನ್ನೆಲೆಯಲ್ಲಿ ಅವರು ಆ ರೀತಿ ನಟಿಸಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ಮಾಹಿತಿ ನೀಡಿದರು. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹಾಡಿನ ಅನಾವರಣ ಕಾರ್ಯಕ್ರಮ ಕಳೆದವಾರ ನಡೆಯಿತು. ಈ ವೇಳೆ ಮಾತಿಗಿಳಿದ ಅವರು “ಮುದ್ದು ನೀನು” ಹಾಡನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ಈ ಹಿಂದೆ ಪಡ್ಡೆ ಹುಲಿ ಮತ್ತು ಜೆಂಟಲ್ ಮ್ಯಾನ್ ಚಿತ್ರದಲ್ಲಿ ಹಾಡು ಬರೆದಿದ್ದರು. ಅದಾದನಂತರ ಮೂರನೇ ಬಾರಿ ಮತ್ತೆ ಹಾಡು ಬರೆದಿದ್ದು ಹಾಡು ಹಿಟ್ ಆಗುವ ನಿರೀಕ್ಷೆಯಿದೆ. ಮಣಿಕಾಂತ್ ಕದ್ರಿ ಸಂಗೀತ, ಸಿದ್ದು ಶ್ರೀರಾಮ್ ಹಾಡಿದ್ದಾರೆ ಎಂದರು.
  ಸಕಲೇಶಪುರ ಹಾಸನ ,ಬೆಂಗಳೂರು,ಸೇರಿದಂತೆ ಮತ್ತಿತರ ಭಾಗದಲ್ಲಿ ೫೦ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಲಾಗಿದೆ ಎನ್ನುವ ವಿವರ ನೀಡಿದರು. ಅಚ್ಯುತ್, ಬಿ.ಸುರೇಶ್, ರಾಘು ಶಿವಮೊಗ್ಗ ಸೇರಿದಂತೆ ಹಲವು ಕಲಾವಿದರ ದೊಡ್ಡ ಬಳಗವೇ ಚಿತ್ರದಲ್ಲಿದೆ.
  ಫಸ್ಟ್ ನೈಟ್ ನಲ್ಲಿ ಏನ್ಮಾಡ್ತಾರೆ…
  ಮದುವೆಯಾದ ನಂತರ ಫಸ್ಟ್ ನೈಟ್ ನಲ್ಲಿ ಎಲ್ಲಾ ಸಾಮಾನ್ಯವಾಗಿ ಎಲ್ಲಾ ಏನು ಮಾಡುತ್ತಾರೆ ಎಂದು ಪ್ರಶ್ನೆ ಕೇಳಿವದರನ್ನೇ ಮರು ಪ್ರಶ್ನಿಸಿದರು.
  “ಐ ಲವ್ ಯೂ” ಚಿತ್ರದ ಬಳಿಕ ಗ್ಲಾಮರ್ ಪಾತ್ರ ಮಾಡುವುದಿಲ್ಲ ಎಂದು ಹೇಳಿದ್ದೆ.ಆದರೆ ಮತ್ತೆ ಮಾಡಿದ್ದೇನೆ ಹಾಗಾದರೆ ಅದರಲ್ಲಿ ಏನು ವಿಶೇಷತೆ ಇರಬೇಕು ಎಂದರ್ಥ.
  ಫಸ್ಟ್ ನೈಟ್ ನಲ್ಲಿ ರೋಮ್ಯಾನ್ಸ್ ಮಾಡುತ್ತಾರೆ. ಅದನ್ನು ನಾವು ಚಿತ್ರದಲ್ಲಿ ಮಾಡಿದ್ದೇವೆ .ಆದರೆ ವಿವರವಾಗಿ ಹೋಗಿಲ್ಲ.ಸಿನಿಮಾ ನೋಡಿ ಗೊತ್ತಾಗುತ್ತೆ.
 • ರಚಿತಾ ರಾಮ್ ,ನಟಿ