ಲವ್ ಜಿಹಾದ್ ಗೆ ಸಿಲುಕಿದ ಯುವತಿಯರ ನೆರವಿಗಾಗಿ ಶ್ರೀರಾಮಸೇನೆಯಿಂದಸಹಾಯವಾಣಿ ಬಿಡುಗಡೆ


ದಾವಣಗೆರೆ. ಮೇ.೨೯; ಲವ್ ಜಿಹಾದ್ ಹೆಸರಿನಲ್ಲಿ‌ ಹಿಂದೂ ಯುವತಿಯರನ್ನು ಹಿಂಸಿಸುವ‌ಕೃತ್ಯ ಕೊನೆಗಾಣಿಸಲು ಹಾಗೂ ತೊಂದರೆಗೆ ಸಿಲುಕಿದ ಹಿಂದೂ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ‌ಸೇನೆಯಿಂದ ಸಹಾಯವಾಣಿ 9090443444 ಬಿಡುಗಡೆ ಮಾಡಲಾಯಿತು.ಸುದ್ದಿಗೋಷ್ಠಿಯಲ್ಲಿ ಸಹಾಯವಾಣಿ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್ ಜಿ ಕುಲಕರ್ಣಿ
ಕಳೆದ ಇಪ್ಪತ್ತು ವರ್ಷದಿಂದ ಶ್ರೀರಾಮ ಸೇನೆ ಲವ್ ಜಿಹಾದ್ ಬಗ್ಗೆ ಹೋರಾಟ ಮಾಡುತ್ತಾ ಬಂದಿದೆ.೨೦೦೮ ರಲ್ಲಿ‌  ಲವ್ ಜಿಹಾದ್ ಗೆ ಸಂಬಂಧ ಪಟ್ಟ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು.ಆ ವೇಳೆ ಕೆಲವರು ಲವ್ ಜಿಹಾದ್ ಸುಳ್ಳು ಇದು ಹಿಂದೂ ಸಂಘಟನೆಗಳು ಸೃಷ್ಠಿಸಿದೆ ಎಂದು ಹೇಳಿದ್ದರು.  ಕಳೆದ ಇಪ್ಪತ್ತು ವರ್ಷದಿಂದ ಲವ್ ಜಿಹಾದ್ ಬಗ್ಗೆ ಜಾಗೃತಿ ಮಾಡುತ್ತಾ ಬಂದಿದ್ದೇವೆ.ಇದೀಗ ಸಹಾಯವಾಣಿ ಮುಖಾಂತರ ಹಿಂದು ಯುವತಿಯರಿಗೆ ಹಾಗೂ ಅವರ ಕುಟುಂಬಕ್ಕೆ ಅರಿವು ಮೂಡಿಸುವ ಉದ್ದೇಶ ನಮ್ಮದು ಎಂದರು. ಲವ್ ಜಿಹಾದ್ ನಿಂದ ಹೊರಬರಲು ಶ್ರೀರಾಮ ಸೇನೆಯಿಂದ ಸಹಾಯ ನೀಡುವ ಉದ್ದೇಶ ಇದಾಗಿದೆ.ಈ ಸಹಾಯವಾಣಿ ೨೪*೭ ಕಾರ್ಯ ನಿರ್ವಹಣೆ ಮಾಡಲಿದೆ.ರಾಜ್ಯದ ಯಾವುದೇ ಮೂಲೆಯಿಂದಲೂ ಕರೆ ಬಂದರೆ ಸ್ವೀಕರಿಸಲಾಗುವುದು ಕೂಡಲೇ ಆಯಾ ಜಿಲ್ಲಾ ಟೀಮ್ ಕಾರ್ಯ ಪ್ರವೃತ್ತವಾಗಲಿದೆ ಈ ಮೂಲಕ ನೆರವು ನೀಡಲಾಗುವುದು ಇದರೊಂದಿಗೆ‌ಕಾನೂನು ಸಲಹೆ, ಲವ್ ಜಿಹಾದ್ ನಿಂದ ಹೊರಬಂದು ವಿದ್ಯಾಭ್ಯಾಸ ಮಾಡಲು ಇಚ್ಚಿ ಸಿದವರಿಗೆ  ನೆರವು, ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ, ಮಕ್ಕಳ ಸಮೇತ ಹೊರಬಂದರೆ ಮಕ್ಕಳ ವಿದ್ಯಾಭ್ಯಾಸ ನೀಡುವುದು ಹಾಗೂ ಕೋರ್ಟ್ ಕಚೇರಿ ನೆರವು ನೀಡಲಾಗುವುದು ಎಂದರು.ರಾಜ್ಯದ ಆರು ಕೇಂದ್ರಗಳಲ್ಲಿ‌ ಸಹಾಯವಾಣಿ ಉದ್ಘಾಟನೆ ಮಾಡಲಾಗಿದೆ.
ಕಲ್ಬುರ್ಗಿ ಯಲ್ಲಿ ಸಿದ್ದಲಿಂಗ ಶ್ರೀ, ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರು, ಮಂಗಳೂರು, ಬಾಗಲಕೋಟೆಯಲ್ಲಿಯೂ ಸಹಾಯವಾಷಿ ಉದ್ಘಾಟನೆ ಮಾಡಲಾಗಿದೆ.ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ ಹಿಂದೂ‌ಸಮಾಜದ‌  ಮೇಲೆ‌  ಕೆಟ್ಟ ಪ್ರಭಾವ ಬೀರುತ್ತಿರೆ ಇದನ್ನು‌  ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುವುದು ಎಂದರು.ವರದಿಗಳ ಪ್ರಕರ  ಓ ಇಂಡಿಯಾ ಮಾಧ್ಯಮ ೨೦೨೩ ರಲ್ಲಿ‌ ಒಂದು‌  ವರ್ಷದ ಸರ್ವೆ ಮಾಡಿದ್ದಾರೆ ಅದರ ಮಾಹಿತಿಯಂತೆ   ಲವ್ ಜಿಹಾದ್ ಕೇಸ್ ನಲ್ಲಿ‌ ೧೫೩ ಯುವತಿಯರ  ಭಯಾನಕವಾಗಿಕೊಲೆಯಾಗಿದೆ ಈ ಬಗ್ಗೆ ದಾಖಲೆ ಸಮೇತ ವರದಿ ಬಿಡುಗಡೆ ‌ಮಾಡಿದ್ದಾರೆ.ಶೇ.೨೭.೫% ಮೈನರ್ ಯುವತಿಯರ ಹತ್ಯೆ ಮಾಡಲಾಗಿದೆ.೧೫.೭% ದಲಿತ ಎಸ್ಸಿ‌ ಎಸ್ಟಿ ಮಹಿಳೆಯರು ಹತ್ಯೆಯಾಗುತ್ತಿದ್ದಾರೆ.೬೨.೩% ಮುಸ್ಲಿಂ ಯುವಕರು‌ ತಮ್ಮ‌ ಗುರುತು‌ಮುಚ್ವಿಟ್ಟು ಬೇರೆಬೇರೆ ಧರ್ಮದ ಹೆಸರಿನಲ್ಲಿ ಪರಿಚಯ ‌ಮಾಡಿಕೊಂಡು‌ ಹಿಂದೂಯುವತಿಯರನ್ನು ಮದುವೆ ಯಾಗಿದ್ದಾರೆ.ಅಶ್ಲೀಲ‌ವಿಡಿಯೋ ಫೋಟೊ,‌ಡ್ರಗ್ಸ್ ಜಾಲ ಭಯೋತ್ಪಾದನೆ ಜಾಲದಲ್ಲಿ ಹಿಂದೂ ಯುವತಿಯರನ್ನು ಸಿಲುಕಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.೨೦೧೪-೧೯ ರವರೆಗೆ ಸುಮಾರು ೨೧,೬೮೪ ಹಿಂದೂ ಯುವತಿಯರು ಕಾಣೆಯಾಗಿದ್ದಾರೆ.೨೦೧೯-೨೧ ರ ಅವಧಿಯಲ್ಲಿ‌ಒಟ್ಟು 13 ಲಕ್ಷ ೧೩ ಸಾವಿರ ಯುವತಿಯರ ಅಪಹರಣ ಅತ್ಯಾಚಾರ ಮತಾಂತರದ ಪ್ರಕರಣ ನಡೆದಿದೆ‌  ಎಂದು ಲೋಕಸಭೆಯಲ್ಲಿ‌ ಗೃಹ‌ಇಲಾಖೆ ದಾಖಲೆ‌ನೀಡಿದೆ ಎಂದು‌ ವಿವರಿಸಿದರು.ದೇಶ ಹಾಗೂ ‌ರಾಜ್ಯದಲ್ಲಿ‌  ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ.ಅದಕ್ಕೆ ತರಬೇತಿ‌ನೀಡಲಾಗುತ್ತಿದೆ.ರಾಕ್ಷಸೀಯ‌ಕೃತ್ಯದ ಮೂಲಕ‌ ಹತ್ಯೆ ‌ಘಟನೆ ನಡೆಯುತ್ತಿವೆ ಇದೆಲ್ಲವೂ ನಿರ್ಮೂಲನೆಯಾಗಬೇಕು‌ ಎಂದರು.ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿಸರ್ಕಾರ್‌ ಮಾತನಾಡಿ ಜೂ.೪ ರಂದು‌ ದಾವಣಗೆರೆಯ ಹೋಟೇಲ್ ಗಳು, ಶಾಲಾ ಕಾಲೇಜುಗಳು ,ಜ್ಯೂಸ್ ಸ್ಟಾಲ್ ಗಳಲ್ಲಿ‌ ಪ್ರತಿ ವಾರ್ಡ್ ರಸ್ತೆಗಳಲ್ಲಿಸಹಾಯವಾಣಿ ಪೋಸ್ಟರ್ ಅಳವಡಿಸಲಾಗುವುದು.ಕಳೆದೆರಡು‌ ತಿಂಗಳಲ್ಲಿ‌೨೦೦೦ ಮಂದಿ ಕಾರ್ಯಕರ್ತರು ಶ್ರೀರಾಮ‌ಸೇನೆ ಸೇರ್ಪಡೆಯಾಗಿದ್ದಾರೆ.ಹಿಂದೂಗಳು ಎಚ್ವೆತ್ತುಕೊಳ್ಳಬೇಕು ಇಲ್ಲದಿದ್ದರೆ ಜಿಕವನ ನಡೆಸುವುದೇ ದುಸ್ತರ ಎಂದರು.ಸುದ್ದಿಗೋಷ್ಠಿಯಲ್ಲಿ ಪರಶುರಾಮ ನಡುಮನಿ,ಪಿ.ಸಾಗರ್,ರಾಹುಲ್ ಬಿ.ಜಿ,ಶ್ರೀಧರ್,ಶಿವರಾಜ್ ಪೂಜಾರಿ,ಸುನೀಲ್ ವಾಲಿ,ರಾಜು,ಸಿದ್ದಾರ್ಥ್,ವಿನಯ್,ಮಂಜು,ಶಶಿಕುಮಾರ್ ಉಪಸ್ಥಿತರಿದ್ದರು.