ಲವ್ ಜಿಹಾದ್‌ಗೆ ಅವಕಾಶವಿಲ್ಲ

ಬೋಪಾಲ್,ಮೇ.೧೫- ಮಧ್ಯಪ್ರದೇಶದ ನೆಲದಲ್ಲಿ “ಲವ್ ಜಿಹಾದ್ ಮತ್ತು “ಮತಾಂತರ”ಕ್ಕೆ ಯಾವುದೇ ಸ್ಥಳವಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಹೇಳಿದ್ದಾರೆ.
ಜೊತೆಗೆ ಮಧ್ಯಪ್ರದೇಶವನ್ನು ’ಕೇರಳ ಸ್ಟೋರಿ ಮಾದರಿಯಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುಡುಗಿದ್ದಾರೆ.
ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ಚಿತ್ರದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕೇರಳ ಸ್ಟೋರಿ’ಗೆ ತೆರಿಗೆ ಮುಕ್ತ ಸ್ಥಾನಮಾನ ನೀಡಲಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಸುಧಾರಿಸಲು ಒತ್ತು ನೀಡಲಾಗುವುದು ಎಂದಿದ್ದಾರೆ.
“ಕಳೆದ ವರ್ಷ, ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ೮ ನಕ್ಸಲೀಯರು ಹತ್ಯೆ ಮಾಡಿದ್ದರು. ಸಿಮಿಯ ನೆಟ್‌ವರ್ಕ್, ಡಕಾಯಿತರು ಮತ್ತು ನಕ್ಸಲೀಯರ ವಿರುದ್ಧ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೇರಳ ಸ್ಟೋರಿ ಆಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಹೆಣ್ಣುಮಕ್ಕಳನ್ನು ಮತಾಂತರಿಸುವ ಪರಿಸ್ಥಿತಿಗಳಿಗೆ ಅವಕಾಶ ಮಾಡಿಕೊಡುವುದಿಲ್ಲ.”ಲವ್-ಜಿಹಾದ್, ಮತಾಂತರಕ್ಕೆ ರಾಜ್ಯದಲ್ಲಿ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಎಟಿಎಸ್ ತಂಡ ಮತ್ತು ಕೇಂದ್ರ ಏಜೆನ್ಸಿಗಳು ಜಂಟಿಯಾಗಿ ಭೋಪಾಲ್‌ನಿಂದ ೧೦ ಜನರನ್ನು ಮತ್ತು ಚಿಂದ್ವಾರದಿಂದ ಒಬ್ಬರನ್ನು ಬಂಧಿಸಿವೆ, ಎಲ್ಲರೂ ಪೊಲೀಸ್ ರಿಮಾಂಡ್‌ನಲ್ಲಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.