‘ಲವ್ ಗುರು’ ಮೂಲಕ ಮರಳಿ ಬಂದ ತರುಣ್ ಚಂದ್ರ

ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ತರುಣ್ ಚಂದ್ರ ಐದು ವರ್ಷಗಳ ನಂತರ ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ ಈ ಬಾರಿ ಅವರು ವಿಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.
ಐದು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದೆ. ಅಮೆರಿಕಕ್ಕೆ ತೆರಳಿ ನಿರ್ದೇಶನ ವಿಭಾಗದಲ್ಲಿ ಕೋರ್ಸ್‌ ಮುಗಿಸಿಕೊಂಡು ಬಂದಿದ್ದೇನೆ. ಒಂದೊಳ್ಳೆ ಸಬ್ಜೆಕ್ಟ್‌ ಮೂಲಕ ಚಿತ್ರರಂಗಕ್ಕೆ ಮರುಪ್ರವೇಶಿಸಬೇಕು ಎನ್ನುವ ಕಾರಣಕ್ಕೆ ತಯಾರಿಯಲ್ಲಿ ತೊಡಗಿದ್ದೆ ಎಂದರು ತರುಣ್.
ಅಂದಹಾಗೆ ..ಲವ್ ಗುರು ವಿಡಿಯೋ ಆಲ್ಬಂನಲ್ಲಿ
“ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ..” ಹೀಗೆ ಹಾಡು ಆರಂಭವಾಗಲಿದೆ.
ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್‌ ವಿಡಿಯೋ ಇದಾಗಿದೆ.
ನಿರ್ಮಾಪಕ ಗಣೇಶ್‌ ಪಾಪಣ್ಣ ವಿಡಿಯೋ ಹಾಡು ನಿರ್ದೇಶಿಸಿದ್ದಾರೆ.
ಖಳನಟ ಲಕ್ಕಿ ಲಕ್ಷ್ಮಣ್ ಹಾಡಿದ್ದಾರೆ.ನಟಿ ನುತಶ್ರೀ ಜಗತಪ್‌ ಹಾಹು ಮಹಂತೇಶ್‌ ಹಾಡಿನಲ್ಲಿದ್ದಾರೆʼʼ ಎಂದು ನಿರ್ದೇಶಕ ಗಣೇಶ್‌ ಪಾಪಣ್ಣ ಹೇಳಿದರು.
ಅನಿಮೇಷನ್‌ ಉದ್ಯಮದಲ್ಲಿ ಹೊಸ ಕಲ್ಪನೆ.. ಬೇರೆ ಭಾಷೆ, ದೇಶಗಳಲ್ಲಿ ಒರಿಜಿನಲ್‌ ಗಳು ಸಾಕಷ್ಟು ತಯಾರಾಗುತ್ತಿರುತ್ತವೆ. ಮೂರೂವರೆ ತಿಂಗಳುಗಳು ಶ್ರಮಪಟ್ಟು ʻಲವ್‌ ಗುರುʼ ಹಾಡನ್ನು ರೂಪಿಸಿದ್ದೇವೆ. ಇದನ್ನು ಜನ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ಎಂದರು ಲಹರಿ ಮ್ಯೂಸಿಕ್‌ ಸಂಸ್ಥೆಯ ನವೀನ್‌ ಮನೋಹರನ್‌.
ಗೌಸ್‌ ಪೀರ್‌ ಬರೆದಿರುವ ಹಾಡಿಗೆ ಎಲ್ವಿನ್‌ ಜೋಷ್ವಾ ಸಂಗೀತ, ಆರ್.ಜೆ. ರಘು ನೃತ್ಯ ನಿರ್ದೇಶನ, ಅರುಣ್‌ ರಾಚಪುಟಿ ಛಾಯಾಗ್ರಹಣವಿದೆ.