ಲಲಿತ್ -ಸುಶ್ಮಿತಾ ಡೇಟಿಂಗ್ ಮಾಜಿ ಪ್ರಿಯಕರನ ಹಾರೈಕೆ

ಮುಂಬೈ,ಜು.೧೬- ಬಾಲಿವುಡ್ ನಟಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತು ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಡೇಟಿಂಗ್ ನಡೆಸುತ್ತಿರುವ ವಿಷಯ, ಹಲವರನ್ನು ಆಶ್ಚರ್ಯ ಚಕಿತಗೊಳಿಸಿದೆ.
ಅದರಲ್ಲಿಯೂ ಸುಶ್ಮಿತಾ ಮಾಜಿ ಪ್ರಿಯಕರ ರೋಶನ್ ಶಾಲ್ ಪ್ರತಿಕ್ರಿಯೆ ನೀಡಿ,” ಸುಶ್ಮಿತಾ ಸಂತೋಷವಾಗಿರಲಿ. ಪ್ರೀತಿ ಸುಂದರವಾಗಿರುತ್ತದೆ ಎನ್ನುವ ನಂಬಿಕೆ ಇದೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋದದ ಹೇಳಿಕೆ ವ್ಯಕ್ತವಾಗಿವೆ. ಜುಲೈ ೧೪ ರಂದು ಸುಶ್ಮಿತಾ ಸೇನ್ ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದ ಲಲಿತ್ ಮೋದಿ ಹೊಸ ಜೀವನ ಆರಂಭ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದರು.
ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಆಶ್ಚರ್ಯಚಕಿತರಾಗಿದ್ದರೆ, ಅವರ ಮಾಜಿ ಗೆಳೆಯ ರೋಹ್ಮನ್ ಶಾಲ್ ಜೋಡಿಗೆ ಶುಭ ಹಾರೈಸಿದ್ದಾರೆ.
೨೦೧೮ ರಲ್ಲಿ ಸುಶ್ಮಿತಾ ಸೇನ್ ಮೊದಲ ಬಾರಿಗೆ ರೋಹ್ಮನ್ ಶಾಲ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸುಶ್ಮಿತಾ ಮತ್ತು ರೋಹ್ಮನ್ ಕುಟುಂಬ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡಿದ್ದರು.
ತನ್ನ ಮಾಜಿ ಗೆಳೆಯ ರೋಹ್ಮನ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ಸುಶ್ಮಿತಾ, “ನಾವು ಸ್ನೇಹಿತರಾಗಿ ಪ್ರಾರಂಭಿಸಿದ್ದೇವೆ, ನಾವು ಸ್ನೇಹಿತರಾಗಿಯೇ ಇದ್ದೇವೆ. ಸಂಬಂಧ ಮುಗಿದಿದೆ … ಪ್ರೀತಿ ಉಳಿದಿದೆ ಎಂದು ಸುಶ್ಮಿತಾ ಟ್ವೀಟ್ ಮಾಡಿ ರೋಹ್ಮನ್ ಜೊತೆಗಿನ ಸಂಬಂದವನ್ನು ೨೦೨೧ ರ ಡಿಸೆಂಬರ್ ನಲ್ಲಿ ಸಂಬಂಧ ಕಡಿತ ಮಾಡಿಕೊಂಡಿದ್ದರು.