
ಸಿರವಾರ.ಮಾ. ೩- ತಾವು ಶ್ರೇಷ್ಠ ಜಾತಿಯಲ್ಲಿದೆವೆ, ಬೇರೆ (ಕೀಳು) ಜಾತಿಯವರ ಮಕ್ಕಳಲ್ಲಿ ತಾರತಮ್ಯ ಮಾಡುವವರ ನಡುವೆ ಲಲಿತಾ ಬಾಯಿ ನಮಗೆ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದರು. ಇಂತವರ ಸೇವೆ ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿ ಬೇಕು, ಆದರೆ ಸರ್ಕಾರಿ ಕೆಲಸದಲ್ಲಿ ವಯೋ ನಿವೃತ್ತಿ ಸಹಜ ಎಂದು ಜೆಡಿಎಸ್ ಯುವ ಮುಖಂಡ ಹಾಗೂ ಅಖಿಲ ಭಾರತ ಬಂಜಾರ ಸಂಘದ ಸಿರವಾರ ತಾಲೂಕ ಗೌರವಾದ್ಯಕ್ಷ ಪರಮೇಶ ನಾಯ್ಕ್ ಮುರ್ಕಿಗುಡ್ಡ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದ ಸ.ಮಾ.ಹಿ.ಪ್ರಾ.ಬಾಲಕ ಶಾಲೆ ಶಿಕ್ಷಕಿ ಲಲಿತಾ ಬಾಯಿ ಅವರ ವಯೋನಿವೃತ್ತಿಯಲ್ಲಿ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಯಾಗಿ ಭಾಗವಹಿಸಿ ಲಲಿತಾ ಬಾಯಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ೨೦೦೪-೦೫ ರಲ್ಲಿ ಇದೇ ಶಾಲೆಯಲ್ಲಿ ನಾನು ಅಭ್ಯಾಸ ಮಾಡುವಾಗ ಇವರು ಶಿಕ್ಷಕಿಯಾಗಿದರು, ಇವರನ್ನು ಶಿಕ್ಷಕಿ ಎನ್ನುವುದಕಿಂತ ತಾಯಿ ಎಂದರೆ ತಪ್ಪಾಗುವುದಿಲ. ಇವರು ಬ್ರಾಹ್ಮಣ ಜಾತಿಯವರಾಗಿದರೂ ಅಂದಿನ ಕಾಲದಲ್ಲಿಯೇ ನಮ್ಮಂತವರನ್ನು ತಮ್ಮ ಮನೆಯಲ್ಲಿ ಓಡಾಡಿಕೊಂಡು ಇರುತ್ತಿದ್ದರೂ ಒಂದು ದಿನವೂ ಸಹ ಜಾತಿ ತಾರತಮ್ಯ ಮಾಡಿಲ. ನಾವು ಊರಿಗೆ ಹೋಗುವದಕ್ಕೆ ಸಹ ಆರ್ಥಿಕ ಸಹಾಯ ಮಾಡುತ್ತಿದ್ದರು.
ಇಂದು ನಾವು ಈ ರೀತಿಯಾಗಿದೆವೆಂದರೆ ಅದಕ್ಕೆ ಮುಖ್ಯ ಕಾರಣ ಲಲಿತಾ ಬಾಯಿ ಅಮ್ಮನವರು. ಇಂದು ಅನೇಕ ಶಾಲೆಗಳಲ್ಲಿ, ಶಿಕ್ಷಕರು ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಾರೆ. ಆದರೆ ಇವರು ಒಂದು ಬಾರಿಯೂ ಸಹ ಆ ರೀತಿ ನಡೆದುಕೊಂಡಿಲ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ, ಆಯುರಾರೋಗ್ಯದಿಂದ ಇರಲಿ. ಅವರಿಗೆ ನಮ್ಮಂದಿ ಯಾವುದಾದರೂ ಸವೇ ಮಾಡಲು ಸಿದ್ದ ಎಂದರು.
ಶಿಕ್ಷಕಿ ಲಲಿತಾ ಬಾಯಿ ಮಾತನಾಡಿ ಶಿಕ್ಷಕರಾದವರು ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ಪಾಲಕರಲ್ಲಿರುವುದಕಿಂತಲೂ ನಮ್ಮ ಹತ್ತಿರವೆ ಹೆಚ್ಚು ಸಮಯ ಇರುತ್ತಾರೆ. ಒಳೇಯ ಸಂಸ್ಕಾರ, ವಿದ್ಯಾಭ್ಯಾಸ ಹೇಗೆ ಮಾಡಬೇಕು ಭೋದಿಸಬೇಕು. ನನ್ನ ಸೇವಾ ಅವದಿಯಲ್ಲಿ ಒಬ್ಬೇ ಒಬ್ನ ವಿದ್ಯಾರ್ಥಿಗಳಲ್ಲಿ ಜಾತಿ ತಾರತಮ್ಯ ಮಾಡಲಿ. ನನ್ನ ಮೇಲೆ ಅಭಿಮಾನ ಇಟ್ಟು ಬಂದಿರುವ ಬಂದಿರುವ ಎಲ್ಲಾರಿಗೂ ದನ್ತವಾದಗಳು ಎಂದರು.
ಈ ಸಂದರ್ಭದಲ್ಲಿ ಬಸವರಾಜ, ಬಾಬು ರಾಠೋಡ, ಅಂಬೇಡ್ಕರ್ ಯುವ ಸೇನೆ ಲಕ್ಷ್ಮಣ , ಏಸುರಾಜ, ಬಸವರಾಜ, ಲಕ್ಷ್ಮಣಬೋವಿ, ಶಿಕ್ಷಕ ಆಂಜನೆಯ್ಯ, ಪ್ರಸಾದ್, ಪಾಂಡುರಂಗ, ಶಿಕ್ಷಕರು/ಕೀಯರು ವಿದ್ಯಾರ್ಥಿಗಳು, ಪಾಲಕರು ಇದರು.