ಲಲಿತಕಲೆಗಳಲ್ಲಿ ನಾಟಕ ಅಗ್ರಗಣ್ಯವಾದದ್ದು : ಪ್ರೊ.ಎನ್.ಶಾಂತ ನಾಯಕ

ಬಳ್ಳಾರಿ, ಜ.13: ಮಾನವನ ಸೌಂದರ್ಯ ಪ್ರಜ್ಞೆ ರಚಿಸಿಕೊಂಡ ಲಲಿತಕಲೆಗಳಲ್ಲಿ ನಾಟಕ ಅಗ್ರಗಣ್ಯವಾದದ್ದು ಎಂದು ವಿ.ಎಸ್.ಕೆ.ವಿ.ವಿಯ ಪ್ರೊ|| ಎನ್.ಶಾಂತನಾಯಕ ಅಭಿಪ್ರಾಯಪಟ್ಟರು.
ಅವರು ರಂಗ ಜಂಗಮ ಸಂಸ್ಥೆ ಮತ್ತು ಗಾಯತ್ರಿ ಪ್ರಕಾಶನ ಸಹಯೋಗದಲ್ಲಿ ರಂಗಗೀತೆ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ವೃತ್ತಿರಂಗಭೂಮಿ ಜನಸಾಮಾನ್ಯರ ನಡುವೆ ಸೇತುವೆಯಾಗಿ ಕೆಲಸ ಮಾಡಿ ಕಾಲಕ್ರಮೇಣ ಮಾಧ್ಯಮಗಳ ಪ್ರಭಾವದಿಂದ ಹೊರಬಂದು ಕೊನೆಯ ಹಂತಕ್ಕೆ ಬಂದು ತಲುಪಿದೆ ಎಂದರು. ಕಲೆ ಮುಂದು ಶಾಸ್ತ್ರ ಇಂದು ಎಂಬುದನ್ನು ಒಂದನೇ ಶತಮಾನದಲ್ಲಿ ಭರತಮುನಿ ನಾಟ್ಯಶಾಸ್ತ್ರವನ್ನು ರಚಿಸುವ ಮೂಲಕ ಪಂಚಮವೇದ ನಾಟ್ಯವೇದವನ್ನು ರಂಗಭೂಮಿಗೆ ಕೊಡುಗೆಯಾಗಿ ನೀಡಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲರು ಮಾತನಾಡುತ್ತ, ದಿವಂಗತ ಶಂಕರನಾಯ್ಡು ಅವರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ಗಂಭೀರ ಪಾತ್ರಗಳನ್ನು ಅರ್ಧ ಶತಮಾನಕ್ಕೂ ಹೆಚ್ಚು ಸೇವೆ ಮಾಡುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಇದ್ದಾರೆ ಸಾವಿರಾರು ಪ್ರದರ್ಶನಗಳನ್ನು ನಿರಂತರವಾಗಿ ನಟರಾಗಿ ನಿರ್ದೇಶಕರಾಗಿ ರಂಗಭೂಮಿಯಲ್ಲಿ ದಾಖಲಾಗಿದ್ದರು ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದೆ ನಮ್ಮೆಲ್ಲರ ಸೌಭಾಗ್ಯ ಎಂದರು.
ನಂತರ ಗಾಯತ್ರಿ ಪ್ರಕಾಶನ ಪಬ್ಲಿಕೇಶನ್ ನಲ್ಲಿ ಬಿಡುಗಡೆಯಾದ ಡಾ.ಕೆ ನಾಗರತ್ನಮ್ಮ ಇವರ ತೆಲುಗು ಕವನ ಸಂಕಲನ “ಒ ಬಾಟ ಸಾರಿ” ಹಾಗೂ ಡಾ.ಅಣ್ಣಾಜಿ ಕೃಷ್ಣರೆಡ್ಡಿ ಸಂಪಾದಕತ್ವದ ಸಂಶೋಧನಾ ಲೇಖನಗಳು ಸಂಶೋಧನಾ ತರಂಗ ಕೃತಿ (ಪುಸ್ತಕಗಳನ್ನು )ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್‍ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿದ್ದರಾಮ ಕಲ್ಮಠ ಅವರು ಮಾತನಾಡುತ್ತಾ, ಡಾ.ಕೆ ನಾಗರತ್ನಮ್ಮ ಅವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅದೇ ನಿಟ್ಟಿನಲ್ಲಿ ಕನ್ನಡ ಮತ್ತು ತೆಲುಗು ಸಂಸ್ಕೃತಿಯ ಅವಿನಾಭವ ಸಂಬಂಧಗಳನ್ನು ಸಾರುವ ಇಂತಹ ಸಾಹಿತಿಗಳು-ನಮ್ಮ ನಾಡಿನಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದರು.
“ಸಂಶೋಧನಾ ತರಂಗ” ಲೇಖನಗಳ ಸಂಪಾದಕ ಕೃತಿಯನ್ನು ಕುರಿತು, ಹಲವಾರು ಹಿರಿಯ ರಂಗಭೂಮಿ ಕಲಾವಿದರ ರಂಗಭೂಮಿಯ ಲೇಖನಗಳು ಅವರ ಮುಂದಿನ ರಂಗಭೂಮಿಯ ಪೀಳಿಗೆಗೆ ಮಾರ್ಗದರ್ಶನದಂತೆ ಇಂತಹ ಕೃತಿಗಳು ಮೂಡಿಬರಲಿ ಎಂದರು.
ಕಾರ್ಯಕ್ರಮದಲ್ಲಿ ದಿ.ಆರ್ ಪರಮಶಿವನ್ ಬದುಕನ್ನು ಕುರಿತು ಉಪನ್ಯಾಸವನ್ನು ನೀಡಿದ ಡಾ.ಬಸಪ್ಪ ಕಟ್ಟಿಮನಿ ಅವರು, ಪರಮಶಿವನ ಅವರು ವೃತ್ತಿರಂಗಭೂಮಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಸೇವೆ ಮಾಡಿದ ಸಂಗೀತ ರಂಗಭೂಮಿ ಕಲಾವಿದರು ರಂಗಸಂಗೀತ ಸಂಯೋಜನೆಗಳನ್ನು ಕಂಪ್ಯೂಟರ್ನಲ್ಲಿ ಅಡಗಿಸಿಕೊಂಡಿರುವ ಹಾಗೆ ತಮ್ಮ ನೆನಪಿನ ಶಕ್ತಿಯಲ್ಲಿ ಸಾವಿರಾರು ಹಾಡುಗಳನ್ನು ಸಂಗ್ರಹಿಕೊಂಡಿದ್ದರು. ಅವರು ಸಂಗೀತ ಕ್ಷೇತ್ರದಲ್ಲಿ ಹಿಂದುಸ್ತಾನಿ ಸಂಗೀತ ಜನಪದಗೀತೆಗಳು ನಾಲಿಗೆ ಮೇಲೆ ಲೀಲಾಜಾಲವಾಗಿ ನರ್ತಿಸುತ್ತಿದ್ದರು ಪಾಶ್ಚಿಮಾತ್ಯ ಸಂಗೀತದಲ್ಲಿ ಪರಿಶ್ರಮವಿರುವ ಪರಮಶಿವನ್ ಅವರು ತಮ್ಮ ಕರ್ನಾಟಕ ಸಂಗೀತದಲ್ಲಿ ಪಾಶ್ಚಿಮಾತ್ಯ ಸಂಗೀತದಲ್ಲೂ ಕೂಡ ರಾಗಸಂಯೋಜನೆ ಮಾಡುವ ಅಪ್ರತಿಮ ಕಲಾವಿದ ಎಂದರು.
ದಿ.ಸಿ.ಶಿವಶಂಕರ್ ನಾಯ್ಡು ಅವರ ಹುಟ್ಟುಹಬ್ಬದ ಅಂಗವಾಗಿ ರಂಗಾಯಣದ ಶಿವೇಶ್ವರ ಗೌಡ ಕಲ್ಲುಕಂಬ ಮಾತನಾಡುತ್ತಾ, ಹತ್ತುಹನ್ನೆರಡು ವರ್ಷಗಳ ಕಾಲ ನಿರಂತರವಾಗಿ ಕೂಡಿಕೊಂಡು ರಂಗಭೂಮಿಯಲ್ಲಿ ಆತ6ಮೀಯರಾಗಿದ್ದೆವು.ನಂತರ ಬೀದಿನಾಟಕಗಳ ಮೂಲಕ ಪರಿಚಯಾತ್ಮಕವಾಗಿ ನಾಟಕಗಳನ್ನು ಕಟ್ಟುವ ಅವರ ರೀತಿ ಮತ್ತು ಪ್ರದರ್ಶನ ಮಾಡಿದ ಹಲವಾರು ನಾಟಕಗಳು ನಮ್ಮಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ ಎಂದರು.
ವಿಷ್ಣು ಹಡಪದ ತಂಡದಿಂದ ರಂಗಗೀತೆಗಳನ್ನು ಪ್ರಸ್ತುತಪಡಿಸಲಾಯಿತು