ಲಯನ್ಸ ಹಿರಿಯ ನಾಗರಿಕರ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ

ವಿಜಯಪುರ, ಜು.30-ನಗರದ ಲಯನ್ಸ್ ಬ್ಲಡ್ ಬ್ಯಾಂಕ್ ಸಭಾ ಭವನದಲ್ಲಿ 2022-23ನೇ ಸಾಲಿನ ನೂತನ ಲಯನ್ಸ್ ಹಿರಿಯ ನಾಗರಿಕರ ವೇದಿಕೆ ವಿಜಯಪುರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ದಿವ್ಯಸಾನಿಧ್ಯ ವಹಿಸಿದ್ದ ಪ.ಪೂ. ವಿರೂಪಾಕ್ಷಿದೇವರು ಓಂಕಾರೇಶ್ವರ ಆಶ್ರಮ, ಹಿರೇಮಠ ಗೊರನಾಳ ಅವರುಈ ವೇದಿಕೆಯಲ್ಲಿ ಎಲ್ಲರೂಅನುಭವಸ್ಥರುಹಿರಿಯರೇ ಕೂಡಿದ್ದೀರಿ ನಿಮ್ಮಲ್ಲಿರುವಸಹಕಾರ ಸಹಜೀವನವೇ ಇಂಥ ಸಂಘಗಳ ಅಭಿವೃದ್ದಿಗೆ ದಾರಿ ಎಂದುಹೇಳಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಆನಂದ ಅಂಬಲಿ ಹಿರಿಯ ನಾಗರಿಕರ ವಿಭಾಗದಬಿ.ಎಲ್.ಡಿ.ಇ. ಆಸ್ಪತ್ರೆ ವೈದ್ಯರು, ನೀವೆಲ್ಲರೂ ಇಷ್ಟೊಂದು ಸಂತೋಷದಿಂದ ನಗು-ನಗುತ್ತ ಸಂಘದಲ್ಲಿ ಕಾರ್ಯ ಮಾಡುವದನ್ನು ನೋಡಿದರೆ, ನಿಮ್ಮನ್ನು ನೋಡಿ ಕಿರಿಯರು ಕಲಿಯುವದು ಬಹಳಿಷ್ಟಿದೆ. ಬೆಳಿಗ್ಗಿನ ವಾಕಿಂಗ್, ನಿಯಮಿತ ಆಹಾರ ಸೇವನೆ ನಿಮ್ಮ ಆರೋಗ್ಯ ನೀವೇ ಕಾಯ್ದುಕೊಳ್ಳಬಹುದೆಂದು ಹೇಳಿದರು.
ಅಧಿಕಾರ ಹಸ್ತಾಂತರ ಅಧಿಕಾರಿಗಳಾಗಿಆಗಮಿಸಿದ, ಡಾ. ಪ್ರಭುಗೌಡ ಪಾಟೀಲ ಶ್ರೇಷ್ಠ ನೇತ್ರ ತಜ್ಞರು, ಲಯನ್ಸ್ ಕ್ಲಬ್ ಅಧ್ಯಕ್ಷರು ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯ ನೆರವೇರಿಸಿ, ಇಲ್ಲಿರುವ ಎಲ್ಲ ಹಿರಿಯರಲ್ಲಿರುವಉತ್ಸಾಹ ಕಾರ್ಯಚಟುವಟಿಕೆ ನೋಡಿ, ನಾವೇ ಕಲಿಯುವುದು ಬಹಳ ಇದೆ ಎಂದು ಕೆಲವೊಂದು ಜಾನಪದ ನುಡಿಗಳ ಉದಾಹರಣೆ ಕೊಟ್ಟು ಮಾತನಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಭರತೇಶ ಕಲಗೊಂಡ ಅವರು ಎಲ್ಲ ಸದಸ್ಯರ ಸ್ನೇಹ, ಸಹಾಯ ಸಹಕಾರ ಒಂದು ಇದ್ದರೆ ಯಾವುದೇ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವೆಂದು ಹೇಳಿದರು.
ಸೋಮಶೇಖರ ಕುರ್ಲೆ, ಬಾಬುರಾವ ಕುಲಕರ್ಣಿ ಭಕ್ತಿಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಎಸ್.ಸಿ. ಕಮತಗಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಡಾ. ಎಸ್.ಎಸ್. ಆನಂತಪೂರ ವಂದನಾರ್ಪಣೆ ಮಾಡಿದರು.
ನೂತನ ಪದಾಧಿಕಾರಿಳಾಗಿಪ್ರೊ. ಎ.ಎಸ್. ಕೋರಿ ಗೌರವಾಧ್ಯಕ್ಷರು, ಡಾ. ಎನ್.ಬಿ. ದೇಸಾಯಿ ಉಪಾಧ್ಯಕ್ಷರು, ಆರ್.ಎ. ಗುಡಿ ಖಜಾಂಚಿ, ಶ್ರೀಮತಿ ಅಕ್ಕಮಹಾದೇವಿ ಹೊಸೂರ ಸಹ ಖಜಾಂಚಿ, ಶ್ರೀಮತಿ ಎಸ್.ಬಿ. ಭಜಂತ್ರಿ ಕಾರ್ಯದರ್ಶಿ ಮತ್ತು ಶ್ರೀಮತಿ ಎನ್.ಎಸ್. ಸಜ್ಜನ ಸº ಕಾರ್ಯದರ್ಶಿ ಮತ್ತು ಸಲಹಾ ಸಮಿತಿ ಸದಸ್ಯರುಗಳಾಗಿ ಪ್ರೊ. ಕೆ.ಎಸ್. ಪಾಟೀಲ, ಡಾ. ಎಸ್.ಬಿ.ಬೀಳೂರ, ಡಾ. ಎಸ್.ವಿ. ಜಾಲಗೇರಿ, ಎಸ್.ಎಂ. ಇನಾಮದಾರ, ಪ್ರೊ. ಎನ್.ಆರ್. ಕುಲಕರ್ಣಿ,ವಿ.ಎಸ್. ಸಾವಳಗಿಮಠ, ಎಸ್.ವೈ. ನಡುವಿನಕೇರಿ, ಎಸ್.ಎ. ಕಿಣಗಿ, ಶ್ರೀಮತಿ ಬಿ.ಟಿ. ಶಿಂಧೆ, ಎಸ್.ವೈ. ವಾಲಿಕಾರ, ಎಸ್.ಎನ್. ನಿಂಬಾಳ ಶ್ರೀಮತಿ ವಿ.ಎಸ್. ಹಂದಿಗೋಳ, ಶ್ರೀಮತಿ ಆರ್.ಎಚ್. ಹುಣಶಿಗಿಡದ ಶ್ರೀಮತಿ ಆರ್.ಆರ್. ಮದರಡ್ಡಿ, ಬಿ.ಎಸ್. ಹೊನಬರಟ್ಟಿ ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.