ಲಯನ್ಸ್ ಸೌತ್ ಅಧ್ಯಕ್ಷರಾಗಿ ಕಾಮಾಕ್ಷಿ ನೇಮಕ

ಕೋಲಾರ, ಜು.೧೨: ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸೌತ್-೩೧೭ಎ ಗೆ ನೂತನ ಅಧ್ಯಕ್ಷರಾಗಿ ಕೋಲಾರ ತಾಲ್ಲೂಕು ಅರಹಳ್ಳಿ ಗ್ರಾಮದ ಕೆ.ಎನ್. ಕಾಮಾಕ್ಷೀ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಇವರೊಂದಿಗೆ ಕಾರ್ಯದರ್ಶಿಯಾಗಿ ಸ್ವಾತಿ ಜಿ. ಪಟೇಲ್, ಕೋಶಾಧಿಕಾರಿಯಾಗಿ ಡಾ|| ಎಸ್. ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷರಿಗೆ ಪಿಡಿಜಿ ಲಯನ್ ಶಶಿ ಕುರಾನ, ಎಂಜೆಎಫ್ ರವರು ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷರು ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡುವುದಾಗಿ ಆಶ್ವಾಸನೆ ನೀಡಿದರು. ಹಾಗೂ ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷರಾದ ಪಿಡಿಜಿ ಲಯನ್ ಎಸ್. ಶ್ರೀರಾಮುಲು, ಎಂಜೆಎಫ್ ವಹಿಸಿದ್ದರು. ಮತ್ತು ಪಿಡಿಜಿ ಲಯನ್ ಡಾ|| ಕೆ.ಆರ್. ಸಂಜೀವ ಗುಪ್ತಾ, ಎಂಜೆಎಫ್ ರವರು ಹಾಗೂ ಪಿಡಿಜಿ ಲಯನ್ ಪ್ರೊ. ಟಿ.ಜೆ. ರಾಮಮೂರ್ತಿ, ಪಿಎಂಜೆಎಫ್ ರವರು ಆಗಮಿಸಿ ಮಾತನಾಡಿ ಶುಭ ಕೋರಿದರು. ಹಾಗೂ ವಿಶೇಷ ಆಹ್ವಾನಿತರಾಗಿ ಲಯನ್ ಡಾ|| ಎಸ್. ವೆಂಕಟೇಶ್, ಎಂಜೆಎಫ್ ರೀಜನ್ ಛೇರ್‍ಪರ್ಸನ್ ಮತ್ತು ಲಯನ್ ಜಿ. ಶೀಲಾ, ಎಂಜೆಎಫ್, ಜೋನ್ ಛೇರ್‍ಪರ್ಸನ್ ರವರು ಭಾಗವಹಿಸಿದ್ದರು.
ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಬ್ರಾಹ್ಮಣ ಸಮಾಜದ ನಂದವರೀಕ ಕ್ಷೇಮಾಭಿವೃದ್ಧಿ ಸಮುದಾಯ (ರಿ) ನ ಗೌರವ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ್ ರವರು ನಂದವರೀಕ ಕುಲದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಲಯನ್ ಕೆ.ಎನ್. ಕಾಮಾಕ್ಷಿ ರವರು ಚುನಾಯಿತರಾಗಿರುವುದಕ್ಕೆ ಅಭಿನಂದಿಸಿದರು.