ಲಯನ್ಸ್ ಸಂಸ್ಥೆ ಸೇವೆ ಎಲ್ಲರಿಗೂ ಸಲ್ಲಬೇಕು

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಅ.೧೭;ಲಯನ್ಸ್ ಸಂಸ್ಥೆ ಬೆಳೆಯಬೇಕು ಬಲಿಷ್ಠಗೊಳ್ಳಬೇಕು ಮತ್ತು ಇದರ ಸೇವೆ ಎಲ್ಲರಿಗೂ ಸಲ್ಲಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ನೆರಿ ಕರ್ನಲ್ಲಿಯೋ ಹೇಳಿದರು.ಶಿರಾಳಕೊಪ್ಪದ ಸೇವಾ ವಿಕಾಸ ಶಾಲೆ ಸಭಾಂಗಣದಲ್ಲಿ ವಲಯ  ಮಟ್ಟದ ಕ್ಲಬ್ ಸದಸ್ಯರ ನಾಯಕತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಲಯನ್ಸ್ ಜಿಲ್ಲೆ ೩೧೭ಅ  ಜಿಲ್ಲಾ ಗವರ್ನರ್ ಲಯನ್ ಡಾ. ನೆರಿ ಕಾರ್ನಲ್ಲಿಯೋ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಗವರ್ನರ್, ಈ ತರಬೇತಿ ಶಿಬಿರ ಈ ವರ್ಷದ ಜಿಲ್ಲೆಯ ಮೊದಲನೇ ತರಬೇತಿ ಶಿಬಿರ. ಸಂಪನ್ಮೂಲ ವ್ಯಕ್ತಿ ಲಯನ್ ಕೆ ರಮಾನಂದ ಅತ್ಯುತ್ತಮ ಅನುಭವಿ ತರಬೇತುದಾರರಾಗಿದ್ದು ತಮಗೆಲ್ಲ ಉತ್ತಮ ತರಬೇತಿ ದೊರೆಯಲಿದೆ. ಈ ವಲಯದಿಂದ ಈಗಾಗಲೇ ಎರಡು ಜಿಲ್ಲಾ ನಾಯಕರಗಳು ಜಿಲ್ಲೆಯನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿರುತ್ತಾರೆ. ಇನ್ನು ಹೆಚ್ಚಿನ ನಾಯಕರು ಈ ವಲಯದಿಂದ ಬರಲಿ ಎಂದು ಹೇಳಿದರು.ಸಂಸ್ಥೆ ಬೆಳೆಯಬೇಕು, ಬಲಿಷ್ಠಗೊಳ್ಳಬೇಕು, ಹೆಚ್ಚಿನ ಜನರಿಗೆ ಇದರ ಸೇವೆ ಸಲ್ಲಬೇಕು. ಆ ನಿಟ್ಟಿನಲ್ಲಿ ನನ್ನ ಸಂಪೂರ್ಣ ಸಹಕಾರ ನಿಮ್ಮೊಂದಿಗಿದೆ. ಎಲ್ಲರೂ ಒಟ್ಟಾಗಿ ಸಂಸ್ಥೆಯನ್ನು ಕಟ್ಟೋಣ ಬೆಳೆಸೋಣ ಎಂದರು.ಲಯನ್ ಕೆ ಎಸ್ ವೇದಮೂರ್ತಿ ಪ್ರಾಸ್ತಾವಿಕ ನುಡಿ ನುಡಿದರು. ಲಯನ್ ಆಶಾ ಮಂಜುನಾಥ್ ಪ್ರಾರ್ಥಿಸಿದರು ಲಯನ್ ಗಿರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಶಿರಾಳಕೊಪ್ಪ ತೊಗರ್ಸಿ ಉಳುವಿ ಸೊರಬದ ೫೦ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ತರಬೇತಿದಾರರಾದ ಲಯನ್ ಕೆ ರಮಾನಂದ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ  ಕೆ ಶಿವಾನಂದ್, ಮಾಜಿ ಜಿಲ್ಲಾ ಗವರ್ನರ್ ಗಳಾದ ಹೆಚ್.ಎಸ್.ಮಂಜಪ್ಪ , ಎಂ. ಕೆ. ಭಟ್, ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್ , ಜಿಲ್ಲಾ ಸದಸ್ಯತ್ವ ತಂಡದ ಸಂಯೋಜಕರಾದ ಅರುಣ್ ಕುಮಾರ್ ಹೆಗಡೆ, ಪ್ರಾಂತೀಯ ಅಧ್ಯಕ್ಷ ಕೆ.ಎಸ್ ವೇದಮೂರ್ತಿ, ಆಥಿತ್ಯವಹಿಸಿದ ಕ್ಲಬ್ ನ ಅಧ್ಯಕ್ಷರಾದ ಶಿವಯೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.