
ಸಂಜೆವಾಣಿ ವಾರ್ತೆ
ಸೊರಬ.ಜು.11: ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಯನ್ಸ್ ಸಂಸ್ಥೆಯು ಸೇವಾ ಕಾರ್ಯಗಳ ಮೂಲಕ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದು ಲಯನ್ಸ್ 317ಸಿ ನಿಕಟ ಪೂರ್ವ ಜಿಲ್ಲಾ ಗವರ್ನರ್ ಡಾ.ಎಂ.ಕೆ.ಭಟ್ ಹೇಳಿದರು. ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಆದ್ದರಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಒಂದು ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಲು ಉದ್ದೇಶಿಸಲಾಗಿದೆ ಇದೇ ತಿಂಗಳ 14 ರಂದು ನಡೆಯಲಿರುವ ಉಚಿತ ನೇತ್ರಾ ತಪಾಸಣಾ ಶಿಬಿರದಲ್ಲಿ ಡಯಾಲಿಸಿಸ್ ಯಂತ್ರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದ ಅವರು ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಲಯನ್ಸ್ ಸಂಸ್ಥೆಯು ನನಗೆ ಅಪರಿಮಿತವಾದ ಅವಕಾಶವನ್ನು ನೀಡಿ ಉನ್ನತವಾದ ಸ್ಥಾನಮಾನ ಕಲ್ಪಿಸಿದೆ ಹಾಗೂ ಈ ಸಂಸ್ಥೆಗೆ ಉತ್ತಮವಾದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.ಸಹಕಾರಿ ಧುರೀಣ ಹಾಗೂ ಮಾಜಿ ಜಿಲ್ಲಾ ಗವರ್ನರ್ ಹಚ್.ಎಸ್.ಮಂಜಪ್ಪ ಮಾತನಾಡಿ ಲಯನ್ಸ್ ಸಂಸ್ಥೆಯು ಸಮಾಜ ಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.ಈ ಸಂಸ್ಥೆಯಲ್ಲಿ ಡಾ , ಎಂ.ಕೆ.ಭಟ್ ಜಿಲ್ಲಾ ಗವರ್ನರ್ ಆಗಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಗತಿ ಸಾಧಿಸಿರುವುದು ಪ್ರಶಂಸನೀಯ ಎಂದರು.ಈ ಸಂದರ್ಭದಲ್ಲಿ ಕೆ.ಶಿವಾನಂದ.ಸುರೇಶ್.ಟಿ.ಆರ್ ಸೇರಿದಂತೆ ಮೊದಲಾದವರಿದ್ದರು.