
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.13:- ಮಾತು ಮತ್ತು ಕಿವಿ ದೋಸವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಈಸ್ಟ್ ಪ್ರಾಜೆಕ್ಟ್ ವಾಕ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಆಫ್ ನಂಜನಗೂಡು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಉಚಿತ ಶಿಬಿರ ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು ಈ ಕಾರ್ಯಕ್ರಮವು ನಗರದ ಮಾದೇಶ್ವರ ಸಭಾಂಗಣದಲ್ಲಿ ನಡೆಯಿತು ಮತ್ತು ಶಾಸಕರನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣನ್ ಗೌರವಿಸಿ ಸನ್ಮಾನಿಸಿದರು
ನಂತರ ಮಾತನಾಡಿದ ಶಾಸಕ ದರ್ಶನ್ ಧ್ರುವ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಯೊಂದು ಅಂಗಾಂಗಗಳು ಬಹಳ ಮುಖ್ಯ ಇಂತಹ ಕಾರ್ಯಕ್ರಮ ಗಳನ್ನು ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ನಡೆಸಬೇಕು ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಸಾರ್ವಜನಿಕರ ಸೇವೆ ಉತ್ತಮ ಬೆಳವಣಿಗೆ ಸಂಘ ಸಂಸ್ಥೆಗಳು ಬಳೆಯಲು ಸಹಾಯವಾಗುತ್ತದೆ
ಇದರಂತೆ ಪ್ರತಿ ಶಾಲೆಗಳಿಗೂ ತೆರಳಿ ಇಂತಹ ಶಿಬಿರಗಳನ್ನು ನಡೆಸಬೇಕು ನಾನು ಕೂಡ ಎಲ್ ಕೆ ಜಿ ಯು ಕೆ ಜಿ ಲಯನ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಇಂಥ ಶಿಬಿರಗಳನ್ನು ನಡೆಸಲಿ ಎಂದು ಶುಭ ಹಾರೈಸಿದರು
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ನನಗಿರುವ ಅವಧಿಯಲ್ಲಿ ಆದಷ್ಟು ಹೆಚ್ಚು ಹೆಚ್ಚು ಇಂತಹ ಆರೋಗ್ಯ ಶಿಬಿರಗಳನ್ನು ನಡೆಸುತ್ತೇನೆ ಸಾರ್ವಜನಿಕರ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದರು
ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ ಪ್ರತಿ ತಿಂಗಳು ಎರಡನೇ ವಾರ ಅರವಿಂದ್ ನರ್ಸರಿ ಹಾಗೂ ದ್ರುವನಾರಾಯಣ್ ಅಭಿಮಾನಿಗಳ ವತಿಯಿಂದ ಕಣ್ಣಿನ ಶಿಬಿರ ನಿರಂತರವಾಗಿ ಇರುತ್ತದೆ ಎಂದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜು ಖಜಾಂಜಿ ಉಮೇಶ್ ಪ್ರಾಂತೀಯ ಅಧ್ಯಕ್ಷರು ರವಿಕುಮಾರ್ ಮತ್ತು ಶ್ರೀಧರ್ ನಂಜುಂಡಸ್ವಾಮಿ ಅಂಬಿ ಬಸವಣ್ಣ ನಂಜುಂಡಿ ಸೇರಿದಂತೆ ಇತರರು ಇದ್ದರು