ಲಯನ್ಸ್ ಭವನದಲ್ಲಿ ಉಚಿತ ಹೃದಯ ತಪಾಸಣೆ

ದಾವಣಗೆರೆ.ನ.೧೬; ವಿದ್ಯಾನಗರದ ಲಯನ್ಸ್ ಕ್ಲಬ್ ವತಿಯಿಂದ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ಮತ್ತು ಮೆಡಿ ಹೌಸ್ ಸಂಯುಕ್ತಾಶ್ರಯದಲ್ಲಿ ಬೃಹತ್ ಹೃದಯ ತಪಾಸಣೆ  ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಅಂಶ ಪರೀಕ್ಷಾ ಶಿಬಿರ ನಡೆಸಲಾಯಿತು , ಈ ಶಿಬಿರದಲ್ಲಿ 175 ಜನ ರಕ್ತ ಪರಿಶೀಲನೆ ಮಾಡಿಸಿಕೊಂಡರು ಮತ್ತು 100 ಕ್ಕಿಂತ ಹೆಚ್ಚು  ಸಾರ್ವಜನಿಕರು ಹೃದಯ ತಪಾಸಣೆ ಮಾಡಿಸಿಕೊಂಡರು.ಹೃದಯ ತಪಾಸಣೆಯಲ್ಲಿ 18 ಜನರಿಗೆ ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಹಾಜರಾಗಲು ಸೂಚಿಸಲಾಯಿತು.ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ  ಬಿ ದಿಳ್ಯಪ್ಪ, ಮಾಜಿ ಜಿಲ್ಲಾ ಗವರ್ನರ್ ಎ ಆರ್ ಉಜ್ಜನಪ್ಪ, ಹೆಚ್ ಎನ್ ಶಿವಕುಮಾರ್ ಇವರುಗಳು ಮಾತನಾಡಿ ಹಿರಿಯ ನಾಗರೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಶಿಬಿರವನ್ನು ಕ್ಲಬ್ ನಿಂದ ಏರ್ಪಡಿಸಲಾಗಿತ್ತು ಈ ಶಿಬಿರದಲ್ಲಿ ನಿಮ್ಮಲ್ಲರ ಪಾಲುಗೊಳ್ಳುವಿಕಯಿಂದ ಯಶಸ್ವಿಯಾಗಿದೆ ಇಲ್ಲದೆ ಈ ಶಿಬಿರ ನಡೆಸಲು ಸಹಕರಿಸಿದ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರಿನ ವೈದ್ಯರು, ಸಿಬ್ಬಂದಿ ವರ್ಗದವರು ಹಾಗೂ ಮೆಡಿ ಹೌಸ್ ಸಿಬ್ಬಂದಿ ವರ್ಗದವರ ಸಹಕಾರವನ್ನು ಸ್ಮರಿಸಿ ಅವರಿಗೆ ಅಭಿನಂದನೆ ತಿಳಿಸಿದರು. ಈ ಶಿಬಿರವನ್ನು ಪ್ರಾಯೋಜಿಸಿದ ಲಯನ್ ಎಲ್ ಎಸ್ ಪ್ರಭುದೇವ್ ಅವರನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಖಜಾಂಜಿ ಶೀತಲ್, ಲಯನ್ ಮಹೇಂದ್ರ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ವಾಮದೇವಪ್ಪ ,ರೋಟರಿ ಅಧ್ಯಕ್ಷ ರೊ ಸಿ ಕೆ  ಸಿದ್ದಪ್ಪ, ಎಂ ಜಿ ಈಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು