
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.20: ನಗರದ ಐತಿಹಾಸಿಕ ಕೋಟೆಯಲ್ಲಿ ಲಯನ್ಸ್ ಕ್ಲಬ್ ನಿನ್ನೆ ಶಾಲಾ ಮಕ್ಕಳಿಂದ
`ಸ್ವಚ್ಛತೆ ಕಡೆ ನಮ್ಮ ನಡೆ’ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇದಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಆಯುಕ್ತ ಎಂ.ಎನ್.ರುದ್ರೇಶ್, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣ ಮಾಡಬೇಕು. ಸ್ಟೀಲ್ ಅಥವಾ ತಾಮ್ರ (ಕಾಪರ್) ಬಾಟಲ್‍ಗಳನ್ನು ಬಳಕೆ ಮಾಡಬೇಕು.
ಈ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದರು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವೀರೇಂದ್ರ ಪಾಟೀಲ್, `ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯಗಳ ಕುರಿತು ವಿವರಿಸಿದರಲ್ಲದೆ, ಆರೋಗ್ಯ ದೃಷ್ಟಿಯಿಂದ ಪ್ರತಿ ಹಂತದಲ್ಲೂ ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರಬೇಕೆಂದರು.ಲಯನ್ಸ್‍ಕ್ಲಬ್‍ನ ಹಿರಿಯ ಸದಸ್ಯ ಡಾ.ಅರವಿಂದ ಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಹೆಚ್ಚು ಅಪಾಯಕಾರಿ ಎಂಬುದು ಗೊತ್ತಿದ್ದರೂ ಬಳಕೆ ಕಡಿಮೆಯಾಗುತ್ತಿಲ್ಲ. ತೆಳುಪ್ಲಾಸ್ಟಿಕ್‍ನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದೆಂದರು. ಲಯನ್ಸ್‍ಕ್ಲಬ್ ಅಧ್ಯಕ್ಷ ಸಿದ್ಧರಾಮೇಶ್ವರಗೌಡ ಕರೂರು, ನಮ್ಮ ಕೋಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಚಾರಿತ್ರಿಕವಾಗಿ ಅತ್ಯಂತ ಮಹತ್ವ ಹೊಂದಿರುವ ಬಳ್ಳಾರಿ ಕೋಟೆ ಪ್ರೇಕ್ಷಣೀಯ ಸ್ಥಳ. ಇಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದಲೂ
ಪ್ರವಾಸಿಗರು ಬಂದು ವೀಕ್ಷಣೆ ಮಾಡುತ್ತಾರೆ. ಇಂತಹ ಅಪರೂದ ತಾಣದಲ್ಲಿ ಯಾವುದೇ ರೀತಿಯ ತ್ಯಾಜ್ಯ ಬಿಸಾಡದೆ ಕೋಟೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದರು. ಮೇಯರ್ ತ್ರಿವೇಣಿ, ಉಪ ಮೇಯರ್ ಜಾನಕಿ, ಪರಿಸರ ಪ್ರೇಮಿ ಡಾ.ತಿಪ್ಪಾರೆಡ್ಡಿ ಕರೂರು, ಲಯನ್ಸ್‍ಕ್ಲಬ್‍ನ ಮಾಜಿ ಜಿಲ್ಲಾ ಗವರ್ನರ್ ಗುರುರಾಜ್ ಬಹದ್ದೂರ್, ಕಾರ್ಯದರ್ಶಿ ಕಲ್ಯಾಣ
ಚಕ್ರವರ್ತಿ, ಕೋಶಾಧಿಕಾರಿ ಕಲ್ಲುಕಂಬ ಎರ್ರಿಸ್ವಾಮಿ, ಬಂಗಾರ ಪ್ರಭು, ರವಿದೇಸಾಯಿ, ಕೈಲಾಶ್ ಜೈನ್, ಚಂದ್ರಕಾಂತ್ ದೇದಿಯಾ, ಕಮಲ್‍ಕುಮಾರ್ ಜೈನ್, ಡಾ.ಚಂದ್ರಶೇಖರ ಪಾಟೀಲ್, ಎಸ್.ಜಿ.ಪಾಟೀಲ್,
ಪಂಪನಗೌಡ ಮತ್ತಿತರರಿದ್ದರು. ಶಾಲಾ ವಿದ್ಯಾರ್ಥಿಗಳು, ಲೆಕ್ಕಪರಿಶೋಧಕ ವಿದ್ಯಾರ್ಥಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಕೋಟೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.