
(ಸಂಜೆವಾಣಿ ವಾರ್ತೆ)
ವಿಜಯಪುರ :ಸೆ.5: ಲಯನ್ಸ್ ಕ್ಲಬ್ ಹೆಸರೇ ಸೂಚಿಸುವಂತೆ ಇದೊಂದು ನಿಸ್ವಾರ್ಥದ ಸೇವೆಯ ಹೆಸರಾಗಿದೆ ಎಂದು ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಗಳಾದಂತಹ ಶಂಕರ ಮಾರಿಹಾಳ ಅವರು ಹೇಳಿದರು.
ನಗರದ ಚಾಂದನಿ ಮಂಗಲ ಕಾರ್ಯಾಲಯದಲ್ಲಿ 2023-24ನೇ ಸಾಲಿನ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಕಾರಾತ್ಮಕ ವಿಮರ್ಶೆಗಳ ಚಿಂತನೆಗಳೊಂದಿಗೆ ಕಳೆದ ಹಲವಾರು ದಶಕಗಳಿಂದ ಸಮಾಜಮುಖಿ ಪರ ಕೆಲಸ, ಕಾರ್ಯಗಳು ಜಗತ್ತಿನಾದ್ಯಂತ ನಡೆಯಿಸಿಕೊಂಡು ಬರುತ್ತಿದೆ. ಒಂದು ಸಂಸ್ಥೆ, ಕ್ಲಬ್ ಇಂಥದೊಂದು ಪರೋಪಕಾರಿ ಕೆಲಸ ಮಾಡುತ್ತದೆ ಎಂದರೆ ಅದು ಲೈನ್ಸ್ ಕ್ಲಬ್‍ದಿಂದ ಮಾತ್ರ ಸಾಧ್ಯ. ಲಯನ್ಸ್ ಕ್ಲಬ್ ಪರಿವಾರದವರು ಗೈಯುತ್ತಿರುವ ಸೇವಾ ಕಾರ್ಯ ಅನನ್ಯವಾಗಿದೆ. ಸ್ಪರ್ಧಾತ್ಮಕ ಸಮಾಜದಲ್ಲಿ ಯಾವುದೇ ರೀತಿಯ ಫಲಾಪೇಕ್ಷೆಗಳಿಲ್ಲದೇ ಸೃಜನಶೀಲ, ಕ್ರಿಯಾಶೀಲ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಈ ಸಂಘಟನೆ ತನ್ನನ್ನು ತಾನು ತೋಡಗಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕಳಿಸುವ ಮೂಲಕ ಆದರ್ಶಪ್ರಾಯವಾಗಿ ಮೆರೆದಿದೆ ಕ್ಲಬ್‍ದ ಜನಪರ ಕಾರ್ಯಗಳು ನಿಜಕ್ಕೂ ಶ್ಲಾಘನೀಯವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಯಲ್ಲಮ್ಮ ಪಡೇಸೂರ ಮಾತನಾಡಿ, ಸಂಸ್ಕಾರಯುತ ಮಾನವೀಯ ಮೌಲ್ಯಧಾರಿತ ಸೇವಾ ಗುಣಗಳು ಲೈನ್ಸ್ ಕ್ಲಬ್ ಹೊಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅನ್ಯ ಬೇರೆ ಬೇರೆ ಸಂಘಗಳಿಗೆ ಇದು ಮಾದರಿಯಾಗಿದೆ ಹಾಗೂ ಲೈನ್ಸ್ ಕ್ಲಬ್ ಪರಿವಾರ ಸ್ನೇಹಪರ ಇದೆ. ತ್ಯಾಗ,ಪ್ರೀತಿ,ಅನುಕಂಪ,ಸಹನೆ,ತಾಳ್ಮೆ, ಸಹಾನುಭೂತಿ ಮೌಲ್ಯಗಳನ್ನು ಹೊಂದಿದ್ದು ಆ ಕಾರಣ ಸಮಾಜದಲ್ಲಿ ಲಯನ್ಸ್ ಕ್ಲಬ್ ಗುರುತಿಸಿಕೊಂಡು ತನ್ನದೇ ಅದಂಥ ಹಿರಿಮೆ,ಗರಿಮೆಯ ಹೆಸರು ಪಡೆದಿರುವುದು ಎಲ್ಲರಿಗೂ ತಿಳಿದಿರುವಂಥ ವಿಷಯ ಎಂದರು.
ಪದಗ್ರಹ ಅಧಿಕಾರಿಯಾಗಿ ಆಗಮಿಸಿದ ಪ್ರೊ. ಬಸವರಾಜ ಕೊಣ್ಣೂರ ಮಾತನಾಡಿ, ಸದಾ ನಯ, ವಿನಯದಿಂದ ಕ್ಲಬ್‍ದ ಸದಸ್ಯರು ಕೈಗೊಳ್ಳುವಂಥ ಕಾರ್ಯಗಳೇ ಸಮಾಜಕ್ಕೆ ಸ್ಪೂರ್ತಿಯಾಗಿದೆ. ಇಂಥ ಸಂಘಗಳು ಅಪರೂಪ, ವಿರಳ ಎನ್ನಬಹುದು. ಜನಹಿತವೇ ಕ್ಲಬ್ ದ ಮುಖ್ಯ ಉದ್ದೇಶ ಎಂಬುದು ಗಮನಿಸಬೇಕಾದ ಅಂಶ. ಬೆಳಕಿಲ್ಲದವರ, ನಿರ್ಗತಿಕರ ನೆರವಿಗೆ ಧಾವಿಸುವಂಥ ಮನುಕುಲದ ಭಾವ ಈ ಕ್ಲಬ್ ದು ಅತ್ಯೋನ್ನತ ಕಾರ್ಯವಾಗಿದೆ. ಹಲವಾರು ವರ್ಷಗಳಿಂದ ಪವಿತ್ರಮಯ ಸೇವಾ ಕೈಂಕರ್ಯಗಳನ್ನು ಮಾಡುತ್ತಿರುವ ಲೈನ್ಸ್ ಕ್ಲಬ್ ಭಾರತಅ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಉತ್ತಮ ಕಾರ್ಯದೊಂದಿಗೆ ಹೆಜ್ಜೆ ಗುರುತು ಮೂಡಿಸಿದೆ. ಲಯ್‍ನ್ಸ್ ಕ್ಲಬ್ ಬಿಜಾಪುರ ಪರಿವಾರ ಗೈಯುತ್ತಿರುವ ಸೇವಾ ಕಾರ್ಯಕ್ಕೆ ನನ್ನ ಮನಸ್ಸು ಸಂತೃಪ್ತಗೊಂಡಿದೆ ಎಂದರು.
ಈ ಸಂದರ್ಭದಲ್ಲಿ 2023-24ನೇ ಅಧ್ಯಕ್ಷರನ್ನಾಗಿ ಪ್ರೊ.ಎಮ್.ಬಿ. ರಜಪೂತ, ಕಾರ್ಯದರ್ಶಿಗಳಾಗಿ, ಫಯಾಜ ಕಲಾದಗಿ, ಖಜಾಂಚಿಯಾಗಿ ಕೆ.ಆರ್. ಲಮಾಣಿ, ಉಪಾಧ್ಯಕ್ಷರನ್ನಾಗಿ ಶಶಿಕಲಾ ಇಜೇರಿ, ಸಿ.ಎಸ್. ನಿಂಬಾಳ, ನಿರ್ದೇಶಕರುಗಳಾಗಿ ಎಸ್.ಆರ್. ಕಟ್ಟಿ, ಡಾ.ಬಾಬುರಾಜೆಂದ್ರ ನಾಯಕ, ಎಸ್.ಎಸ್. ರಾಜಮಾನೆ, ಬಿ.ಎಮ್. ಬಿರಾದಾರ, ಬಾಬು ಲಮಾಣಿ, ರಾಜೇಶ ಗಾಯಕವಾಡ, ಎ.ಎಸ್.ಕುಲಕರ್ಣಿ, ವಾಲು ಚವ್ಹಾಣ, ಎಸ್.ಎಲ್. ಗಂಗನಳ್ಳಿ, ಸಾಧೀಕ ಜಾನ್ವೇಕರ, ಡಾ.ರವಿಂದ್ರ ಮದರಕಿ, ಡಾ.ಅಶೋಕ ನಾಯಕ, ಜಯಶ್ರೀ ಲದ್ವಾ, ಪುಷ್ಪಾ ಮಹಾಂತಮಠ, ವಿದ್ಯಾ ಕೋಟ್ಟೇನವರ, ರಾಜಕುಮಾರ ಮಾಲಿ ಪಾಟೀಲ, ಎಸ್.ಎಸ್. ಗದಿಗೆಪ್ಪ ಗೌಡರ, ತಾರಾಸಿಂಗ ದೊಡಮನಿ, ಎಚ್.ಎ. ಕಲಾದಗಿ, ಮೋಹನ ಚವ್ಹಾಣ, ಸೋಮಶೇಖರ ರಾಠೋಡ, ರಾಜಶೇಖರ ಜೋಗೂರ, ಶಾಂತಾ ಉತ್ಲಾಸರ್, ಚಾಯಾ ಮಸಿಯರ, ಬೋರಮ್ಮ ಮುಗೊಳ್ಳೋಳ್ಳಿ, ಡಾ.ರವಿ ನಾಯಕ, ಶ್ರೀಯಸ್ ಮಹೇಂದ್ರಕರ, ಡಾ.ನಚಿಕೇತ ದೇಸಾಯಿ, ಸದಸ್ಯರುಗಳಾಗಿ, ಕುಬಸಿಂಗ ಜಾಧವ, ಸುಜಾತ ಮಕ್ಕಾಳ, ಸುನೀಲ ನಾಯಕ, ಬಿ.ಎಮ್. ಸಾಹೇಬ, ರೂಪಾ ಶೇದದಾಳೆ ಹಾಗೂ ನೂತನ ಸದಸ್ಯರಾಗಿ ಆರ್.ಸಿ. ಹಿರೇಮಠ, ಸಂಗನಗೌಡ ನಾಡಗೌಡ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಸಂಸ್ಥಾಪಕರಾದ ಡಾ. ಅಶೋಕಕುಮಾರ ಅವರು ನೇರವೇರಿಸಿ ವಂದಿಸಿದರು.