ಲಯನ್ಸ್ ಕ್ಲಬ್ : ಚದುರಂಗ ಆಟ- ಎನ್.ಶಿವ

ಸಿಂಧನೂರು.ಆ.೦೫- ದೇಶದ ೭೫ನೇಯ ಸ್ವತಂತ್ರದ ಅಮೃತ ಮಹೋತ್ಸವದ ಸಂಭ್ರಮದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಆ. ೧೩.೧೪ ರಂದು ನಗರದಲ್ಲಿ ಮುಕ್ತ ಚದುರಂಗ ಆಟ ಏರ್ಪಡಿಸಲಾಗಿದೆ ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್.ಶಿವ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಆಟ ಆಡಲು ಹೆಣ್ಣು ಗಂಡು ಎಂಬ ಭೇದ ಭಾವ ಇರುವದಿಲ್ಲ ಅಲ್ಲದೆ ವಯಸ್ಸಿನ ಮಿತಿ ಸಹ ಇರುವುದಿಲ್ಲ ಯಾರು ಬೇಕಾದರೂ ಆಟ ಆಡಬಹುದು ರಾಜ್ಯದಲ್ಲಿ ಇರುವ ಆಸಕ್ತ ಚೆಸ್ ಆಟಗಾರರು ಬಾಗವಹಿಸಿ ಆಟ ಆಡಬಹುದು ಎಂದರು.
ಆ.೧೩.೧೪ ರಂದು ನಗರದ ವರಶಿದ್ದಿ ವಿನಾಯಕನ ದೇವಸ್ಥಾನದಲ್ಲಿ ಚದುರಂಗ ಪಂದ್ಯಾವಳಿ ನಡೆಯಲಿದ್ದು ೨೦೦ ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಿದೆ ಆ.೧೧ ಹೆಸರು ನೊಂದಾಯಿಸಲು ಕಡೆಯ ದಿನಾಂಕವಾಗಿದೆ. ೧೦ ಸಾವಿರ ಪ್ರಥಮ ಬಹುಮಾನ ೭೫೦೦.ಎರಡನೆಯ ಬಹುಮಾನ ೫ ಸಾವಿರ ಮುರನೆಯ ಬಹುಮಾನವಾಗಿದೆ ಕಾರ್ಯಕ್ರಮ ವನ್ನು ಕಾಡಾ ಅಧ್ಯಕ್ಷರಾದ ಕೊಲ್ಲ ಶೇಷಗಿರಿರಾವ್ ಉದ್ಘಾಟಿಸುವರು ಎಂದು ತಿಳಿಸಿದರು
ಲಯನ್ಸ್ ಕ್ಲಬ್ ಕಾರ್ಯದರ್ಶಿ ಪಿ.ಶಿವರಾಮ ಕೃಷ್ಣ, ಖಜಾಂಚಿ ವಿರೇಶ,ಟಿ. ಲಯನ್ಸ್ ಮೋಹನ, ಕೆ.ಲಕ್ಷ್ಮಯ್ಯ ಶೆಟ್ಟಿ, ಕೆ.ಕೃಷ್ಣ ರೆಡ್ಡಿ, ಸೇರಿದಂತೆ ಇತರರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.