ಲಯನ್ಸ್ ಕ್ಲಬ್ ಅಧ್ಯಕ್ಷರಾಗಿಸಿದ್ಧರಾಮೇಶ್ವರಗೌಡ ಕರೂರು ಪದಗ್ರಹಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಕಪ್ಪಗಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಕಮಲ್‌ಕುಮಾರ್ ಜೈನ್ ಅವರು ನೂತನ ಅಧ್ಯಕ್ಷ  ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು
ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
 ಕಾರ್ಯದರ್ಶಿ ಕಲ್ಯಾಣ ಚರ್ಕವರ್ತಿ ಹಾಗೂ ಖಜಾಂಚಿ ಜಿ.ರ‍್ರಿಸ್ವಾಮಿ ಅವರು ಇದೇ ವೇಳೆ ಪದಗ್ರಹಣ ಮಾಡಿದ್ದಾರೆ.  ಕ್ಲಬ್‌ನ ನಿಕಟಪೂರ್ವ ಪದಾಧಿಕಾರಿಗಳಾದ ಜಿ.ಶ್ರೀನಿವಾಸ್, ಗುರುರಾಜ್
ಬಹದ್ದೂರ್, ಸಿ.ಎರಿಸ್ವಾಮಿ, ರಾಜಶೇಖರ್, ಚಂದ್ರಕಾಂತ, ಮಲ್ಲಿಕಾರ್ಜುನ ಮೊದಲಾದವರು ಇದ್ದರು.