ಲಯನ್ಸ್ ಕ್ಲಬ್ಸ್ ರಾಜ್ಯಪಾಲರಾಗಿ ಬಾಲಕೃಷ್ಣರಾಜು ಆಯ್ಕೆ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.23:- ಮೈಸೂರು ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ಸ್ ಜಿಲ್ಲೆ 255 ರ ರಾಜ್ಯಪಾಲರಾಗಿ ಶಿಕ್ಷಣ ಕ್ಷೇತ್ರದ ಅಲೈ ಬಾಲಕೃಷ್ಣರಾಜು (ಸಿರಿ ಬಾಲು) ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ದೆಹಲಿಯ ಆಗ್ರಾದ ಜೆ. ಪಿ. ಪ್ಯಾಲೇಸ್ ನಲ್ಲಿ 4 ದಿನ ನಡೆದ 16ನೇ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಮೈಸೂರು ಮತ್ತು ಚಾಮರಾಜನಗರ ರೆವೆನ್ಯೂ ಜಿಲ್ಲೆಗಳನ್ನೊಳಗೊಂಡಂತೆ ರಚಿಸಲಾಗಿರುವ ಅಲಯನ್ಸ್ ಜಿಲ್ಲೆ 255 ರ ಜಿಲ್ಲಾ ರಾಜ್ಯಪಾಲರಾಗಿ ಅಲೈ ಬಾಲಕೃಷ್ಣರಾಜು (ಸಿರಿ ಬಾಲು ) ರವರು ಸರ್ವಾನುಮತದಿಂದ ಚುನಾಯಿತರಾಗಿರುತ್ತಾರೆ.
ಬಳಿಕ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಅಧ್ಯಕ್ಷರಾದ ಅಲೈ ಎಸ್.ಬಾಲಚಂದ್ರ ಅವರಿಂದ ಪ್ರಮಾಣವಚನವನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ನಿರ್ದೇಶಕರಾದ ನಾಗರಾಜ್ ವಿ ಬೈರಿ ರವರಿಂದ ಆಯ್ಕೆ ಪತ್ರವನ್ನು ಪಡೆದರು. ಈ ಸಂದರ್ಭದಲ್ಲಿ ಜಿಲ್ಲೆಯ ಮೊದಲನೇ ಉಪ ಜಿಲ್ಲಾ ರಾಜ್ಯಪಾಲರಾಗಿ ಆಯ್ಕೆ ಆಗಿರುವಂತ ಶ್ರೀ ಅಲೈ ಡಾ. ಎಸ್. ವೆಂಕಟೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ, ಶ್ರೀ ಗಂಗಾಧರಪ್ಪ, ಜಿಲ್ಲಾ ಸಂಪುಟ ಖಜಾಂಚಿ ಅಲೈ ಕೃಷ್ಣೋಜಿ ರಾವ್, ಜಿಲ್ಲಾ ಪಿ ಆರ್ ಓ ಅಲೈ ಎನ್. ಬೆಟ್ಟೇಗೌಡರು ಉಪಸ್ಥಿತರಿದ್ದರು.