ಲಚ್ಯಾಣ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯಕ್ಕೆ ಚಾಲನೆ

ಇಂಡಿ: ಜು.20:ತಾಲೂಕಿನ ಲಚ್ಯಾಣ ಗ್ರಾಮಕ್ಕೆ ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಶಿವಾನಂದ ಮೂರಮನ ಇವರ ಮನವಿ ಮೇರೆಗೆ 25 % ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನದಲ್ಲಿ ಅಂಬೇಡ್ಕರ ಭವನದಲ್ಲಿ ಹೈಟೆಕ್ ಗ್ರಂಥಾಲಯ ಪ್ರಾರಂಭಿಸಲಾಗಿದೆ ಎಂದು ತಾ.ಪಂ ಇಓ ಸುನೀಲ ಮದ್ದೀನ ಹೇಳಿದರು.

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ತಾ.ಪಂ ಸಹಯೋಗದಲ್ಲಿ ಅಂಬೇಡ್ಕರ ಭವನದಲ್ಲಿ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.

ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಅಗತ್ಯ, ಈ ದಿಶೆಯಲ್ಲಿ ಶಿವಾನಂದ ಮೂರಮನರವರು ಗ್ರಂಥಾಲಯ ಕುರಿತು ಶ್ರಮ ವಹಿಸಿರುವದು ಶ್ಲಾಘನೀಯ ಎಂದರು.

ದಲಿತ ಸಮನ್ವಯ ಸಮಿತಿಯ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ ಮಾತನಾಡಿ ಲಚ್ಯಾಣ ಗ್ರಾಮದಲ್ಲಿ ಮೂರು ಮಾಧ್ಯಮಿಕ ಶಾಲೆ, ಒಂದು ಪದವಿಪೂರ್ವ, ಆಯ್.ಟಿ.ಆಯ್, ಒಂದು ಟಿ.ಟಿ.ಐ ಸೇರಿದಂತೆ ಇನ್ನಿತರ ವಿದ್ಯಾ ಸಂಸ್ಥೆಗಳಿದ್ದು ವಿದ್ಯಾರ್ಥಿಗಳಿಗೆ ಓದಲು ಅನುಕೂಲ ವಾಗಲಿ ಎಂದು ಗ್ರಂಥಾಲಯಕ್ಕೆ ಬೇಡಿಕೆ ಇಟ್ಟು ಸತತ ಪ್ರಯತ್ನದ ಪರಿಣಾಮ ಚಾಲನೆ ನೀಡಿದ್ದಾರೆ ಎಂದರು.

ಗ್ರಾಮೀಣ ಪಿ.ಎಸ್.ಐ ಅಶೋಕ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ. ಇಂಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡುಗಡ್ಡಿ ಮಾತನಾಡಿ ಶಿವಾನಂದ ಮೂರಮನರಂತೆ ಯುವಕರು ಗ್ರಾಮೀಣ ಮಕ್ಕಳಿಗೆ ಶಿಕ್ಷಣದಲ್ಲಿ ಸಹಕರಿಸಲು ಮತ್ತು ಸಮಾಜ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.

ಅಪ್ಪಾಶಾ ಕಾಂಬಳೆ, ಕಲ್ಲಪ್ಪ ದೊಡಮನಿ, ಸತೀಶ ಹರಿಜನ, ಸುನೀಲ ಬನಸೋಡೆ, ಸಚೀನ ಬನಸೋಡೆ, ಸಂತೋಷ ಮೇಲಿನಕೇರಿ, ಸಚಿನ ಹತ್ತಳ್ಳಿ, ಗೌತಮ ಬನಸೋಡೆ ಮತ್ತಿತರಿದ್ದರು.