ಲಚ್ಯಾಣದ ಹೆಮ್ಮೆಯ ವೀರಯೋಧ ಹುತಾತ್ಮ ರಾಜಶೇಖರ ಮುಜಗೊಂಡ ಸ್ವಗ್ರಾಮಕ್ಕೆ ವೀರಯೋಧನ ಪಾರ್ಥಿವ ಶರೀರ ಆಗಮನ

ಇಂಡಿ : ಜು.8: ಭಾರತಾಂಬೆಯ ಮಡಿಲಲ್ಲಿ ಚಿರಾಯುವಾಗಿದ್ದಾರೆ. ಇದ್ದ ಮೂವರು ಮಕ್ಕಳಲ್ಲಿ ಇಬ್ಬರನ್ನು ಸೈನ್ಯಕ್ಕೆ ಸೇರಿಸಿ ದೇಶಪ್ರೇಮ ಮೆರೆದಿದ್ದರು ತಂದೆ ಶ್ರೀ ಶರಣಪ್ಪ ಮುಜಗೊಂಡ,
2021ರಲ್ಲಿ ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್ ನಲ್ಲಿ (53 ಬ್ರಿಗೇಡ್) ಸೇವೆಯಲ್ಲಿದ್ದಾಗ ತೀವ್ರ ಹಿಮಪಾತದಿಂದ ಆರೋಗ್ಯದ ಮೇಲೆ ಪರಿಣಾಮವಾಗಿತ್ತು. ಅಂದಿನಿಂದ ಇಂದಿನವರೆಗೂ ಆರೋಗ್ಯ ಸಮಸ್ಯೆ ಕಾಡುತ್ತಲೇ ಇತ್ತು.
ಅದರ ಮಧ್ಯೆಯೇ “ನಾನು ಆರಾಮವಾಗಿದ್ದೇನೆ, ಮತ್ತೆ ದೇಶ ಸೇವೆಗೆ ತೆರಳುತ್ತೇನೆ” ಎಂದು ತಾಯಿ ಭಾರತಾಂಬೆಯ ಸೇವೆಗೆ ತೆರಳಿದ್ದ ಯೋಧ, ಇನ್ನೆಂದೂ ಬಾರದ ಲೋಕಕ್ಕೆ ಪಯಣಿಸಿ, ಸಮಸ್ತ ಭಾರತೀಯರ ಎದೆಯಲ್ಲಿ ಅಮರರಾಗಿದ್ದಾರೆ. ಇಂದು ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವ ದೊಂದಿಗೆ ಸರಕಾರಿ ಪದವಿ ಪೂರ್ವ ವಿದ್ಯಾಲಯದ ಅವರಣದಲ್ಲಿ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಭಾಗಿಯಾಗಿದರು.