ಲಘು ವಿಮಾನ ಪತನ ಪೈಲಟ್‌ಗಳು ಪಾರು

ಚಾಮರಾಜನಗರ: ಜೂ.೦೧:- ಗಡಿ ಜಿಲ್ಲೆ ಚಾಮರಾಜ ನಗರದ ಎಚ್ ಮೂಕಳ್ಳಿ ಬಳಿ ಲಘು ವಿಮಾನ ಪತನಗೊಂಡಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಅವರು ಪ್ಯಾರಚೂಟ್ ಮೂಲಕ ಪಾರಾಗಿದ್ದಾರೆ.ಇನ್ನೂ ಪತನವಾದ ವಿಮಾನವನ್ನು ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವಿಮಾನದ ಬಿಡಿ ಭಾಗಗಳು ಛಿದ್ರ ಛಿದ್ರವಾಗಿವೆ.
ಈ ವಿಮಾನ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆಗಾಗಿ ಆದೇಶಿಸಲಾಗಿದೆ.