ಲಘು ಪೋಷಕಾಂಶಗಳ ಕೊರೆತೆ ನಿವಾರಿಸಲು ಕೊಟ್ಟಿಗೆ ಗೊಬ್ಬರದ ಬಳಕೆ ಅವಶ್ಯಕ


 ಸಂಜೆವಾಣಿ ವಾರ್ತೆ
ಸಂಡೂರು :ಜು:9  ಹತ್ತಿಯ ಬೆಳೆಗೆ ಕಾಡುವ ರಸ ಹೀರುವ ಕೀಟದ ಬಾದೆ ಸೇರಿದಂತೆ ಇತರರ ರೋಗಗಳನ್ನು ತಡೆಯಲು ಹಾಗೂ ಲಘು ಪೊಷಕಾಂಶಗಳ ಕೊರತೆ ನಿವಾರಿಸಲು ಗ್ರಾಮೀಣ ಭಾಗದ ರೈತರು ರಾಸಾಯನಿಕ ಗೊಬ್ಬರ, ಔಷಧಗಳ ಜೊತೆಗೆ ಕೊಟ್ಟಿಗೆ ಗೊಬ್ಬರದ ಬಳಕೆ ಅವಶ್ಯಕವಾಗಿದೆ. ಎಂದು ಹಗರಿಯ ಕೃಷಿ ವಿಜ್ಞನ ಕೇಂದ್ರೀಯ ವಿಜ್ಞಾನಿಗಳು ಕೇಂದ್ರ ಕೀಟ ಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ಡಾ|| ಗೊವಿದಂದಪ್ಪನವರ ತುಮಟಿ ಮತ್ತು ಕೊಡಾಲು ಗ್ರಾಮಗಳ ರೈತರ ಹತ್ತಿ ಬೆಳೆಯ ಜಮೀನುಗಳಿಗೆ ಪರಿಶೀಲಿಸಿ ರೈತರೊಂದಿಗೆ ಚರ್ಚಿಸಿದರು.
ಅವರು ರೈತರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿ ಅಂಟು ಎಲೆಗಳು ಮೊಹಕ ಬಲೆಗಳು ಮತ್ತು ಗುಲಾಬಿ ಕಾಯಿ ಕೊರಕ ಕೀಟ ಬಾದೆಗಳನ್ನು ಸಂಪುರ್ಣವಾಗಿ ತಡೆಯಲು ಸಕಾಲಕ್ಕೆ ಔಷಧ, ಗೊಬ್ಬರದ ಅವಶ್ಯಕತೆ ಇದ್ದು,  ಪದ್ದತಿಯ ಅನುಸಾರ ಕಾಲಕಾಲಕ್ಕೆ ಕೃಷಿ ಅಧಿಕರಿಗಳ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನಿರಂತರವಾಗಿ ಪಡೆಯಬೇಕಾಗಿದೆ ಎಂದು ಸ್ಥಳದಲ್ಲಿದ್ದ ರೈತರಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಡಾ|| ರವಿ ಮಾತನಾಡಿ ತೊರಗರಿಬೆಳೆಯ ಹೊಸ ತಳಿಗಳಾದ ಜಿ.ಆರ್.ಬಿ. – 8, 152, ಮತ್ತು ನವಣೆ ಬೆಳೆ ಥಳಿಯಾದ ಎಚ್. -46 (ಹಗರಿ ನವಣೆ) ಈ ಬೆಳೆ ಬೆಳೆಯಲು ತೋರಣಗಲ್ಲು ಹೋಬಳಿ ಪ್ರದೇಶದ ಮಣ್ಣಿಗೆ ಸೂಕ್ತವಾಗಿದ್ದು, ರೈತರಿಗೆ ಸದರಿ ತಳಿಗಳನ್ನು ಬಿತ್ತನೆ ಮಾಡಲು ಅಧಿಕಾರಿಳು ಸೂಕ್ತ ತಿಳುವಳಿಕೆ ನೀಡುವುದರ ಜಾಗೃತಿ ಮೂಡವ ಕೆಲಸ ನಡೆಯಬೇಕಾಗಿದೆ ಎಂದು ತಿಳಿಸಿದರು. ಅಲ್ಲದೇ ತೆರಳಿ ಹತ್ತಿ ಬೆಳೆ ಇತರೆ ಮುಂಗಾರು ಬೆಳೆಗಳನ್ನು ವೀಕ್ಷಿಸಿ ಬೆಳೆಗಳ ಕುರಿತಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಹಗರಿ ಕೃಷಿ ವಿಜ್ಞಾನ ಕೇಂದ್ರದ ಹವಮಾನ ತಜ್ವ ಅಮಿತ್ ಕುಮಾರ ಸಹಾಯಕ ನಿರ್ದಶಕ ಮಂಜುನಾಥ ರೆಡ್ಡಿ ರೈತ ಸಂಪರ್ಕ ಕೇಂದ್ರದ ಜ್ಯೋತಿ ಐ. ರೆಡ್ಡಿ ಉಪಸ್ಥಿತರಿದ್ದರು.