ಲಗಾಮು ಕನ್ನಡದ ಲಗಾನ್ ಆಗಲಿ: ಉಪ್ಪಿ ಆಶಯ

* ಚಿಕ್ಕನೆಟಕುಂಟೆ ಜಿ.ರಮೇಶ್

ರಿಮೇಕ್ ಚಿತ್ರಗಳ ಮೂಲಕ ಯಶಸ್ವಿ ನಿರ್ದೇಶಕರೆನಿಸಿಕೊಂಡಿರುವ ಕೆ.ಮಾದೇಶ್, ಸ್ವಮೇಕ್ ಚಿತ್ರ ಕೈಗತ್ತಿಕೊಂಡಿದ್ದಾರೆ.‌

ಈ ಬಾರಿಯೂ ತಾರಾ ನಟರನ್ನೇ ನಂಬಿಕೊಂಡು ಅವರ ಕೈಗೆ “ಲಗಾಮು” ಕೊಟ್ಟಿದ್ದಾರೆ.

ಅಂದಹಾಗೆ ಕೆ.ಮಾದೇಶ್ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರು ” ಲಗಾಮು”. ಉಪೇಂದ್ರ ಮತ್ತು ಹರಿ ಪ್ರಿಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ, ತೆಲುಗು,ತಮಿಳು ಮತ್ತು‌ ಹಿಂದಿ ಸೇರಿ ನಾಲ್ಕು ಭಾಷೆಯಲ್ಲಿ ” ಲಗಾಮು” ಸಿದ್ದವಾಗಲಿದೆ.

ಕನ್ನಡದಲ್ಲಿ ಇತ್ತೀಚೆಗೆ ತಯಾರಾಗುವ ಬಹುತೇಕ ಸಿನಿಮಾಗಳು ಬಹುಭಾಷೆಯ ಚಿತ್ರಗಳಾಗಿವೆ.

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೋನಾ ಅರ್ಭಟ ಹೆಚ್ಚಾಗಿರುವ ನಡುವೆಯೂ ” ಲಗಾಮ್” ಅದ್ದೂರಿ ಮುಹೂರ್ತ ನಡೆ್ದಿ್ದಿ್ದಿದಿದೆ.

ಮುಹೂರ್ತಕ್ಕೆ ನಟ ಪುನೀತ್ ರಾಜ್ ಕುಮಾರ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿ್್ದ್ದದ್ದಾರೆ

ಚಿತ್ರದ ಮುಹೂರ್ತದ ಬಳಿಕ ಚಿತ್ರತಂಡ ಲಗಾಮು ಕುರಿತು ಮಾಹಿತಿ ಕೊಂಡಿತು.

ಈ ವೇಳೆ ನಿರ್ದೇಶಕ ಕೆ.ಮಾದೇಶ್ ,ಕೊರೋನಾ ಸೋಂಕಿನ ಭಯ ಮತ್ತು ಆತಂಕ ಇದ್ದೇ ಇದೆ. ಚಿತ್ರೀಕರಣದ ಸಮಯದಲ್ಲಿ ಅಗತ್ಯ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಈ ತಿಂಗಳ 26 ರಿಂದ ಚಿತ್ರೀಕರಣ ನಡೆಯಲಿದೆ. ಸರ್ಕಾರ ಒಂದು ವೇಳೆ ಲಾಕ್ ಡೌನ್ ಮಾಡಿ್ರೆದರೆ ಸರ್ಕಾರದ ನಿಯಮ‌ ಪಾಲಿಸುತ್ತೇವೆ. ಮೇ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಆರಂಭ ಮಾಡುತ್ತೇವೆ. ಲಾಕ್ ಡೌನ್ ಆಗದಿದ್ದರೆ ಈ ತಿಂಗಳ 26 ರಿಂದ ಚಿತ್ರೀಕರಣ ನಡೆಯಲಿದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎಂದರು.

ನಟ ಉಪೇಂದ್ರ ಚಿತ್ರದ ಬಗ್ಗೆ ಮಾಹಿತಿ ನೀಡಿ, ಮುಹೂರ್ತದ ದಿನದಂದೇ ಪಾಸಿಟೀವ್ ಅಟ್ಮಾಸ್ಪಿಯರ್ ಇದೆ. ಒಳ್ಳೆಯ ತಂತ್ರಜ್ಞರು, ಕಲಾವಿದರು ಇದ್ದಾರೆ.‌ ಮುಹೂರ್ತ ಸಮಾರಂಭವನ್ನು ಅದ್ದೂರಿಯಾಗಿ‌ ಮಾಡಿದ್ದಾರೆ. ಕೊರೊನಾದಿಂದಾಗಿ ಈ ರೀತಿಯ ಅದ್ದೂರಿ ಮುಹೂರ್ತ ನಡೆದು ಹೆಚ್ಚು ಕಡಿಮೆ ಎರಡು ವರ್ಷವಾಗಿತ್ತು. ಇದೇ ರೀತಿ ಚಿತ್ರವನ್ನೂ ಅದ್ದೂರಿಯಾಗಿ ಮಾಡುತ್ತಾರೆ ಎನ್ನುವ ವಿಶ್ವಾಸ ಮೂಡಿದೆ ಎಂದರು

ಲಗಾಮು ಸಂದೇಶದೊಂದಿಗೆ ಮನರಂಜನೆಯನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಕಮರ್ಷಿಯಲ್ ಚಿತ್ರ..”ಲಗಾಮು ” ಕನ್ನಡದ ಲಗಾನ್ ಆಗಲಿ ಎನ್ನುವ ವಿಶ್ವಾಸ ಹೊರಹಾಕಿದರು

ಆರ್. ಚಂದ್ರು ನಿರ್ಮಾಣ ನಿರ್ದೇಶನದ ” ಕಬ್ಜ”ಕ್ಕೆ ಸೆಟ್ ಹಾಕಿ ಚಿತ್ರೀಕರಣ ಮಾಡಬೇಕು.ಈ ಚಿತ್ರದ ಗ್ಯಾಪ್ ನಲ್ಲಿ ” ಲಗಾಮು” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಕಬ್ಜ,‌ ಪಿರಿಯಾಡಿಕಲ್ ಚಿತ್ರ.‌ಲಗಾಮು ಕಾಟೆಂಪರರಿ ಚಿತ್ರ. ಕಬ್ಜ ದಲ್ಲಿ ಲುಕ್ ಬದಲಾಯಿಸಿಕೊಳ್ಳಬೇಕು ಲಗಾಮು ನಲ್ಲಿಯೂ ಬೇರೆ ರೀತಿಯ ಪಾತ್ರವಿದೆ.ಎರಡು ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಉದ್ದೇಶವಿದೆ ಎಂದರು.

ಇತ್ತೀಚೆಗೆ ಶಿಕ್ಷಣ ಖಾಸಗೀಕರಣ ಆಗಿದೆ.ಅದರಲ್ಲೂ ರಾಜಕಾರಣ, ವ್ಯಾಪಾರೀಕರಣ ಆಗಿರುವುದರಿಂದ ಜನರು ಕೊರೋನಾ ಸೋಂಕಿನ ಪರಿಸ್ಥಿತಿ ಯಲ್ಲಿ ಸಿಲುಕುವಂತಾಗಿದೆ.

ಸರ್ಕಾರ ,ಜನ ಬೇರೆ ಅಲ್ಲ.ರಾಜಕಾರಣ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಶಿಕ್ಷಣ, ಆರೋಗ್ಯ ಚೆನ್ನಾಗಿದ್ದರೆ ದೇಶ ಚೆನ್ನಾಗಿರಲಿದೆ.ಅದಕ್ಕೆ ಆಳುವ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ನಟಿ ಹರಿಪ್ರಿಯಾ, ಐದು ವರ್ಷದ ಹಿಂದೆ ಉಪೇಂದ್ರ ಅವರೊಂದಿಗೆ ಜಾಹೀರಾತಿನಲ್ಲಿ ನಟಿಸಿದ್ದೆ.‌ಇದೀಗ ಮೊದಲ ಬಾರಿಗೆ ಅವರೊಂದಿಗೆ ನಟಿಸುತ್ತಿದ್ದೇನೆ. ಉಪೇಂದ್ರ ಅವರಿಗೆ ಜೊತೆಯಾಗಿ ಸಾಥ್ ಕೊಡುವ ಮತ್ತು ಹೀಗಿನ ಕಾಲದ ಹುಡುಗಿಯ ಪಾತ್ರ ನನ್ನದು .‌ಸುರಕ್ಷತೆಯೊಂದಿಗೆ ಚಿತ್ರೀಕರಣ ಮಾಡುತ್ತೇವೆ .ನೀವೂ ಕೂಡ ಸರಕ್ಷತೆಗೆ ಆದ್ಯತೆ ನೀಡಿ ಎಂದರು.

ಹಾಸ್ಯ ನಟ ಸಾಧುಕೋಕಿಲ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.ಈಗಾಗಲೇ ಹಾಡುಗಳ ರಾಗ ಸಂಯೋಜನೆ ನಡೆಯುತ್ತಿದೆ. ಉಪೇಂದ್ರ, ಹರಿಪ್ರಿಯಾ ಇರುವುದರಿಂದ ಕಮರ್ಷಿಯಲ್ ಜೊತೆಗೆ ಮೆಲೋಡಿ ಹಾಡು ಮಾಡುವ ಉದ್ದೇಶವಿದೆ ನಿರ್ಮಾಪಕರು ನಿರ್ದೇಶಕರು ಯಾವ ರೀತಿ ಹೇಳುತ್ತಾರೋ ಆ ರೀತಿ ಮಾಡಕಾಗುವುದು ಎಂದರು.

ಚಿತ್ರಕ್ಕೆ ಎಂ.ಆರ್ ಗೌಡ ಬಂಡವಾಳ ಹಾಕುತ್ತಿದ್ದಾರೆ.