ಲಖಪತಿ ದೀದಿ ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್ ಸಾಲಮೇಳ

ಬಸವಕಲ್ಯಾಣ:ಡಿ.20: ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡ ಲಖಪತಿ ದೀದಿ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲಮೇಳ ಕಾರ್ಯಕ್ರಮದ ಜರುಗಿತ್ತು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಸಂಜೀವಿನಿ ಮಹಿಳಾ ಒಕ್ಕೂಟಗಳ ಮುಖಾಂತರ ಸಮುದಾಯ ಬಂಡವಾಳ ನಿಧಿ ಪಡೆದು ಚಟುವಟಿಕೆ ಮಾಡುತ್ತಿದ್ದು ಇನ್ನೂ ಹೆಚ್ಚಿನ ಆರ್ಥಿಕವಾಗಿ ಸದೃಢ ಹೊಂದಲು ವಿವಿಧ ಬ್ಯಾಂಕಗಳಿಗೆ ಲಿಂಕೆಜ್ ಮಾಡಿ ಇನ್ನೂ ಹೆಚ್ಚಿನ ರಿತಿಯಿಂದ ಸಾಲ ಸೌಲಭ್ಶ ಒದಗಿಸುವದು ಈ ಕಾರ್ಯಕ್ರಮದ ಮುಖ್ಶ ಉದ್ದೇಶವಾಗಿದೆ ಎಂದು ಹೇಳಿದರು. ಇನ್ನು ಹೆಚ್ಚಿನ ಜೀನನೊಪಾಯ ಚಟುವಟಿಕೆ ಮಾಡಿ ಆರ್ಥಿಕವಾಗಿ ಸದೃಢತೆ ಹೊಂದುವಂತೆ ಸ್ವ ಸಹಾಯ ಸಂಘದ ಸದಸ್ಶರಿಗೆ ತಿಳಿಸಿದರು.
ಜಿಲ್ಲಾ ವ್ಶವಸ್ಧಾಪಕ ಸಂಜೀವಕುಮಾರ ಚೆಟ್ನಳ್ಳಿ ಮಾತನಾಡಿ, ಬ್ಶಾಂಕಗಳಿಂದ ಸಾಲ ಪಡೆಯಬೆಕಾದಲ್ಲಿ ಎನೆಲ್ಲಾ ದಾಖಲಾತಿಗಳು ತಯಾರಿಸಿಕೊಳ್ಳಬೇಕು ಮತ್ತು ಬ್ಶಾಂಕನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಮರು ಪಾವತಿ ಮಾಡಿ ಮತ್ತೆ ಹೆಚ್ಚಿನ ಸಾಲ ಪಡೆಯುವಂತೆ ಹೇಳಿದರು.
ತಾಲೂಕಾ ಕಾರ್ಯಕ್ರಮ ವ್ಶವಸ್ಡಾಪಕ ಗುರುನಾಥ ಕವಳೆ ಮಾತನಾಡಿ, ಗ್ರಾಮ ಪಂಚಾಯತ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟಗಳ ಮುಖಾಂತರ ಸಾಲ ಪಡೆಯಬೆಕಾದಲ್ಲಿ ಸಂಜೀವಿನಿ ಒಕ್ಕೂಟಗಳಿಗೆ ಸಂಘಗಳು ಸದಸ್ಶತ್ವವನ್ನು ನೊಂದಾಯಿಸಿಕೊಂಡು ಇಲಾಖೆಯಿಂದ ಬರುವಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವದರೊಂದಿಗೆ ಹೆಚ್ಚಿನ ರೀತಿಯಿಂದ ಸ್ವ ಸಹಾಯ ಸಂಘಗಳ ಸದಸ್ಶರು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸದೃಢತೆ ಹೊಂದುವಂತೆ ಕರೆ ನೀಡಿದರು.
ಕೆನರಾ ಬ್ಯಾಂಕನ ಗುರುರಾಜ, ಡಿಸಿಸಿ ಬ್ಯಾಂಕನ ಸೊಮಶೇಖರ, ಎಚ್‍ಡಿಎಫ್‍ಸಿ ಬ್ಯಾಂಕನ ಉಮೇಶ ಅವರು ಭಾಗವಹಿಸಿ ಸ್ವ ಸಹಾಯ ಸಂಘಗಳಿಗೆ ಸಾಲ ನಿಡುವ ಕುರಿತು ಅನುಸರಿಸಬೇಕಾದ ನಿಯಗಳು ದಾಖಲಾತಿಗಳು ಇತ್ಶಾದಿ ವಿಷಯಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜರೆಡ್ಡಿ, ಲಕ್ಷ್ಮಿ ಕಾಕನಾಳೆ, ಗೌರಮ್ಮ, ಸಿದ್ರಾಮಪ್ಪಾ, ಸಂತೋಷ ಮಚಕುರಿ, ಪೂಜಾ ದುರ್ಗೆ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಶರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.