ಲಖಣಾಪುರ ಶಾಲೆಯ ಮೇಲ್ಛಾವಣಿ ಕುಸಿತಶಿಕ್ಷಕರು ವಿದ್ಯಾರ್ಥಿಗಳ ಪರದಾಟ!

ಯಡ್ರಾಮಿ :ಆ.2:ಲಖಣಾಪುರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಬಾರಿ ಮೇಳೆಯ ಅಬ್ಬರಕ್ಕೆ ಮೇಲ್ಛಾವಣಿ ಕುಸಿದು ಬಿಳುತಿದ್ದರು ಯಾವ ಅಧಿಕಾರಿಗಳು ಕೂಡ ಈ ಕಡೆ ಗಮನ ಹರಿಸುತ್ತಿಲ್ಲಾ ಇದರಿಂದ ವಿದ್ಯಾರ್ಥಿಗಳಿಗೆ ಕೂಡಲು ಸರಿಯಾದ ಸ್ಥಳವಿಲದಾಗಿದೆ ಹಾಗೂ ಶಿಕ್ಷಕರಿಗೆ ಪಾಠ ಹೇಳಲು ಭಯ ವಾಗುತ್ತಿದೆ, ಯಾವ ಸಮಯದಲ್ಲಿ ಕೂಡ ಕೋಣೆಗಳು ಬೀಳಬಹುದು ಇದರಿಂದ ವಿದ್ಯಾರ್ಥಿಗಳಿಗೆ ಅನಾಹುತ ಹಾಗಬಹುದು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ನಮ್ಮ ಜೇವರ್ಗಿ ತಾಲೂಕಿನ ಲಖಣಾಪುರ ಗ್ರಾಮ ಶಾಲೆಯ ದೂರಸ್ತಿ ಬಗ್ಗೆ ಹಲವಾರು ಬಗ್ಗೆ ನಾವು ಕೂಡ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ ಇದುವರೆಗೂ ಯಾವ ಅಧಿಕಾರಿ ಕೂಡ ಈ ಕಡೆ ಕ್ಯಾರೇ ಎನ್ನುತಿಲ್ಲಾ, ಬಾರಿ ಮೆಳೆಯಿಂದ ಕೋಣೆಗಳ ಮೇಲ್ಚಾವಣಿ ತತ್ತರಿಸುತ್ತಿದ್ದಾವೆ ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಿಂದ ಅನಾಹುತ ವಾದರೆ ಇದಕ್ಕೆ ನೇರ ಹೊಣೆ ಅಧಿಕಾರಿಗಳೇ ವಾಗುತ್ತಾರೆ ಎಂದು ಗ್ರಾಮದ ಮುಖಂಡರರಾದ ದೇವು ದೊರೆ ಲಾಖಣಾಪುರವರು ಎಚ್ಚರಿಕೆ ಮೂಲಕ ಹೇಳುದ್ದಾರೆ.