ಬೆಂಗಳೂರು,ಜು.೧-ನಿಷೇದಿತ ಇ-ಸಿಗರೇಟ್ ಹಾಗೂ ಆ ಕಂಪನಿಯ ಸಿಗರೇಟ್ ಕಂಪನಿಯ ಪಾಡ್, ಬ್ಯಾಟರಿ ಮತ್ತಿತರ ಬಿಡಿಭಾಗಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಉಲ್ಲಾಳದ ಅಬ್ದುಲ್ ಹಮೀದ್ (೨೬)ಹಾಗೂ ತಲಪಾಡಿಯ ಹರ್ಫಿತ್ (೨೩)ಬಂಧಿತ ಆರೋಪಿಯಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೫ ಲಕ್ಷ ಮೌಲ್ಯದ ಇ ಸಿಗರೇಟ್ ಮತ್ತು ಅದರ ಇ-ಸಿಗರೇಟ್ ಹಾಗೂ ಆ ಕಂಪನಿಯ ಪಾಡ್, ಬ್ಯಾಟರಿ ಮತ್ತಿತರ ಬಿಡಿಭಾಗಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಎಂಪೈರ್ ಹೋಟೆಲ್ ನ ಮುಂಭಾಗದ ಸ್ಮೋಕ್ ಶಾಪ್ ಅಂಗಡಿಯಲ್ಲಿ ನಿಷೇಧಿತ ಎಲೆಕ್ಟ್ರಿಕ್ ಸಿಗರೇಟ್ ಭರ್ತಿ ಮಾಡುವ ಇತರೆ ಫಿಲಿಂಗ್ ವಸ್ತುಗಳು ಹಾಗೂ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು
ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಆರೋಪಿಗಳು ನಿಷೇಧಿತ ಇ-ಸಿಗರೇಟ್, ಇ-ಸಿಗರೇಟ್ ಲಿಕ್ಷಿಡ್ ಹಾಗೂ ಅದರ ಬಿಡಿಭಾಗಗಳನ್ನು ಹೊರ ದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ತಂದು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳ ವಿರುದ್ದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.