ಲಕ್ಷ ದೀಪೋತ್ಸವ ಕಾರ್ಯಕ್ರಮ ಮುಂದೂಡಿಕೆ: ಶೆಟ್ಟರ್


ಸವಣೂರ,ಜ.9- ಇಂದು ಸಂಜೆ 6.30ಕ್ಕೆ ನಗರದ ಬುಧವಾರ ಪೇಟೆ ಶ್ರೀ ಈಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ 29 ನೇ ವರ್ಷದ ಮಹಾ ಮಂಡಳ ಪೂಜೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ಬಾರಿಯ ಲಕ್ಷ ದೀಪೋತ್ಸವ ಹಾಗೂ ಸಭಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಶೆಟ್ಟರ ತಿಳಿಸಿದ್ದಾರೆ.
ನಗರದ ಶ್ರೀ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರ ಸಂಜೆ 6 ರಿಂದ ರಾತ್ರಿ 10 ರ ವರೆಗೆ ಸುರಿದ ಅಕಾಲಿಕ ಧಾರಾಕಾರದ ಮಳೆಯಾದ ಪರಿಣಾಮ ಹವಾಮಾನ ಇಲಾಖೆಯಿಂದ ಪಡೆದ ಮಾಹಿತಿ ಆಧಾರದ ಮೇಲೆ ಈ ಅಕಾಲಿಕ ಮಳೆ ಸತತ ಇನ್ನೂ ಎರಡು ದಿನಗಳು ಮಳೆ ಸುರಿಯಲಿರುವ ಕಾರಣದಿಂದ ಶುಕ್ರವಾರ ರಾತ್ರಿ ಸದ್ಭಕ್ತರ ಸಮಿತಿ, ಲಕ್ಷ ದೀಪೋತ್ಸವ ಸಮಿತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಸಭೆ ಕರೆದು ಸರ್ವರ ಸಲಹೆ ಆಧಾರದ ಮೇರೆಗೆ ಲಕ್ಷ ದೀಪೋತ್ಸವ ಹಾಗೂ ಸಭಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಿಗದಿಪಡಿಸಿಪಡಿಸಲಾಗುವುದು. ಆದ್ದರಿಂದ ಎಲ್ಲ ಭಕ್ತಾಧಿಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಲಕ್ಷದೀಪೋತ್ಸವ ಸಮಿತಿ ಪದಾಧಿಕಾರಿಗಳಾದ ಚನ್ನಬಸಯ್ಯ ದುರ್ಗದಮಠ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಫಕ್ಕೀರಪ್ಪಸ್ವಾಮಿ, ರಾಜು ಮುಳಗುಂದಸ್ವಾಮಿ, ಸುನೀಲಸ್ವಾಮಿ, ದ್ಯಾಮಣ್ಣ ಸ್ವಾಮಿ, ಸಂತೋಷ ಗುಡಿಸಾಗರ ಮಂಜುನಾಥ ಕೊಟಗಿ, ಉಮೇಶ ಕಲ್ಮಠ, ಪ್ರವೀಣ ಬಾಳೆಹೊಸೂರ, ರಮೇಶ ಗುಡಿಸಾಗರ, ರುದ್ರಪ್ಪ ಹರಪನಹಳ್ಳಿ, ಈರಣ್ಣ ಗುಡಿಸಾಗರ, ಲಕ್ಷ್ಮಣ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು.